ಸಂಜೆವಾಣಿ ವಾರ್ತೆ
ಕುಕನೂರು, ಜೂ.23 : ರೈತ ನಾಯಕ ಪ್ರೊಫೆಸರ್ ನಂಜುಂಡಸ್ವಾಮಿ ಸ್ಥಾಪಿತ ವಿ . ಆರ್. ನಾರಾಯಣ ರೆಡ್ಡಿ ಬಣದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮಹಿಳಾ ಗ್ರಾಮ ಘಟಕವನ್ನು ಕುಕನೂರು ತಾಲೂಕಿನ ಎರೆ ಹಂಚಿನಾಳ ಗ್ರಾಮದಲ್ಲಿ ಉದ್ಘಾಟಿಸಲಾಯಿತು.
ಮಹಿಳಾ ಗ್ರಾಮ ಘಟಕ ನಾಮಫಲಕ ಉದ್ಘಾಟನೆಯ ನಂತರ ಸನ್ಮಾನ ಸಮಾರಂಭದಲ್ಲಿ ರೈತ ಸಂಘದ ಮಹಿಳೆಯರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಅಂದಪ್ಪ ಹುರುಳಿ, ಕೊಪ್ಪಳ ಜಿಲ್ಲಾ ರೈತ ಸಂಘದ ಅಧ್ಯಕ್ಷ ಬಸವರಾಜ ಕೊಡ್ಲಿ, ಗದಗ್ ರೈತ ಸಂಘ ಜಿಲ್ಲಾಧ್ಯಕ್ಷ ಎಲ್ಲಪ್ಪ ಬಾಬ್ರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಜೀರ್ ಸಾಬ್ ತಳಕಲ್, ತಾಲೂಕ ರೈತ ಸಂಘದ ಸದಸ್ಯ ಈರಪ್ಪ ಕೌದಿ, ನಿರ್ಮಲಾ ಹಳ್ಳಿ, ಕುಕುನೂರು ನಗರ ಘಟಕದ ಅಧ್ಯಕ್ಷ ಗವಿಸಿದ್ದಪ್ಪ ಜಿನಿನ್, ಭಿನ್ನಾಳ್ ನಗರ ಘಟಕದ ಅಧ್ಯಕ್ಷ ದೇವಪ್ಪ ತಿಮ್ಮಾಪುರ್ ಕಾರ್ಯದರ್ಶಿ ಶರಣಪ್ಪ ಚೆಟ್ಟಿ, ನಿಂಗಾಪುರ್ ಗ್ರಾಮ ಘಟಕದ ಅಧ್ಯಕ್ಷ ನಾಗಪ್ಪ ಗಡ್ಡದ, ಇಟಗಿ ಗ್ರಾಮ ಘಟಕದ ಅಧ್ಯಕ್ಷ ಬಸಪ್ಪ ಮಂಡಲಗಿರಿ, ಎರೆಹಂಚಿನಾಳ ಮಹಿಳಾ ಘಟಕದ ಅಧ್ಯಕ್ಷ ಸಾವಿತ್ರಮ್ಮ ತಿಗ್ಗಿನಮನಿ, ಮತಿತರು ಪಾಲ್ಗೊಂಡಿದ್ದರು.
One attachment • Scanned by Gmail