ಮಹಿಳಾ ದಿನಾಚರಣೆ ಹಾಗೂ ಆಶಾ ಕಾರ್ಯಕರ್ತೆಯರ ಸನ್ಮಾನ

ಬೀದರ:ಏ.5:ಕಸಾಪ ಮಹಿಳಾ ಘಟಕ, ಸಿರಿಗನ್ನಡ ವೇದಿಕೆ ಹಾಗೂ ರೂಪಾ ಕಲೆ ಸಾಹಿತ್ಯ ಹಾಗೂ ಸಾಂಸ್ಕøತಿಕ ಟ್ರಸ್ಟ್. ವತಿಯಿಂದ ಮಹಿಳಾ ದಿನಾಚರಣೆ ಹಾಗೂ ಆಶಾ ಕಾರ್ಯಕರ್ತೆಯರ ಸನ್ಮಾನ ಕಾರ್ಯಕ್ರಮ ಬೀದರನ ಕುಂಬಾರವಾಡ ಆರೋಗ್ಯ ಕೇಂದ್ರ ನೆರವೇರಿಸಲಾಯಿತು.
ಮಹಿಳೆಯರನ್ನು ಮಹಿಳೆಯರು ಗೌರವಿಸಬೇಕು ಸಹಕರಿಸಬೇಕು ಹೆಣ್ಣು ಹೆಣ್ಣಿಗೆ ಶತ್ರು ಎನ್ನುವುದನ್ನು ಮರೆಯಬೇಕು ಆಗ ಮಾತ್ರ ಹೆಣ್ಣು ಮಕ್ಕಳು ಮುಂದೆ ಬರಲು ಸಾಧ್ಯ ಎಂದು ಅಧ್ಯಕ್ಷತೆ ವಹಿಸಿರುವ ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ರೂಪ ಪಾಟೀಲ್ ತಿಳಿಸಿದರು. .ಮದುವೆಯಾದ ಹೆಣ್ಣು ಮಕ್ಕಳು ಕೂಡ ತಮ್ಮ ಇಚ್ಛೆ ಆಕಾಂಕ್ಷೆಗಳನ್ನು ನೆರವೇರಿಸಿ ತಮ್ಮ ಕನಸುಗಳನ್ನು ಸಾಕಾರ ಗೊಳಿಸಿ ಏನು ಬೇಕಾದರೂ ಸಾಧನೆ ಮಾಡಬಲ್ಲರು ಎಂಬುದನ್ನು ಹೇಳಿ ಎಲ್ಲರಿಗೂ ಪೆÇ್ರೀತ್ಸಾಹ ನೀಡಿದರು
ಅದೇ ರೀತಿ ಉದ್ಘಾಟನೆಯನ್ನು ನೆರವೇರಿಸಿದ ಡಾಕ್ಟರ್ ವೈಶಾಲಿ ಮಾತನಾಡಿ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ ಮಾಡಿದ್ದು ಅತ್ಯಂತ ಖುಷಿಯ ಸಂಗತಿ ಈ ರೀತಿಯ ಕಾರ್ಯಕ್ರಮಗಳು ನಡೆಯುತ್ತಿರಬೇಕು ಎಂದು ಸಂತಸ ಪಟ್ಟರು,ಅದೇ ರೀತಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸುವರ್ಣ ದನ್ನೂರ್ ಅವರು ಮಾತನಾಡಿ ಹೆಣ್ಣುಮಕ್ಕಳು ಯಾರಿಗೂ ಕಮ್ಮಿ ಇಲ್ಲ ಅವರ ಕನಸನ್ನು ಸಾಕಾರಗೊಳಿಸಲು ಪ್ರಯತ್ನಿಸಿ ಎಂದು ಹೇಳಿದರು.
ಇನ್ನೋರ್ವ ಅತಿಥಿಗಳಾದ ವಿದ್ಯಾವತಿ ಬಲ್ಲುರ್ ಅವ್ರು ಮಾತನಾಡಿ ಹೆಣ್ಣು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡ್ತಾ ಇದಾಳೆ ಅವಳು ಅಬಲೆಯಲ್ಲ ಸಬಲೆ ಎಂದು ಹೇಳಿದರು. ಆಶಯ ನುಡಿ ನುಡಿದ ಶ್ರೇಯಾ ಮಹಿಂದ್ರಕರ್ ಹೆಣ್ಣು ಮಕ್ಕಳ ಸಹನಾ ಶಕ್ತಿ ಅಗಾಧವಾದದ್ದು ಎಲ್ಲ ಮಹಿಳೆಯರೂ ಗಟ್ಟಿಗರಾಗಬೇಕು ಎಂದು ಹೇಳಿದರು
ಸ್ವರೂಪರಾಣಿ ನಾಗುರೆ ನಿರೂಪಣೆ ಮಾಡಿದರು, ದೀಪಿಕಾ ರಗಟೆ ಸ್ವಾಗತ ಕೋರಿದರು, ಸುಜಾತಾ ಹೊಸಮನಿ ಅವರು ವಂದನಾರ್ಪಣೆ ಸಲ್ಲಿಸಿದರು .
ಸ್ಪೂರ್ತಿ ದನ್ನೂರ ಹಾಗೂ ಕಸಾಪ ಮಹಿಳಾ ಘಟಕದ ಸದಸ್ಯೆಯರು ಹಾಜರಿದ್ದರು.
19 ಜನ ಆಶಾ ಕಾರ್ಯಕರ್ತೆಯರಿಗೆ ಸನ್ಮಾನಿಸಲಾಯಿತು ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಒಟ್ಟಿನಲ್ಲಿ ಒಂದು ಅಚ್ಚುಕಟ್ಟಾದ ಕಾರ್ಯಕ್ರಮ ಮೂಡಿ ಬಂತು.