ಮಹಿಳಾ ಕುಸ್ತಿಪಟ್ಟು ಪ್ರಕರಣ ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಮಾನ್ವಿ,ಮೇ.೩೨-
ತಾಲೂಕಿನ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಎ.ಐ.ಡಿ.ಎಸ್.ಒ. ತಾಲೂಕು ಸಮಿತಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಎ.ಐ.ಡಿ.ಎಸ್.ಒ. ತಾಲೂಕು ಸಮಿತಿ ಸಂಚಾಲಕ ಸೈಯದ್ ಜೈದ್ ಮಾತನಾಡಿ ಮಹಿಳಾ ಕುಸ್ತಿಪಟ್ಟುಗಳಿಗೆ ಲೈಂಗಿಕ ಕಿರುಕುಳ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಲು ಒತ್ತಾಯಿಸಿದರು.
ನಂತರ ಮಾತಾನಾಡಿದ ಅವರು ದೇಶದ ಪರವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕುಸ್ತಿ ಪಂದ್ಯಗಳಲ್ಲಿ ಪದಕ, ಪ್ರಶಸ್ತಿಯನ್ನು ಪಡೆದ ಮಹಿಳಾ ಕುಸ್ತಿ ಪಟುಗಳ ಮೇಲೆ ಕಿರುಕುಳ ನೀಡಿದ ಸಂಸ್ಥೆಯ ಅಧ್ಯಕ್ಷ ಹಾಗೂ ಸಂಸದರ ವಿರುದ್ದ ಕ್ರಮ ಕೈಗೊಳ್ಳಬೇಕು ಹಾಗೂ ದೆಹಲಿಯಲ್ಲಿ ಹಲವಾರು ದಿನಗಳಿಂದ ಹೋರಾಟ ನಡೆಸುತ್ತ ಮಹಾ ಪಂಚಾಯತ್‌ಗೆ ನೀಡಿದ ಕರೆಗೆ ಸ್ಪಂದಿಸಿ ಬೆಂಬಲ ನೀಡಲು ತೆರಳುತ್ತಿದ್ದ ನಮ್ಮ ಸಂಘಟನೆಯ ಸೋದರ ಸಂಘಟನೆಯಾದ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಹಾಗೂ ಅಖೀಲಾ ಭಾರತ ಕೃಷಿ ಖೇತ್ ಮಜದೂರ್ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳ ಕಾರ್ಯಕರ್ತರು ಹಾಗೂ ಕುಸ್ತಿ ಪಟುಗಳು, ಹೋರಾಟಗಾರರ ಮೇಲೆ ದೆಹಲಿ ಪೊಲೀಸರು ಅಮಾನುಷವಾಗಿ ನಡೆದು ಕೊಂಡಿರುವುದನ್ನು ಹಾಗೂ ಬಂದಿಸಿರುವುದನ್ನು ವಿರೋಧಿಸಿ ಜಿಲ್ಲೆಯಾಧ್ಯಂತ ನಮ್ಮ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಿ ಹೋರಾಟಗಾರರ ಮೇಲೆ ಹಾಕಿರುವ ಮೋಕದಮೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿದರು, ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದರು.