ಮಹಿಳಾ ನಿಲಯದಿಂದ ಮತ್ತೊಬ್ಬ ಮಹಿಳೆ ಪರಾರಿ

ಕಲಬುರಗಿ,ಜು.4-ಇಲ್ಲಿನ ರಾಜ್ಯ ಮಹಿಳಾ ನಿಲಯದಿಂದ ಮತ್ತೊಬ್ಬ ಮಹಿಳೆ ಪರಾರಿಯಾಗಿದ್ದಾಳೆ. ಇತ್ತೀಚೆಗೆ ಮಹಿಳೆಯೊಬ್ಬಳು ನಿಲಯದ ಕಂಪೌಂಡ್ ಗೋಡೆ ಜಿಗಿದು ಪರಾರಿಯಾಗಿರುವ ಘಟನೆ ಬೆನ್ನಹಿಂದೆಯೇ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ಶಮೀನಾ ಗಂಡ ಲತೀಫ್ ಎಂಬುವರೆ ನಿಲಯದ ನಿಲಯದ ಗೇಟ್ ಹಿಂಬಾಗಿಲಿನಿಂದ ಓಡಿ ಹೋಗಿದ್ದು, ನಿಲಯದ ಸಿಬ್ಬಂದಿ ನಗರದ ಎಲ್ಲಾ ಕಡೆ ಹುಡುಕಾಡಿದರು ಮಹಿಳೆಯ ಪತ್ತೆಯಾಗಿಲ್ಲ ಎಂದು ನಿಲಯದ ಅಧೀಕ್ಷಕಿ ಅನುರಾಧಾ ಎಸ್.ಪಾಟೀಲ ಅವರು ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.
ನಿಲಯದಿಂದ ಪರಾರಿಯಾಗಿರುವ ಶಮೀನಾ ಮಾನಸಿಕವಾಗಿ ಅಸ್ವಸ್ಥಳಾಗಿದ್ದು, 6 ಅಡಿ ಎತ್ತರ, ಉದ್ದನೆಯ ಮುಖ, ಕಪ್ಪು ಕೂದಲು ಹೊಂದಿದ್ದಾಳೆ. ಹಿಂದಿ ಭಾಷೆ ಮಾತನಾಡುತ್ತಾಳೆ. ಬಿಳಿ ಬಣ್ಣದ ನೈಟಿ ಧರಿಸಿದ್ದಾಳೆ. ತಂಬಾಕು ಸೇವನೆ ಚಟದಿಂದ ಈ ಹಿಂದೆಯೂ ನಿಲಯದಿಂದ ಪರಾರಿಯಾಗಲು ಯತ್ನಿಸಿದ್ದಳು. ಸೇಡಂ ಮಹಿಳಾ ಸಾಂತ್ವನ ಕೇಂದ್ರದಿಂದ 18.6.2021 ರಂದು ಮಹಿಳಾ ನಿಲಯಕ್ಕೆ ದಾಖಲಾಗಿದ್ದಳು ಎಂದು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಆರ್.ಜಿ.ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.