ಮಹಿಳಾ ದಿನಾಚರಣೆ : ಸಾಧನೆಯ ಸಾಧಕಿ ಪ್ರಶಸ್ತಿ ಪುರಸ್ಕಾರ ಸಮಾರಂಭ

ರಾಯಚೂರು.ಮಾ.೧೪- ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಶ್ರೀನಿವಾಸ ನಾಯಕ ಫೌಂಡೇಷನ್ ಇವರ ಸಹಯೋಗದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸಾಧನೆಯ ಸಾಧಕಿ ಪ್ರಶಸ್ತಿ ಪುರಸ್ಕಾರ ಸಮಾರಂಭದ ಉದ್ಘಾಟನೆಯನ್ನು ರೈತ ಮುಖಂಡರಾದ ದಿದಿಗಿ ಅಮಿದ್ ಪಾಷಾ ಅವರು ಉದ್ಘಾಟಿಸಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ರಾಯಚೂರು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ರೂಪಾ ಶ್ರೀನಿವಾಸ ನಾಯಕ ವಹಿಸಿದ್ದರು. ಮುಖ್ಯಾತಿಥಿಯಾಗಿ ಕೃಷಿ ವಿಶ್ವವಿದ್ಯಾಲಯದ ಹೆಚ್‌ಓಡಿ ಡಾ.ಜಾಗೃತಿ ದೇಶಮಾನ್ಯ, ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯದ ಕಾರ್ಯದರ್ಶಿ ಉಮಾ, ರಿಮ್ಸ್ ಆಸ್ಪತ್ರೆಯ ಮಕ್ಕಳ ತಜ್ಞರು ಡಾ.ನಸೀಮಾ ಭಾನು, ದೇವದಾಸಿ ಪುನರ್ವಸತಿ ಯೋಜನಾ ಅಧಿಕಾರಿ ಗೋಪಾಲ ನಾಯಕ, ನೀರಾವರಿ ಇಲಾಖೆಯ ಸಹಾಯಕ ಅಭಿಯಂತರ ಭವನಾ ಪಾಟೀಲ್, ಕೊಡೆಕಲ್ ಉಪನ್ಯಾಸಕ ಶಾರದಾ ಶಿವಂಗಿ, ಅರ್ಚನಾ ಯಾದವ, ಡಿ.ನಾಗವೇಣಿ ಎಸ್.ಪಾಟೀಲ್ ತುರ್ವಿಹಾಳ, ಕೆಆರ್‌ಆರ್‌ಎಸ್ ರಾಜ್ಯ ಸಂಚಾಲಕಿ ಉಮಾದೇವಿ ನಾಯಕ, ಸಿಐಟಿಯು ಮಹಿಳಾ ಘಟಕದ ಅಧ್ಯಕ್ಷ ಹೆಚ್.ಪದ್ಮಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಖಂಡಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದರ ಮೂಲಕ ಜೀವಾವಧಿ ಶಿಕ್ಷೆ ಮತ್ತು ಕಠಿಣ ಕಾನೂನು ಶೀಘ್ರವೇ ಜಾರಿಗೊಳಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಶ್ರೀನಿವಾಸ ನಾಯಕ ಫೌಂಡೇಷನ್ ವತಿಯಿಂದ ಸಹಿ ಸಂಗ್ರಹ ಅಭಿಯಾನ ಮೂಲಕ ಮನವಿ ಸಲ್ಲಿಸಿ ಒತ್ತಾಯಿಸಿದರು.