ಮಹಿಳಾ ದಿನಾಚರಣೆ


ಲಕ್ಷ್ಮೇಶ್ವರ,ಮಾ.29: ಮಹಿಳೆಯರು ಕೀಳರಿಮೆ ಬದಿಗಿಟ್ಟು ಸಾಧನೆ ಮಾಡಲು ಮುಂದಾಗಬೇಕು. ಹೆಣ್ಣು ಮನಸ್ಸು ಮಾಡಿದರೆ ಯಾವುದೇ ಕಠಿಣ ಕೆಲಸವನ್ನಾದರೂ ಮಾಡಲು ಸಾಧ್ಯ' ಎಂದು ಮಹಿಳಾ ಸಾಹಿತಿ ಲಲಿತಕ್ಕ ಕೆರಿಮನಿ ಹೇಳಿದರು. ಇಲ್ಲಿನ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಮಂಗಳವಾರ ತಾಲ್ಲೂಕಾ ಮಹಿಳಾ ಕದಳಿ ವೇದಿಕೆ, ಶರಣ ಸಾಹಿತ್ಯ ಪರಿಷತ್ತ ವತಿಯಿಂದ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಸಮಾರಂಭದ ಅಧ್ಯಕ್ಷತೆಯಿಂದ ಅವರು ಮಾತನಾಡಿದರು. ವಚನ ಸಾಹಿತ್ಯಕ್ಕೆ ಮಹಿಳೆಯರು ನೀಡಿದ ಕೊಡುಗೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಆಧ್ಯಾತ್ಮದ ಶಿಖರವನ್ನೇರಿದ ಅಕ್ಕಮಹಾದೇವಿ ಎಲ್ಲ ಮಹಿಳೆಯರಿಗೆ ಮಾದರಿ ಆಗಲಿ’ ಎಂದರು.
ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಲ್.ಎಸ್. ಅರಳಹಳ್ಳಿ ಮಾತನಾಡಿರು.
ಚೆನ್ನಮ್ಮ ರಿತ್ತಿ ಕಾರ್ಯಕ್ರಮ ಉದ್ಘಾಟಿಸಿದರು. ಶಕುಂತಲಾ ತಟ್ಟಿ, ಕುಸುಮಾ ಮಲ್ಲಾಡದ, ಪುರಸಭೆ ಅಧ್ಯಕ್ಷೆ ಜಯಕ್ಕ ಕಳ್ಳಿ, ನಿರ್ಮಲಾ ಅರಳಿ, ಕವಿತಾ ಅರಳಹಳ್ಳಿ, ಪಾರ್ವತಿ ಕಳ್ಳಿಮಠ, ಆರುಂಧತಿ ಬಿಂಕದಕಟ್ಟಿ ಇದ್ದರು. ಇದೇ ಸಂದರ್ಭದಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕøತರಾದ ಎಚ್.ಡಿ. ನಿಂಗರೆಡ್ಡಿ, ಮುಂಬೈನ ಗ್ಲೋಬಲ್ ಇನ್ಸಿಟ್ಯೂಟ್‍ನಿಂದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಎಲ್.ಎಸ್. ಆರಳಹಳ್ಳಿ, ಉತ್ತಮ ಎನ್‍ಎಸ್‍ಎಸ್ ಸೇವಾ ಪ್ರಶಸ್ತಿ ಪುರಸ್ಕøತರಾದ ಅಗಡಿ ಎಂಜಿನಿಯರಿಂಗ್ ಕಾಲೇಜಿನ ಸೋಮಶೇಖರ ಕೆರಿಮನಿ ಮತ್ತು ಆಧ್ಯಾತ್ಮಿಕ ಚಿಂತಕಿ ಚೆನ್ನಮ್ಮ ರಿತ್ತಿ ಅವರನ್ನು ಸನ್ಮಾನಿಸಲಾಯಿತು. ರತ್ನಾ ಕರ್ಕಿ ನಿರೂಪಿಸಿದರು. ಗೌರಿ ಸಂಗಪ್ಪಶೆಟ್ಟರ ವಂದಿಸಿದರು.