ಹರಿಹರ.ಜೂ.5; ಭಾರತೀಯ ಕುಸ್ತಿ ಫೆಡರೇಶನ್ ನ ಅಧ್ಯಕ್ಷರಾದ ಬ್ರಿಜ್ ಭೂಷಣ್ ಸಿಂಗ್ ರವರು ಕೆಲ ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಹಿನ್ನೆಲೆಯಲ್ಲಿತೀವ್ರವಾದ ಪ್ರತಿಭಟನೆ ನಡೆಯುತ್ತಿದ್ದು , ಈ ಹಿನ್ನಲೆಯಲ್ಲಿ ಹರಿಹರ ತಾಲೂಕಿನ ಕ್ರೀಡಾಪಟುಗಳ , ಪ್ರಗತಿಪರ ಚಿಂತಕರ , ಸಾಹಿತಿಗಳ ಪೂರ್ವಭಾವಿ ಸಭೆಯನ್ನು ರಚನಾ ಕ್ರೀಡಾ ಟ್ರಸ್ಟ್ ಆವರಣದಲ್ಲಿ ಕರೆಯಲಾಗಿತ್ತು. ಕ್ರೀಡಾಪಟು ಹಾಗೂ ಹರಿಹರ ನಗರಸಭೆಯ ಮಾಜಿ ಅಧ್ಯಕ್ಷರಾದ ಬಿ ರೇವಣಸಿದ್ದಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಿರಿಯ ಕ್ರೀಡಾಪಟು ಹೆಚ್ ನಿಜಗುಣ ಪ್ರಾಸ್ತಾವಿಕವಾಗಿ ಮಾತನಾಡುತ್ತಾ , ಕ್ರೀಡೆಗೆ ಜಾತಿ , ಧರ್ಮ, ಲಿಂಗ ಭೇದ ಯಾವುದು ಇಲ್ಲ. ಸಾಮರಸ್ಯಕ್ಕಾಗಿ ಆಡುವ ಈ ಕ್ರೀಡೆಗೆ ವಿಶೇಷವಾದ ಗೌರವ ಪ್ರಪಂಚದಲ್ಲಿ ಇದೆ . ಆದರೆ ಕುಸ್ತಿ ಫೆಡರೇಶನ್ ನ ಅಧ್ಯಕ್ಷರಾದ ಬ್ರಿಜ್ ಭೂಷಣ್ ಸಿಂಗ್ ಕೆಲ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ದೇಶ ವ್ಯಾಪ್ತಿ ವಿರೋಧವಾಗುತ್ತಿದೆ .ಕಾರಣ ಕ್ರೀಡಾಪಟುಗಳ ಹೋರಾಟಕ್ಕೆ ಬೆಂಬಲಿಸುವ ಹಿನ್ನೆಲೆಯಲ್ಲಿ ಈ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದರು .ಸಭೆಯಲ್ಲಿ ಪಾಲ್ಗೊಂಡಿದ್ದ ಸುಮಾರು 30 ಜನ ಕ್ರೀಡಾಪಟುಗಳು , ಕ್ರೀಡಾ ಅಭಿಮಾನಿಗಳು , ಬ್ರಿಜ್ ಭೂಷನ್ ಸಿಂಗ್ ವಿರುದ್ಧ , ಪ್ರತಿಭಟನೆಯ ಮೆರವಣಿಗೆ ಹಾಗೂ ರಾಜ್ಯ – ಕೇಂದ್ರ ಸರ್ಕಾರಗಳಿಗೆ ಬ್ರಿಜ್ ಭೂಷಣ್ ಸಿಂಗ್ ನನ್ನು ತಕ್ಷಣವೇ ಬಂಧಿಸಿ , ಕ್ರೀಡಾಪಟುಗಳಿಗೆ ನ್ಯಾಯ ದೊರಕಿಸಿ ಕೊಡಬೇಕೆಂಬ ಮನವಿ ಪತ್ರ ಅರ್ಪಿಸುವ ಸಲಹೆ ಮತ್ತು ಅದರ ಪೂರ್ವದಲ್ಲಿ ಪತ್ರಿಕಾಗೋಷ್ಟಿ ಮಾಡಿ ತಾಲೂಕಿನ ಜನಕ್ಕೆ ವಿಷಯ ತಿಳಿಸುವ ಸಲಹೆ ಕೊಟ್ಟರು .