ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಗಲಗಲಿ ಆಯ್ಕೆ

(ಸಂಜೆವಾಣಿ ವಾರ್ತೆ)
ಇಂಡಿ :ಮಾ.15:ಪಟ್ಟಣದಲ್ಲಿ ಮಾ.21 ರಂದು ನಡೆಯಲಿರುವ ತಾಲೂಕ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರ ಆಯ್ಕೆ ಸಭೆ ಪಟ್ಟಣದ ಕಸಾಪ ಸಭಾ ಭವನದಲ್ಲಿ ಶನಿವಾರ ನಡೆಯಿತು.
ಸಭೆಯಲ್ಲಿ ಗಂಗೂಬಾಯಿ ಗಲಗಲಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು,ಆಯ್ಕೆ ಸಮಿತಿ ಸಭೆಯಲ್ಲಿ ಚರ್ಚಿಸಿದಾಗ ಹಿರಿತನ,ಸಂಘಟನೆ,ಸಾಹಿತ್ಯ,ಕೃಷಿ ಸೆರಿದಂತೆ ಮುಂತಾದ ಅರ್ಥಪೂರ್ಣ ಚರ್ಚೆಗಳು ನಡೆದು ಅಂತಿಮವಾಗಿ ಗಂಗೂಬಾಯಿ ಗಲಗಲಿ ಅವರನ್ನು ಆಯ್ಕೆ ಸಮಿತಿ ಅಂತಿಮಗೊಳಿಸಿತು.ಗಂಗೂಬಾಯಿ ಗಲಗಲಿ ಅವರ ಕವನ ಸಂಕಲನಗಳಾದ ಗೊಂಚಲು,ಉಲ್ಲಾಸ ಹಾಗೂ ಸಂಪಾದಕತ್ವದಲ್ಲಿ ಹೊರಬಂದ ಗರತಿಯ ಒಡಲು ಪ್ರಮುಖ ಕೃತಿಗಳು ಲೋಕಾರ್ಪಣೆಗೊಂಡಿರುವುದು ಸಭೆಯಲ್ಲಿ ಚರ್ಚಿಸಲಾಯಿತು. ಕಸಾಪ ಅಧ್ಯಕ್ಷ ಡಾ.ಕಾಂತು ಇಂಡಿ, ಹಣಕಾಸು ಸಮಿತಿ ಮುಖ್ಯಸ್ಥ ಪ್ರಭು ಹೊಸಮನಿ,ನಿಜಣ್ಣ ಕಾಳೆ, ಜಿ.ಜಿ.ಬರಡೋಲ,ಹಿರಿಯ ಸಾಹಿತಿ ದಾನಪ್ಪ ಬಗಲಿ,ಪಿ.ಎಂ.ಮಠಪತಿ,ಸಿದ್ದು ಡಂಗಾ, ಆರ್.ವಿ.ಪಾಟೀಲ,ಬಸವರಾಜ ಗೊರನಾಳ,ಬಿ.ಎಂ.ಹೊಸೂರ,ರಾಘವೆಂದ್ರ ಕುಲಕರ್ಣಿ, ಎಂ.ಪಿ.ಬೈರಜಿ, ಎಂ.ಪಿ.ಬಿರಾದಾರ,ಬಸಯ್ಯ ಹಿರೇಮಠ,ಪ್ರಕಾಶ ಬಿರಾದಾರ,ಸಂದೇಶ ಗಲಗಲಿ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.