ಮಹಿಳಾ ದಿನ ಲಿಂಗ ಪ್ರಾಮುಖ್ಯತೆ ಅರಿವು ಮೂಡಿಸುತ್ತದೆ: ಪ್ರೊ. ಶೈಲಾ ತೆಲ್ಲೂರ

ಇಂಡಿ:ಮಾ.15:ಇಂದು ಮಹಿಳೆ ನಾನಾಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ಮಹಿಳೆಯರು ಪುರುಷ ಸರಿಸಮಾನರಾಗಿ ನಿಂತಿದ್ದಾರೆ. ಲಿಂಗ ಸಮಾನೆಯ ಪ್ರಾಮುಖ್ಯತೆ ಕುರಿತು ಅರಿವು ಮೂಡಿಸುವುದಕ್ಕಾಗಿ ಮಹಿಳಾ ದಿನಾಚರಣೆ ಸಹಕಾರಿಯಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಶ್ರೀಮತಿ ಶೈಲಜಾ ತೆಲ್ಲೂರ ಹೇಳಿದರು.

ಬಸವರಾಜೇಂದ್ರ ಮಂಗಲ ಕಾರ್ಯಾಲಯದಲ್ಲಿ ಸತ್ಯೆಸಾಯಿ ಮತ್ತು ಕದಳಿ ವೇದಿಕೆ ಹಮ್ಮಿಕೊಂಡ ಮಹಿಳಾ ದಿನಾಚರಣೆ ಕಾರ್ಯಕ್ರಮದ ಉಪನ್ಯಾಸ ನೀಡಿ ಮಾತನಾಡಿದ ಅವರು ಇಂದಿನ ಅಧುನಿಕ ಜಗತ್ತಿನಲ್ಲಿ ಹೆಣ್ಣು ಅಬಲೆಯಲ್ಲ ಅವಳೂ ಪುರುಷನ ಸರಿಸಮಾನವಾಗಿ ಕೆಲಸ ಮಾಡುವ ಮೂಲಕ ಸಮಾಜದ ಮುಖ್ಯವಾಹಿನಿಯಾಗಿದ್ದಾರೆ. ಹೆಣ್ಣು ತಾಯಿಯಾಗಿ ಮಮತೆಯ ಸಹೋದರಿಯಾಗಿ ,ಹೆಂಡತಿಯಾಗಿ ತನ್ನ ಕುಟುಂಬಕ್ಕೆ ಕಣ್ಣಾಗಿ ಜವಾಬ್ದಾರಿಯನ್ನು ನಿರ್ವಹಿಸುವುದಲ್ಲದೆ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸುತ್ತಾಳೆ, ಮಹಾಭಾರತದಲ್ಲಿ ಬರುವ ಸ್ತ್ರೀ ಗಾಂಧಾರಿ ತನ್ನ ಮಕ್ಕಳಿಗೆ ಒಳ್ಳೇಯ ಸಂಸ್ಕಾರ ನೀಡದೆ ದುರಂಹಕಾರದಿಂದ ಬೆಳೆಸಿರುವದರಿಂದ ಇಡೀ ರಾಜ್ಯ ಹಾಳಾಯಿತು ಜನನಿ ಜನ್ಮ ಭೂಮಿಸೇ ಸ್ವರ್ಗಾರಪೀ ಗರಿಯಸೀ ಜನನಿ ಜನ್ಮ ಭೂಮಿ ಸ್ವರ್ಗಕ್ಕಿಂತ ಶ್ರೇಷ್ಠ ಎಂಬುದು ಹೆಣ್ಣನ್ನು ಮರೆಯಬಾರದು.

ಕಾರ್ಯಕ್ರಮದ ಅಧ್ಯಕ್ಷತೆ ಪಾರ್ವತಿ ಸುರಪೂರ ವಹಿಸಿದರು.ಕದಳಿ ವೇದಿಕೆ ಅಧ್ಯಕ್ಷ ಗಂಗಾಬಾಯಿ ಗಲಗಲಿ, ಶಾಮಲಾ ಬಗಲಿ, ವಿಜಯಲಕ್ಷ್ಮೀ ದೇಸಾಯಿ, ವಂದನಾ. ದ್ರಾಕ್ಷಯಣಿ,ಗೀತಾ, ಮಲ್ಲಮ್ಮ ,ಪದ್ಮಾ, ಸಂಗೀತಾ,ಸುಮಂಗಲಾ, ನಿರ್ಮಲಾ ,ಚಂದ್ರಕಲಾ, ಮಾನಂದಾ, ಸುಮಾ, ಸುಜ್ಞಾನಿ, ಜ್ಯೋತಿ, ನಿರ್ಮಲಾ ಬುರಕುಲೆ, ಸುಜ್ಞಾನಿ ಸೇರಿದಂತೆ ಅನೇಕ ಮಹಿಳೆಯರು ಇದ್ದರು.

ಇದೆ ಸಂದರ್ಬದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಮಹಿಳೆಯರಾದ ಲಲೀತಾ ದಶವಂತ, ವಿಜಯ ದೇಸಾಯಿ ಇವರಿಗೆ ಸನ್ಮಾನಿಸಲಾಯಿತು.