
ದಾವಣಗೆರೆ.ಮೇ.೭: ಮಹಿಳಾ ಕುಸ್ತಿಪಟುಗಳ ಮೇಲಿನ ದೌರ್ಜನ್ಯ ಅತ್ಯಂತ ಖಂಡನೀಯ ಎಂದು ಮಹಾನಗರ ಪಾಲಿಕೆ ಸದಸ್ಯ ಕೆ. ಚಮನ್ ಸಾಬ್ ದೂರಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ಧ ದೆಹಲಿ ಪೊಲೀಸರು ಎರಡು ಫೋಕ್ಸೋ ಕೇಸ್ ದಾಖಲಿಸಿಕೊಂಡಿದ್ದಾರೆ. ಆದರೆ, ಈವರೆಗೆ ಅವರನ್ನು ಬಂಧಿಸಿಲ್ಲ. ಕೂಡಲೇ ಅವರನ್ನು ಕೂಡಲೇ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.ಒಲಿಂಪಿಕ್ ನಲ್ಲಿ ಕುಸ್ತಿಯಲ್ಲಿ ಪ್ರಶಸ್ತಿ ಪಡೆದು ದೇಶದ ಕೀರ್ತಿ ಹೆಚ್ಚಿಸಿರುವ ವಿನೇಶ್ ಪೊಗಟ್, ಸಾಕ್ಷಿ ಮಲ್ಲಿಕ್ ಮುಂತಾದವರು ತಮ್ಮ ಮೇಲೆ ಸಚಿವ ಬ್ರಿಜ್ ಭೂಷಣ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರು ಸಲ್ಲಿಸಿದ್ದಾರೆ. ಆದರೂ ಅವರನ್ನು ಈವರೆಗೆ ಸಂಪುಟದ ಲ್ಲಿ ಮುಂದುವರೆಸಲಾಗಿದೆ. ಅವರನ್ನು ಕೂಡಲೇ ಸಂಪುಟದಿಂದ ಕೈ ಬಿಡಬೇಕು ಎಂದು ಒತ್ತಾಯಿಸಿದರು.ಕೇಂದ್ರ ಸರ್ಕಾರ ಒಂದು ಕಡೆ ಬೇಟಿ ಪಡಾವೋ… ಬೇಟಿ ಬಚಾವೋ… ಎಂದು ಹೇಳುತ್ತದೆ. ಅದೇ ಮಹಿಳೆಯರು ಹಲವಾರು ದಿನಗಳಿಂದ ರಸ್ತೆಯಲ್ಲಿ ಕುಳಿತು ಹೋರಾಟ ನಡೆಸುತ್ತಿದ್ದರೂ ಪ್ರಧಾನಿ ಗಮನ ಹರಿಸುತ್ತಿಲ್ಲ. ಹೋರಾಟ ತೀವ್ರ ಸ್ವರೂಪ ಪಡೆಯುವ ಮುನ್ನವೇ ಅವರನ್ನು ಬಂಧಿಸಬೇಕು. ದೆಹಲಿಯಲ್ಲಿನ ಹೋರಾಟ ಸ್ವರೂಪ ನೋಡಿಕೊಂಡು ದಾವಣಗೆರೆಯಲ್ಲಿ ಉಪವಾಸ ಸತ್ಯಾಗ್ರಹ ಇತರೆ ರೀತಿಯ ಹೋರಾಟ ನಡೆಸಲಾಗು ವುದು ಎಂದು ಎಚ್ಚರಿಸಿದರು.ಮೇಯರ್ ವಿನಾಯಕ ಪೈಲ್ವಾನ್, ಸಲ್ಮಾನ್, ರಮೇಶ್, ಸತೀಶ್, ಸ್ಪಂದನ, ಯಶಿಕಾ ಇತರರು ಸುದ್ದಿಗೋಷ್ಠಿಯಲ್ಲಿದ್ದರು.