ಮಹಿಳಾ ನಾಯಕತ್ವ ತರಬೇತಿಗಳ ಸಮಾರೋಪ ಸಮಾರಂಭ ಯಶಸ್ವಿಯಾಗಿ ಸಂಪನ್ನ

ಬೀದರ:ಮಾ.15:ಸಹಯೋಗ ಸ್ವಯಂ ಸೇವಾ ಸಂಸ್ಥೆ, ಬೀದರ ವತಿಯಿಂದ ಬೀದರ ತಾಲೂಕಿನ ಮನ್ನಳ್ಳಿ ಗ್ರಾಮದಲ್ಲಿ ಅಲ್ಪಸಂಖ್ಯಾತ ಮಂತ್ರಾಲಯ ಭಾರತ ಸರ್ಕಾರ ಪ್ರಾಯೋಜಿತ ನಯಿ ರೋಷನಿ ಯೋಜನೆ 2019-20 ಅಡಿಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರಿಗಾಗಿ ಹಮ್ಮಿಕೊಂಡ 7 ಬ್ಯಾಚಿನ ನಾಯಕತ್ವ ಅಭಿವೃದ್ಧಿ ತರಬೇತಿಗಳ ಸಮಾರೋಪ ಸಮಾರಂಭವು ಹಮ್ಮಿಕೊಳ್ಳಲಾಗಿತ್ತು.

ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಡಾ|| ಎನ್.ಎ. ಖಾದ್ರಿ, ಅಧ್ಯಕ್ಷರು, ಅಖಿಲ ಭಾರತ ದರ್ವೆಶ ವೆಲ್‍ಪೇರ್ ಸೂಸೈಟಿ ಮನ್ನಳ್ಳಿ ಇವರು ಭಾಗವಹಿಸಿ ಮಾತನಾಡುತ್ತ, ಮಹಿಳೆರು ಇಂದು ಎಲ್ಲಾ ರಂಗದಲ್ಲಿ ಮುಂಚೋಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಪ ಸಂಖ್ಯಾತ ಸಮುದಾಯದ ಮಹಿಳೆಯರು ಇಂದು ಕೂಡ ಮನೆ, ಸಂಸಾರ, ಸಂಸ್ಕøತಿ ನೆಪದಲ್ಲಿ ಹಿಂದಿಳಿದಿದ್ದಾರೆ. ಅದಗೋಸ್ಕರ ಅಲ್ಪ ಸಂಖ್ಯಾತ ಮಂತ್ರಾಲಯ ಭಾರತ ಸರ್ಕಾರವು ಅಲ್ಪ ಸಂಖ್ಯಾತ ಸಮುದಾಯ ಮಹಿಳೆಯರ ಅಭಿವೃದ್ಧಿ ಹಾಗೂ ಸಶಕ್ತಿಕರಣಕ್ಕಾಗಿ ನಯಿ ರೋಷನಿ ಯೋಜನೆ ರೂಪಿಸಿ, ಮಹಿಳೆಯರಲ್ಲಿ ನಾಯಕತ್ವ ಅಭಿವೃದ್ಧಿಪಡಿಸಲು ತರಬೇತಿಗಳು ಹಮ್ಮಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ತಿಳಿಸಿದ್ದರು.

ಸಹಯೋಗ ಸ್ವಯಂ ಸೇವಾ ಸಂಸ್ಥೆಯು ಮನ್ನಳ್ಳಿ ಗ್ರಾಮದಲ್ಲಿ ಕಳೆದ ನಾಲ್ಕು ವಾರದಿಂದ 175 ಅಲ್ಪ ಸಂಖ್ಯಾತ ಮಹಿಳೆಯರಿಗೆ 7 ಬ್ಯಾಚಿನಲ್ಲಿ ಮಹಿಳಾ ನಾಯಕತ್ವ ತರಬೇತಿ ನೀಡಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದರು. ತರಬೇತಿ ಪಡೆದ 175 ಅಲ್ಪ ಸಂಖ್ಯಾತ ಮಹಿಳೆಯರು ಮುಂದಿನ ದಿನದಲ್ಲಿ ಸ್ವ-ಉದ್ಯೋಗದಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಎಂಡಿ. ಶಫಿಯೋದ್ದಿನ್, ನಿರ್ದೇಶಕರು, ಸಹಯೋಗ ಸ್ವಯಂ ಸೇವಾ ಸಂಸ್ಥೆ ಬೀದರ ಇವರು ಮಾತನಾಡುತ್ತ – ಅಲ್ಪ ಸಂಖ್ಯಾತ ಮಂತ್ರಾಲಯ ಭಾರತ ಸರ್ಕಾರ ಪ್ರಾಯೋಜಿತ ನಯಿ ರೋಶನಿ ಯೋಜನೆ ಅಡಿಯಲ್ಲಿ ಮನ್ನಳ್ಳಿ ಗ್ರಾಮದಲ್ಲಿ ದಿನಾಂಕ 22-02-2021 ರಿಂದ 13-03-2021ರ ವರೆಗೆ 7 ಬ್ಯಾಚಿನಲ್ಲಿ ಒಟ್ಟು 175 ಅಲ್ಪ ಸಂಖ್ಯಾತ ಮಹಿಳೆಯರಿಗೆ ತಲಾ 25 ರಂತೆ ಒಂದು ಬ್ಯಾಚಿನಲ್ಲಿ ತರಬೇತಿಗಳು ಯಶಸ್ವಿಯಾಗಿ ಹಮ್ಮಿಕೊಂಡಿರುತ್ತೇವೆ ಎಂದು ತಿಳಿಸಿದರು.

ಇನ್ನೋರ್ವ ಮುಖ್ಯ ಅತಿಥಿಗಳಾದ ಶ್ರೀಮತಿ ಸವಿತಾ ಹಿರೇಮಠ, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತ, ಮನ್ನಳ್ಳಿ ಇವರು ಭಾಗವಹಿಸಿ ಮಾತನಾಡುತ್ತ – ಮಹಿಳೆಯರು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಎನ್.ಆರ್.ಎಲ್.ಎಮ್.) ಯೋಜನೆ ಅಡಿಯಲ್ಲಿ ಸಣ್ಣ ಸಣ್ಣ ಸ್ವ-ಉದ್ಯೋಗ ಕೈಗೊಳ್ಳಲು ಸಲಹೆ ನೀಡಿದ್ದರು. ಇನ್ನೋರ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕುಮಾರಿ ಕವಿತಾ ಹುಷಾರಿ ಅಧ್ಯಕ್ಷರು, ಸಹಯೋಗ ಸ್ವಯಂ ಸೇವಾ ಸಂಸ್ಥೆ ಇವರು ಮಾತನಾಡುತ್ತ – ಮಹಿಳೆಯರು ನಾಯಕತ್ವ ತರಬೇತಿಗಳು ಪಡೆದಿರುವುದಕ್ಕೆ ಸಂತೋಷ ವ್ಯಕ್ತಪಡಿಸುತ್ತ, ಮುಂದಿನ ದಿನಗಳಲ್ಲಿ ಮಹಿಳೆಯರು ತಮ್ಮ ನಾಯಕತ್ವ ಗುಣಗಳು ತಮ್ಮ ಕುಟುಂಬ, ಸಮುದಾಯ ಹಾಗೂ ಗ್ರಾಮದ ಅಭಿವೃದ್ಧಿಯಲ್ಲಿ ಉಪಯೋಗಿಸುವಂತೆ ಸಲಹೆ ನೀಡಿದರು. ಹಾಗೆಯೇ ಕುಟುಂಬಗಳಲ್ಲಿ ಬಾಲ್ಯ ವಿವಾಹ, ಲಿಂಗ ತಾರತಮ್ಯ ತಡೆಗಟ್ಟಿ ಹೆಣ್ಣು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಮಾನ ಅವಕಾಶಗಳು ಕಲ್ಪಿಸುವಂತೆ ಮಹಿಳೆಯರಿಗೆ ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ಅಲಾವೋದ್ದಿನ್, ಅಧ್ಯಕ್ಷರು ಗ್ರಾಮ ಪಂಚಾಯತ, ಮನ್ನಳ್ಳಿ ಇವರು ಮಾತನಾಡುತ್ತ – ತರಬೇತಿ ಪಡೆದ ಮಹಿಳೆಯರಿಗೆ ಗ್ರಾಮ ಪಂಚಾಯತನಲ್ಲಿ ಸಿಗುವ ಸೌಲಭ್ಯಗಳು ಪ್ರಮಾಣಿಕವಾಗಿ ಸಿಗುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಅತಿಥಿಗಳಾಗಿ ಶ್ರೀಮತಿ ನೌಶರಾ ಜಾಹನ, ಮುಖ್ಯ ಗುರುಗಳು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮನ್ನಳ್ಳಿ ಇವರು ಉಪಸ್ಥಿತಿರಿದ್ದರು. ಪ್ರಾರಂಭದಲ್ಲಿ ತರಬೇತಿ ಪಡೆದ ಶಿಭಿರಾರ್ಥಿಗಳಿಂದ ತರಬೇತಿಗಳ ಬಗ್ಗೆ ತಮ್ಮ ಅನಿಸಿಕೆಗಳು ವ್ಯಕ್ತಪಡಿಸಿದರು. ಮಹಿಳಾ ನಾಯಕತ್ವ ತರಬೇತಿಗಳು ಮಹಿಳೆಯರಲ್ಲಿ ನಾಯಕತ್ವ ಗುಣಗಳು ಬೆಳೆಸಿವೆ, ಮಹಿಳೆಯರ ಹಕ್ಕುಗಳು, ಕಾನೂನುರಳು, ಸರಕಾರದ ವಿವಿಧ ಯೋಜನೆಗಳು ಮಹಿಳೆಯರ ಆರೋಗ್ಯ, ಶಿಕ್ಷಣದ ಮಹತ್ವ ಮುಂತಾದ ವಿಷಯಗಳ ಬಗ್ಗೆ ಚನ್ನಾಗಿ ತಿಳಿದಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕೊನೆಯಲ್ಲಿ ತರಬೇತಿ ಪಡೆದ 175 ಮಹಿಳೆಯರಿಗೆ ಅತಿಥಿಗಣ್ಯರಿಂದ ಪ್ರಮಾಣ ಪತ್ರಗಳು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಸೂರ್ಯಕಾಂತ, ತರಬೇತಿ ಸಂಯೋಜಕರು, ಸಹಯೋಗ ಸ್ವಯಂ ಸೇವಾ ಸಂಸ್ಥೆ, ಬೀದರ ಇವರ ಸ್ವಾಗತ ಹಾಗೂ ವಂದನಾರ್ಪಣೆಯೊಂದಿಗೆ ಮುಕ್ತಾಯಗೊಳಿಸಲಾಯಿತು.