ಮಹಿಳಾ ಕುಸ್ತಿಪಟುಗಳ ಮುಷ್ಕರಕ್ಕೆ ಬೆಂಬಲಿಸಿ ಪ್ರತಿಭಟನೆ

ಕಲಬುರಗಿ,ಮೇ.18-ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಶೋಷಣೆ ಮಾಡುತ್ತಿರುವ ದುಷ್ಟರನ್ನು ಬಂಧಿಸಲು ಆಗ್ರಹಿಸಿ ಮತ್ತು ಮಹಿಳಾ ಕುಸ್ತಿಪಟುಗಳು ದೆಹಲಿಯ ಜಂತರ್ ಮಂತರ್‍ನಲ್ಲಿ ನಡೆಸುತ್ತಿರುವ ಮುಷ್ಕರವನ್ನು ಬೆಂಬಲಿಸಿ ಜನವಾದಿ ಮಹಿಳಾ ಸಂಘಟನೆ, ಸಿಐಟಿಯು, ಎಐಕೆಎಸ್, ಎಐಎಡಬ್ಲ್ಯೂ, ಡಿವೈಎಫ್‍ಐ, ಎಸ್‍ಎಫ್‍ಐ ಮತ್ತು ಎಲ್ಲ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಇಂದು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿಪತ್ರ ಸಲ್ಲಿಸಲಾಯಿತು.
ಮಹಿಳಾ ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಭಾರತ ಕುಸ್ತಿ ಫೆಡರೇಶನ್ ಅಧ್ಯಕ್ಷಸ್ಥಾನದಿಂದ ತೆಗೆದು ಹಾಕಬೇಕು ಮತ್ತು ಈ ಕೂಡಲೇ ಅವರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು, ಈ ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕು ಎಂದು ಮನವಿಪತ್ರದಲ್ಲಿ ಆಗ್ರಹಿಸಲಾಗಿದೆ.
ಡಾ.ಮೀನಾಕ್ಷಿ ಬಾಳಿ, ಶರಣಬಸಪ್ಪ ಮಮಶೆಟ್ಟಿ, ಎಂ.ಬಿ.ಸಜ್ಜನ್, ಭೀಮಶೆಟ್ಟಿ ಯಂಪಳ್ಳಿ, ಸಾಯಬಣ್ಣಾ ಗುಡುಬಾ, ಸುಭಾಷ ಹೊಸಮನಿ, ನಾಗಯ್ಯ ಸ್ವಾಮಿ, ಸುಧಾಮ ಧನ್ನಿ, ಚಂದಮ್ಮ ಗೋಳಾ, ಪದ್ಮಿನಿ ಕಿರಣಗಿ, ಮಲ್ಲಮ್ಮ ಕೋಡ್ಲಾ, ಗೌರಮ್ಮ ಪಾಟೀಲ, ಸುಜಾತಾ ಕುಸನೂರ, ಲವಿತ್ರಾ ವಸ್ತ್ರದ, ಡಾ.ಚಂದ್ರಕಲಾ ಪಾಟೀಲ, ಡಾ.ಶರಣಮ್ಮ, ಡಾ.ಮಹೇಶ ಗೌಡರ್, ಡಾ.ಶಿವಲೀಲಾ ಧೋತ್ರೆ, ಡಾ.ಪ್ರೇಮ್ ಚವ್ಹಾಣ್, ಡಾ.ಕನೀಜ್ ಫಾತಿಮಾ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.