ಮಹಿಳಾ ನಾಟಕೋತ್ಸವ ಪ್ರದರ್ಶನ

ಧಾರವಾಡ ಮಾ.27: ರಂಗಾಯಣವು ಪಂ. ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿರುವ ಗಾಂಧೀಜಿ-150 ಕಸ್ತೂರಬಾ ಮಹಿಳಾ ನಾಟಕೋತ್ಸವದ ಎರಡನೇ ದಿನದ ನಾಟಕ ಪ್ರದರ್ಶನಕ್ಕೆ ರಂಗಭೂಮಿ ಕಲಾವಿದೆ ಹಾಗೂ ಜಾನಪದ ಹಾಡುಗಾರರಾದ ಲಕ್ಷ್ಮಿಬಾಯಿ ಹರಿಜನ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ರಂಗಭೂಮಿ ಕಲಾವಿದರಾರ ಶಿಲ್ಪಾ ಪಾಂಡೆ, ಸುರೇಖಾ ಹಂಪಿಹೊಳಿ, ಶೋಭಾ ಹೆಗಡೆ ಹಾಗೂ ಚಲನಚಿತ್ರ ನಟಿ ಥೆರೇಸಮ್ಮ ಡಿಸೋಜ, ಹಿರಿಯ ರಂಗಭೂಮಿ ಕಲಾವಿದೆ ಶಾಂತಾ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.
ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ್ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಮಂಜುನಾಥ ಡೊಳ್ಳಿನ ಸ್ವಾಗತಿಸಿದರು. ಜಿ ಜಿ ಹೆಗಡೆ ರಚಿಸಿ ಎಲ್ ಬಿ ಶೇಖ್ ನಿರ್ದೇಶಿಸಿರುವ ಸತ್ಯಹರಿಶ್ಚಂದ್ರ ನಾಟಕವನ್ನು ರಂಗಸೇವಾ ಕಲಾ ತಂಡದ ಕಲಾವಿದರು ಪ್ರದರ್ಶಿಸಿದರು.