ಮಹಿಳಾ ದಿನಾಚರಣೆ ಪ್ರಯುಕ್ತ ಸನ್ಮಾನ

ಹಿರಿಯೂರು. ಮಾ. 14- ಅಖಿಲ ಭಾರತ ವೀರಶೈವ ಮಹಾಸಭಾ  ಬೆಂಗಳೂರು, ತಾಲೂಕು ವೀರಶೈವ ಮಹಿಳಾ ಘಟಕ ಹಿರಿಯೂರು, ಹಾಗೂ ಇನ್ನರ್ವೀಲ್ ಕ್ಲಬ್ ಹಿರಿಯೂರು ಇವರ  ವತಿಯಿಂದ  ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಿರಿಯೂರಿನ  ಡಿವೈಎಸ್ಪಿ ಚೈತ್ರ ಎಸ್ ಇವರಿಗೆ ಹಾಗೂ  ಮಹಿಳಾ ಪೊಲೀಸ್ ಎನ್ ರೇಖಾ ಇವರಿಗೆ  ಆತ್ಮೀಯವಾಗಿ ಸನ್ಮಾನಿಸಲಾಯಿತು. ತಾಲೂಕು ವೀರಶೈವ ಮಹಿಳಾ ಘಟಕದ ಅಧ್ಯಕ್ಷರಾದ ಶಶಿಕಲಾ ರವಿಶಂಕರ್, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಸರ್ವ ಮಂಗಳ ರಮೇಶ್, ಕಾರ್ಯದರ್ಶಿ ತ್ರಿವೇಣಿ ಶಶಿಧರ್,  ಸದಸ್ಯರಾದ ಸ್ವಪ್ನ ಸತೀಶ್, ಹರಿತಾ, ಸ್ವರ್ಣ, ರಚನಾ, ಶೃತಿ, ಶಾಮಲಾ, ತ್ರಿವೇಣಿ ಮತ್ತಿತರರು ಪಾಲ್ಗೊಂಡಿದ್ದರು.