ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಗೆ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಭೇಟಿ

ಕಲಬುರಗಿ, ಸೆ.19: ನಗರದ ಸರಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಗೆ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃಧ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಮಂಗಳವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಈ ವೇಳೆ “ಉದ್ಯೋಗ” ಕಾರ್ಯಕ್ರಮದಡಿಯಲ್ಲಿ ಪ್ರಾರಂಭವಾದ ಆರು ವಿವಿಧ ವೃತ್ತಿಗಳ ಮತ್ತು 23 ಅಲ್ಪಾವಧಿ ವೃತ್ತಿಗಳ ಹಾಗೂ ಟಾಟಾ ಟೆಕ್ನೊಲಜಿಯವರಿಂದ ಸರಬರಾಜಾದ ಯಂತ್ರೋಪಕರಣಗಳ ಮತ್ತು ಸಾಫ್ಟವೇರಗಳ ಬಗ್ಗೆ
ಸಂಸ್ಥೆಯ ಪ್ರಾಚಾರ್ಯರಾದ ಡಾ. ರುಬೀನಾ ಪರ್ವೀನ ಅವರಿಂದ ಮಾಹಿತಿ ಪಡೆದರು.

ಸಂಸ್ಥೆಯಲ್ಲಿ ಇನ್ನಿತರ ಯೋಜನೆಗಳಾದ, ಕುಶಲ ತರಬೇತಿ ಯೋಜನೆ ಹಾಗೂ ಪಿಪಿಪಿ ಯೋಜನೆಯಡಿಯಲ್ಲಿರುವ ವೃತ್ತಿಗಳಾದ, ಡ್ರೆಸ್ ಮೇಕಿಂಗ, ಕೋಪಾ, ಎಲೆಕ್ಟ್ರಾನಿಕ್. ಮೆಕ್ಯಾನಿಕ್, ಎಲೆಕ್ಟ್ರಿಷಿಯನ್, ಫಿಟ್ಟರ, ಸಿ.ಹೆಚ್.ಎನ್.ಎಮ್ ವೃತ್ತಿಗಳ ಕಾರ್ಯಗಾರಗಳಿಗೆ ಬೇಟಿ ನೀಡಿ ವಿವಿಧ ಯಂತ್ರೋಪಕರಣಗಳ ಬಗ್ಗೆ ಮಾಹಿತಿಯನ್ನು ಪಡೆದು, ಪ್ರತಿಯೊಂದು ವೃತ್ತಿಯಲ್ಲಿ ತರಬೇತಿದಾರರೊಂದಿಗೆ ಚರ್ಚಿಸಿ ಸಂಸ್ಥೆ ಮತ್ತು ತರಬೇತಿಯ ಗುಣಮಟ್ಟದ ಬಗ್ಗೆ ವಿಚಾರಿಸಿದರು, ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ತರಬೇತಿದಾರರ ಅಂಕಿ ಅಂಶ, ವಿವಿಧ ವೃತ್ತಿಗಳಲ್ಲಿ ಕಾರ್ಯನಿರ್ವಹಿಸಿತ್ತಿರುವ ಸಿಬ್ಬಂದಿಗಳ ಮಾಹಿತಿಯನ್ನು ಪಡೆದರು.
ಇದೆ ವೇಳೆ ಪ್ರಾಚಾರ್ಯರಾದ ಡಾ. ರುಬೀನಾ ಪರ್ವೀನ ಅವರು, ಮಹಿಳಾ ತರಬೇತಿದಾರರಿಗೆ ಅನುಕೂಲವಾಗುವ ದೃಷ್ಠಿಯಿಂದ ಇಲಾಖೆಯ ವತಿಯಿಂದ “ಮಹಿಳಾ ವಸತಿನಿಲಯ”ದ ಬಗ್ಗೆ ಸಚಿವರಕ್ಕೆ ಗಮನಕ್ಕೆ ತಂದರು, ಈ ಬಗ್ಗೆ ಸಚಿವರು ಧನಾತ್ಮಕವಾಗಿ ಸ್ಪಂದಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಬೇಡಿಕೆಯಿರುವ ವೃತ್ತಿ ಮತ್ತು ತರಬೇತಿದಾರರ ಹಿತದೃಷ್ಟಿಯಿಂದ ಸಂಸ್ಥೆಯಲ್ಲಿ “ ರೆಫ್ರಿರಿಜಿರೇಷನ್ ಮತ್ತು ಏರ್ ಕಂಡಿಷನಿಂಗ ಟೆಕ್ನಿಷಿಯನ್ ವೃತ್ತಿ ” ಯನ್ನು ಪ್ರಾರಂಭಿಸಲು ಸಲಹೆ ನೀಡಿ ಅದಕ್ಕೆ ಬೇಕಾಗುವ ಯಂತ್ರೋಪಕರಣಗಳು ಹಾಗು ಸಾಮಗ್ರಿಗಳ ಪ್ರಸ್ತಾವನೆಯನ್ನು ಸಲ್ಲಿಸಲು, ಕಲಬುರಗಿ ವಿಭಾಗದ ಜಂಟಿ ನಿರ್ದೇಶಕ(ತ) ರವೀಂದ್ರನಾಥ ಎಸ್. ಬಾಳ್ಳಿ ಅವರಿಗೆ ನಿರ್ದೇಶನ ನೀಡಿದರು.