ಮಹಿಳಾ ಜಾಗೃತಿ, ಬೀದಿ ನಾಟಕ ಪ್ರದರ್ಶನ

ಮಾನ್ವಿ,ಮಾ.೦೧- ಶೃತಿ ಜಾನಪದ ಸಂಸ್ಕೃತಿ ತಂಡ ಹಾಗೂ ಡಿಗ್ರಿ ನರಸಪ್ಪ ಕಲಾ ತಂಡದಿಂದ ಚಿಕ್ಕ ಕೊಟ್ನೇಕಲ್ ಗ್ರಾಮ ಪೋತ್ನಾಳ್ ಗ್ರಾಮದ ಬೀದಿಗಳಲ್ಲಿ ಮಹಿಳೆಯರ ಮೇಲಾಗುವ ದೌರ್ಜನ್ಯ ಹಾಗೂ ಹೆರಿಗೆಯ ಸಮಯದಲ್ಲಿ ನಡೆಯುವ ದುರ್ಘಟನೆ, ಅಪೌಷ್ಟಿಕತೆ, ರಕ್ತ ಹೀನತೆ, ಮುಟ್ಟಿನ ಸಮಯ ಕುರಿತಾದ ವಿಷಯವನ್ನು ನಾಟಕದ ಮೂಲಕ ಪ್ರದರ್ಶನ ಮಾಡಿ ಮಹಿಳೆಯರಿಗೆ ಅರಿವು ಮೂಡಿಸಲಾಯಿತು ಎಂದು ಶಿಕ್ಷಣ ಆರೋಗ್ಯಧಿಕಾರಿ ಬಾಲಪ್ಪ ನಾಯಕ ಹೇಳಿದರು.
ಜಿಲ್ಲಾಡಳಿತ ತಾಲೂಕ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ನಡೆದ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತಾನಾಡಿದ ಅವರು ಈ ರೀತಿಯ ಬೀದಿ ನಾಟಕದ ಮೂಲಕ ಜನರಿಗೆ ವಿಶೇಷವಾಗಿ ಹೇಳಿಕೊಳ್ಳುವುದಕ್ಕೆ ನಾಚಿಕೆ ಸ್ವಭಾವದ ಮಹಿಳೆಯರಿಗೆ ಈ ರೀತಿಯ ಕಾರ್ಯಕ್ರಮದಿಂದ ಬಹಳ ಅನುಕೂಲ ಆಗುತ್ತದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು, ಅಧಿಕಾರಿಗಳಾದ ಅಶ್ವನಿ, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಚಾರ್ಲಿ ಉದ್ಬಾಳ, ಆಶಾ ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.