ಮಹಿಳಾ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗದೆ ಪ್ರತಿ ದಿನ ಆಚರಣೆಯಾಗಬೇಕು

ಕಲಬುರಗಿ:ಮಾ.15:ಪುರುಷರು ಮತ್ತು ಮಹಿಳಯರಿಗೆ ಸಮಾನ ವೇತನ ಸಿಗಬೇಕು, ಬ್ರೂಣ ಹತ್ಯೆ ಹಾಗೂ ಬಾಲ್ಯವಿವಾಹ ಮಾಡುವುದು ಅಪರಾಧ ಹಾಗೂ ಶಿಕ್ಷರರ್ಹವಾಗಿದೆ. ಬಾಲ್ಯವಿವಾಹ ತಡೆಗಟ್ಟಲು 1098 ಮಕ್ಕಳ ಸಹಾಯವಣಿಗೆ ಕರೆಮಾಡಬೇಕು ಮಹಿಳಿಯರ ಮೇಲೆ ಆಗುವಂತಹ ದೌರ್ಜನ್ಯವನ್ನು ತಡೆಯಬೇಕು ಎಂದು ಶ್ರೀಮತಿ ಗೀತಾ ಸಜ್ಜನಾ ಉಚ್ಚ ನ್ಯಾಯಾಲಯದ ವಕಿಲರು ತಿಳಿಸಿದರು

ಕಲಬುರಗಿ ನಗರದ ಕನ್ನಡ ಭವನದಲ್ಲಿ ಸೇವಾ ಸಂಗಮ ಸಮಾಜ ಸೇವಾ ಸಂಸ್ಥೆ, ಕರ್ನಾಟಕ ಗೃಹ ಕಾರ್ಮಿಕರ ಒಕ್ಕೂಟ ಹಾಗೂ ಸ್ಲಂ ಜನಾಂದೋಲನ ಜಿಲ್ಲಾ ಘಟಕ ಕಲಬುರಗಿ ಸಂಹಯೋಗದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಮಹಿಳೆ ಎಂದರೇ ಪರಿಪೂರ್ಣ, ಉತ್ಪಾದಿಸುವ, ಫೋಷಿಸುವವಳಾಗಿ, ಎಲ್ಲವನ್ನು ಆಧರಿಸುವವಳು, ಮಹಿಳಾ ಸಬಲಿಕರಣಕ್ಕೆ ಹೆಚ್ಚಿನ ಒತ್ತು ನೀಡಬೇಕು, ಸಾಧನೆ ಮಾಡಿದ ಮಹಿಳಾ ಸಾಧಕೀಯರಿಗೆ ಗೌರವ ಸಲ್ಲಿಸುವ ಮೂಲಕ ಮತ್ತಷ್ಟು ಸಾಧನೆ ಮಾಡಲು ಪ್ರೋತ್ಸಾಹವನ್ನು ನೀಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ ಸೈಟ್ ಮೇರಿ ಚರ್ಚ್ ಧರ್ಮಗುರುಗಳಾದ ಫಾದರ ಸಂತೋಷ ಡಾಯಸ್ ರವರು ಮಾತನಾಡುತಾ2006 ರಿಂದ ಸೇವಾ ಸಂಗಮ ಸಮಾಜ ಸೇವಾ ಸಂಸ್ಥೆ ಹಂತ ಹಂತವಾಗಿ ಮಹಿಳಿಯರ ಅಭಿವೃದಿ ಕರ್ಯಕ್ರಮಗಳು ಮಾಡುತ್ತಿದೆ. ಮಹಿಳಿಯರು ಸಂಘಟನೆಯ ಮೂಲಕ ಏದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಸಂಸ್ಥೆ ಶ್ರಮಿಸುತ್ತಿದೆ. ಮಹಿಳಿಯರು ತಮ್ಮ ಹಕ್ಕುಗಳನ್ನು ರಕ್ಷಿಸಲು ಮತ್ತು ಪ್ರಪಂಚದಾದ್ಯಂತ ಮಹಿಳೆಯರು ಶಾಂತಿಯಿಂದ ಬದುಕಲು ಕ್ರಮ ಕೈಗೋಳ್ಳಲು ಬದ್ದವಾದ ವಾತವರಣ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.

ಸೈಟ್ ಮೇರಿ ಶಾಲೆಯ ನಿರ್ದೇಶಕರಾದ, ಆಳಂದ ಫಾದರ ಸಂತೋಷ ಬಾಪು ಮಾತನಾಡುತಾ ಲಿಂಗ ಸಮಾನತೆಗಾಗಿ ಡಿಜಿಟಲ್ ಯುಗದಲ್ಲಿ ನಾವೀನ್ಯತೆ, ತಾಂತ್ರಿಕ ಬದಲಾವಣೆ ಮತ್ತು ಶಿಕ್ಷಣಕ್ಕೆ ಹೇಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ 10 ಮಹಿಳಾ ಸಾಧಕರಿಗೆ ವಿಶೇಷ ಸನ್ಮಾನ ಮಾಡಲಾಯಿತ್ತು. ಕಾರ್ಯಕ್ರಮದಲ್ಲಿ ಕಲಬುರಗಿ ನಗರ ಹಾಗೂ ಗ್ರಾಮೀಣ ಭಾಗದ 180 ಮಹಿಳಿಯರು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಸಂತ ಜೋಸೆಫರ ಶಾಲೆಯ ಮುಖೋಪಾಧ್ಯಾಯನಿ ಸಿಸ್ಟರ್ ಸಜನಾ, ಎಚ್,ಕೆ,ಸಿ.ಸಿ,ಐ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಶ್ರೀ ಶರಣು ಪಪ್ಪಾ, ಶ್ರೀಮತಿ ಸಂಪದಾ, ಶ್ರೀಮತಿ ಶೃತಿ, ಶ್ರೀ ಎಮ್,ಆರ್, ಬೇರಿ, ಸೆವಾ ಸಂಗಮ ಸಂಸ್ಥೆಯ ನಿರ್ದೇಶಕರಾದ ಫದರ ವಿಕ್ಟರ್ ವಾಸ್, ಸಿಸ್ಟರ್ ವಸಂತಾ, ಶ್ರೀಮತಿ ರೇಣುಕಾ ಸರಡಗಿ ಉಪಸ್ಥಿತರಿದರು. ಜಗದೇವಿ ಸ್ವಾಗತಿಸಿದರು, ಗಾಯಿತ್ರಿ ವಂದಿಸಿ, ಶಿವಕಾಂತ ನಿರೂಪಿಸಿದರು.