ಮಹಿಳಾ ದಿನಾಚರಣೆ – ಮಹಿಳೆಯರನ್ನು ಸಮಾನತೆಯಿಂದ ಕಾಣಿ

ದೇವದುರ್ಗ.ಮಾ.೨೫-ಗಂಡು, ಹೆಣ್ಣು, ಎಂಬ ಬೇಧಭಾವ ಮಾಡದೇ ಎಲ್ಲರನ್ನೂ ಸಮಾನತೆಯಿಂದ ಕಾಣಬೇಕು. ಸ್ವಾತಂತ್ರ್ಯ ನಂತರ ಎಲ್ಲಾ ರಂಗದಲ್ಲಿಯೂ ಮಹಿಳೆಯರು ಮೇಲುಗೈ ಸಾಧಿಸುತ್ತಿದ್ದಾರೆ ಎಂದು ತಾ.ಪಂ. ಕಾರ್‍ಯನಿರ್ವಾಹಕ ಅಧಿಕಾರಿ ಪಂಪಾಪತಿ ಹಿರೇಮಠ ಹೇಳಿದರು.
ಪಟ್ಟಣದ ಬಿಎಚ್. ಕಲ್ಯಾಣ ಮಂಟಪದಲ್ಲಿ ಶಿಶು ಅಭಿವೃದ್ಧಿ ಇಲಾಖೆಯಿಂದ ಹಮ್ಮಿಕೊಂಡಿದ್ದ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್‍ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜ್ಯೋತಿ ಭಾಯಿ ಪುಲೆ ಅಂತಹ ಮಹಿಳೆ ಸಾಧನೆ ಇಡೀ ಜಗತ್ತೆ ಗುಣಗಾನ ಮಾಡುತ್ತಿದೆ.
ಮಹಾನೀಯರ ಆದರ್ಶ ಗುಣಗಳು ಜೀವಕ್ಕೆ ಆಳವಡಿಸಿಕೊಂಡಾಗ ಸಾಧನೆಯ ದಾರಿ ಯಾಶಸ್ವಿ ಕಾಣಲು ಸಾಧ್ಯ ಎಂದರು. ಸ್ವಾತಂತ್ರ್ಯ ಪೂರ್ಣದಲ್ಲಿ ಮಹಿಳೆಯರ ಮೇಲೆ ಶೋಷಣೆಗಳು ನಡೆಯುತ್ತಿದ್ದವು. ಸ್ವಾತಂತ್ರ್ಯ ನಂತರ ಎಲ್ಲಾ ರಂಗದಲ್ಲಿ ಮಹಿಳೆಯರು ಸಾಧನೆ ಮಾಡಲು ಮುಂದೆ ಬರುತ್ತಿದ್ದಾರೆ. ರಾಜಕೀಯ, ಉನ್ನತ ಹುದ್ದೆ ಸೇರಿ ಇತರೆ ಹುದ್ದೆಗಳಲ್ಲಿ ಮಹಿಳೆಯರೇ ಮೂಂಚೂಣಿಯಲ್ಲಿದ್ದಾರೆ. ಈಹಿಂದೆ ಹೆಣ್ಣು ಜನಿಸಿದರೇ ನೋಡುವ ಕಾಲವೇ ಬೇರಾಗಿತ್ತು.
ಬದಲಾದ ಕಾಲಘಟದಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಲಭ್ಯಿಸಿವೆ. ಮಹಿಳೆಯರ ಸಬಲೀಕರಣಕ್ಕೆ ರಾಜ್ಯ ಮತ್ತು ಕೇಂದ್ರ ಸರಕಾರ ಅನೇಕ ಯೋಜನೆಗಳು ಜಾರಿಗೆ ತರುವ ಮೂಲಕ ಸ್ವಾಲಂಭಿಗಳಾಗಿ ಬದುಕು ಸಾಗಿಸಲು ಶ್ರಮಿಸುತ್ತಿದೆ ಎಂದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಾತನಾಡಿ, ಬಸ್, ಖಾಸಗಿ ವಾಹನಗಳ ಸೌಲಭ್ಯಗಳು ವಂಚಿತ ಗ್ರಾಮಗಳಿಗೆ ಅಂಗನವಾಡಿ ಕಾರ್‍ಯಕರ್ತೆಯರು ಹೋಗಿ ಮಕ್ಕಳಿಗೆ ಪಾಠ ಹೇಳಿದ್ದಾರೆ. ಮಹಿಳೆಯರಲ್ಲಿ ಇರುವಂತ ದೈರ್ಯ ಮೆಚ್ಚುವಂತಾಗಿದೆ ಎಂದು ಹೇಳಿದರು.
ಪುರುಷರಗಿಂತ ಮಹಿಳೆಯರು ಎನ್ನು ಕಡಿಮೆಯಿಲ್ಲ ಎಂಬ ಮಾತಿನಂತೆ ಎಲ್ಲಾ ರಂಗದಲ್ಲಿ ಸಾಧನೆಯ ಮೂಂಚೂಣಿಯಲ್ಲಿದ್ದಾರೆ ಎಂದರು. ಲಿಂಗದಹಳ್ಳಿ ಮಹಿಳೆಯರ ಭಜನ ಕಲಾತಂಡ ಹಾಡುವ ಮೂಲಕ ಕಾರ್‍ಯಕ್ರಮ ಗಮನಸೆಳೆದರು. ಡಾ.ನಿರ್ಮಲ ಬಸರಾಜರೆಡ್ಡಿ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಉಪತಹಶೀಲ್ದಾರ ಶ್ರೀನಿವಾಸ ಚಾಪಲ್, ಡಾ.ಬನದೇಶ್ವರ, ಡಾ.ಎಸ್.ಪ್ರಿಯಾಂಕ್, ರಂಗಮ್ಮ ಅನ್ವರ, ಬಸ್ಸಣ್ಣ ನಾಯಕ, ಬಸನಗೌಡ ದೇಸಾಯಿ, ಎಸ್.ಎಸ್. ಘಂಟಿ, ಪಿಎಸ್‌ಐ ಮಂಗಮ್ಮ, ನರಸಿಂಗ್‌ರಾವ್ ಸರ್ಕಿಲ್, ಬಸವರಾಜ ಬ್ಯಾಗವಾಟ, ನಾಗರತ್ನ, ಗಂಗಮ್ಮ, ಲತಾ ಗಂಗಾವತಿ, ಶಾಂತಭಾಯಿ ರಾಠೋಡ್, ಲಕ್ಷ್ಮೀರಾಠೋಡ್, ಮೋನಮ್ಮ, ವೀರಮ್ಮ ಅಗಳಕೇರ್, ವೀರಮ್ಮ, ಶರಣಮ್ಮ, ಶ್ರೀದೇವಿ ಸೇರಿ ಇತರರು ಇದ್ದರು.