ಮಹಿಳಾ ದೌರ್ಜನ್ಯ ತಡೆಗಟ್ಟಲು ಸಲಹೆ

ಕಲಬುರಗಿ:ಮಾ.23: ನಗರದಲ್ಲಿ ಮಾನ್ಯತಾ ಚಾರಿಟೇಬಲ್ ಟ್ರಸ್ಟ್‍ನ 3ನೇ ವಾರ್ಷಿಕೋತ್ಸವ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಿಎಸ್‍ಐ ಯಶೋಧಾ ಕಟಕೆ ಮಾತನಾಡಿ, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಬೇಕು. ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.

ನಾಗರತ್ನ ಬಸವರಾಜ ಡಿಗ್ಗಾವಿ, ಪೂರ್ಣಿಮಾ ಮಹೇಶ್ ಮೇಘಣ್ಣನವರ್, ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಟ್ರಸ್ಟ್‍ನ ಹೇಮಾ ಪುರಾಣಿಕ, ಪೂಜಾ ಮಠಪತಿ, ಲತಾ ಬಿಲಗುಂದಿ, ರೇಖಾ ಪಾಟೀಲ ಮತ್ತು ಎಲ್ಲಾ ಸದಸ್ಯರ ಉಪಸ್ಥಿತರಿದ್ದರು.

ಟ್ರಸ್ಟ್‍ನ ಅಧ್ಯಕ್ಷರಾದ ಗೌರಿ ಆರ್.ಚಿಚಕೋಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೂಜಾ ಮಠಪತಿ ಸ್ವಾಗತಿಸಿದರು, ಭಾಗ್ಯಲಕ್ಷ್ಮಿ ನಿರೂಪಿಸಿದರು, ಹೇಮಾ ವಿ.ಪುರಾಣಿಕ ವಂದನಾರ್ಪಣೆ ಮಾಡಿದರು.