ಮಹಿಳಾ ದೌರ್ಜನ್ಯ ಪ್ರಕರಣ: ಸದಸ್ಯರಿಂದ ಅಧ್ಯಕ್ಷರ ತರಾಟೆ

*ಜಿ.ಪಂ. ಸಭೆ: ಟಿಎಲ್‌ಬಿಸಿ ರೈತರಿಗೆ ಬೇಸಿಗೆ ಬೆಳೆ ನೀರು ಕಷ್ಟ
ರಾಯಚೂರು,ನ.೫- ಲಿಂಗಸೂಗೂರು ತಾಲೂಕು ದೇವರ ಭೂಪುರೂ ಗ್ರಾಮದ ಮೊರಾರ್ಜಿ ವಸತಿ ಶಾಲೆಯ ಅವ್ಯವಹಾರ ಹಾಗೂ ನರ್ಸ್ ಸಿಬ್ಬಂದಿಗೆ ಶಾಲಾ ವಾರ್ಡ್‌ನ್ ಕಿರುಕುಳ ನೀಡಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಮಹಿಳೆಯು ಮಹಿಳಾ ಆಯೋಗಕ್ಕೆ ದೂರು ನೀಡಿ ೨ ವರ್ಷ ಗತಿಸಿದರು. ಬಿಸಿಎಂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಧ್ಯಕ್ಷರನ್ನು ಜಿಲ್ಲಾ ಪಂಚಾಯತ್ ಸದಸ್ಯರು ತರಾಟೆ ತೆಗೆದುಕೊಂಡ ಘಟನೆ ಇಂದು ನಡೆಯಿತು.
ಅವರಿಂದು ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಅನುಪಾಲನ ವರದಿ ಕುರಿತು ಮಾತನಾಡುತ್ತ ಮಹಿಳಾ ದೌರ್ಜನ್ಯ gಪ್ರಕರಣಕ್ಕೆ ಸಂಬಂಧಿಸಿಂತೆ ಲಿಂಗಸೂಗೂರು ತಾಲೂಕು ದೇವರ ಭೂಪುರೂ ಗ್ರಾಮದ ಮೊರಾರ್ಜಿ ವಸತಿ ಶಾಲೆಯ ಅವ್ಯವಹಾರ ಹಾಗೂ ನರ್ಸ್ ಸಿಬ್ಬಂದಿಗೆ ಶಾಲಾ ವಾರ್ಡ್‌ನ್ ಕಿರುಕುಳ ನೀಡಿದ್ದು, ಆರೋಪಿಗಳಿಗೆ ಯಾವುದೇ ಶಿಕ್ಷೆ ಯಾಗಿಲ್ಲ. ಈಗಾಗಲೇ ೨ ಬಾರಿ ಕೆಡಿಪಿ ಸಾಮಾನ್ಯ ಸಭೆಯಲ್ಲಿ ಈ ವಿಷಯದ ಕುರಿತು ಪ್ರಸ್ತಾಪಿಸಿದರೂ ಯಾವುದೇ ಕ್ರಮಕೈಗೊಂಡಿಲ್ಲದ ಕಾರಣ ಸದಸ್ಯರು ಅಧ್ಯಕ್ಷರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರು ಒರ್ವ ಮಹಿಳೆಯಾಗಿದ್ದು, ಇನ್ನೊಬ್ಬ ಮಹಿಳೆಗೆ ಅನ್ಯಾಯ ಆಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇಂತಹ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲಿವೆ. ಇದರಿಂದ ಮಹಿಳೆಯರು ಸರ್ಕಾರಿ ಕೆಲಸಕ್ಕೆ ಬಾರದಂತೆ ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ಬಿಸಿಎಂ ಅಧಿಕಾರಿಗಳಿಗೆ ಇದರ ಮಾಹಿತಿಯೇ ಇಲ್ಲ. ಆದರೆ ಬಿಸಿಎಂ ಜಿಲ್ಲಾಧಿಕಾರಿ ಗೋನಾಳ ಅವರು ಉಡಾಫೆ ಉತ್ತರವನ್ನು ನೀಡುತ್ತಿದ್ದಾರೆ ಎಂದು ಹೇಳಿದರು.
ಪ್ರಸ್ತುತ ತುಂಗಭದ್ರ ಡ್ಯಾಂನಲ್ಲಿ ೯೮.೭೭೮ ಟಿಎಂಸಿ ನೀರಿದ್ದು, ಪ್ರತಿದಿನ ೪೯೩೪ ಕ್ಯೂಸೆಕ್ಸ್ ನೀರು ಬರುತ್ತಿದ್ದು, ೯೫೩೯ ಕ್ಯೂಸೆಕ್ಸ್ ನೀರು ಹೊರಹೋಗುತ್ತಿರುವ ಕಾರಣ ಇದೇ ರೀತಿ ಮುಂದುವರೆದರೆ ಬೇಸಿಗೆ ಬೆಳೆಗೆ ನೀರು ಸಿಗುವುದು ಕಷ್ಟಸಾಧ್ಯ ಎಂದು ಕೆಎನ್‌ಎನ್‌ಎಲ್ ಮುಖ್ಯ ಅಭಿಯಂತರ ಮಂಜಪ್ಪ ಅವರು ಸಭೆಗೆ ಮಾಹಿತಿ ನೀಡಿದರು.
ನೀರು ಹಂಚಿಕೆಯಲ್ಲಿ ಹಲವಾರು ಆಕ್ರಮಗಳು ನಡೆಯುತ್ತಿರುವ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ. ರೈತರಿಗೆ ಸರಿಯಾದ ರೀತಿಯಲ್ಲಿ ನೀರು ಹಂಚಿಕೆ ಯಾಗುತ್ತಿಲ್ಲ ಎಂದು ಸದಸ್ಯರು ಆರೋಪಿಸಿದರು.
ರೈತರಿಗೆ ಸರಿಯಾದ ಸಮಯಕ್ಕೆ ನೀರು ಒದಗಿಸಲು ನೀರಾವರಿಗೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ವಿಶೇಷ ಸಭೆ ಕರೆಯಬೇಕು. ನೀರು ಹಂಚಿಕೆಯಲ್ಲಿ ಆಗುತ್ತಿರುವ ಲೋಪದೊಷ ಹಾಗೂ ತೊಂದರೆಗಳನ್ನು ನಿವಾರಿಸಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯ ಶರಣಪ್ಪ ಸಾಹು ಹೇಳಿದರು.
ರಾಯಚೂರ ತಾಲೂಕಿಗೆ ತುಂಗಭದ್ರ ನೀರು ಸರಿಯಾಗಿ ಸಿಗುತ್ತಿಲ್ಲ. ಸರಿಯಾಗಿಇ ನೀರು ಪಡೆಯುವಲ್ಲಿ ರಾಯಚೂರು ರೈತರಿಗೆ ಅನ್ಯಾಯವಾಗಿದೆ. ಪ್ರತಿ ವರ್ಷ ಕೋಟಿ ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ಆದರೆ ನೀರು ಮಾತ್ರ ಬರುತ್ತಿಲ್ಲವೆಂದು ಇನ್ನೋರ್ವ ಜಿಲ್ಲಾ ಪಂಚಾಯತ್ ಸದಸ್ಯ ಎನ್.ಕೇಶವರೆಡ್ಡಿ ಆರೋಪಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯ ಅಮರೇಗೌಡ ಶರಣೇಗೌಡ ಮಾಲೀಪಾಟೀಲ್ ಮಾತನಾಡಿ ಈ ಬಾರಿ ಸರಿಯಾದ ಸಮಯಕ್ಕೆ ೨ಡನೇ ಬೆಳೆ ಬಿತ್ತನೆಯಾಗುತ್ತಿದ್ದು, ಸಮರ್ಪಕವಾಗಿ ನೀರು ಬಳಿಸಿಕೊಂಡು ೨ಡನೇ ಬೆಳೆಗೆ ನೀರು ನೀಡಬೇಕೆಂದು ಒತ್ತಾಯಿಸಿದರು.
ತುಂಗಾಭದ್ರ ಎಡದಂಡೆ ಕಾಲವೆಗೆ ಸಂಬಂಧಿಸಿದಂತೆ ಕೆಳಭಾಗದ ರೈತರಿಗೆ ನೀರು ಸಮರ್ಪಕವಾಗಿ ದೊರೆಯುತ್ತಿಲ್ಲ. ಈ ಭಾಗದ ರೈತರಿಗೆ ತೀವ್ರ ಅನ್ಯಾಯವಾಗುತ್ತಿದೆ. ತುಂಗಭದ್ರ ಎಡದಂಡೆ ನಾಲೆಯಲ್ಲಿ ಸಾಕಷ್ಟು ಅಕ್ರಮ ನೀರಾವರಿ ಹೆಚ್ಚಾಗಿದ್ದು, ಇದನ್ನು ತಡೆದು ಕೆಳಭಾಗದ ರೈತರಿಗೆ ನೀರೋದಗಿಸಬೇಕೆಂದು ಶರಬಪ್ಪ ಸಾಹುಕಾರ ಹೇಳಿದರು.
ಜೆಸ್ಕಾಂ ಕಂಬಗಳು ಮನೆಗಳ ಮೇಲೆ ಬದ್ದಿದ್ದು, ಇನ್ನೂ ತೆಗೆದಿಲ್ಲ. ೧ ವರ್ಷವಾದರೂ ವಿದ್ಯುತ್ ಸಮಸ್ಯೆಗಳನ್ನು ನಿವಾರಸುತ್ತಿಲ್ಲ ಹಾಗೂ ಯಾವುದೇ ಕ್ರಮಕೈಗೊಂಡಿಲ್ಲ. ನಾಳೆಯೇ ಎಡಬ್ಲೂ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಸಮಸ್ಯೆ ಪರಿಹಾರ ಮಾಡಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆದೀಮನಿ ವೀರಲಕ್ಷ್ಮೀ ಅಧಿಕಾರಿಗಳನ್ನು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.