ಮಹಿಳಾ ಅಭಿವೃದ್ಧಿಗೆ ಕಾನೂನು ದಾರಿ ದೀಪ ವಾಗಲಿ: ಉಜ್ವಲಾ ಸರನಾಡಗೌಡರ

ವಿಜಯಪುರ: ಮಾ.13:ಸ್ವಾವಲಂಬನೆ ಬದುಕಿಗೆ ಮಹಿಳೆಯರಿಗೆ ಕಾನೂನುಗಳ ಅರಿವು ಅವುಗಳನ್ನು ಬಳಸಿಕೊಳ್ಳುವ ಜ್ಞಾನ ಬಹಳ ಅವಶ್ಯವಾಗಿದೆ. ಹಾಗೂ ಗ್ರಾಮೀಣ ಮತ್ತು ನಗರ ಬದುಕಿನ ಮಹಿಳೆಯರಿಗೆ ಇರುವ ಅವಕಾಶಗಳಲ್ಲಿ ಅಸಮಾನತೆ ಇದೆ. ಮಹಿಳೆ ಕುಟುಂಬ ಮತ್ತು ಸಾಮಾಜಿಕ ಜೀವನದಲ್ಲಿ ಹೋರಾಟ ಮಾಡುತ್ತಾ ತನ್ನ ಬಗೆಗೆ ಕಾಳಜಿಯನ್ನು ನಿರ್ಲಕ್ಷ ಮಾಡಿ ಅನಾರೋಗ್ಯ ದತ್ತ ಮುಖ ಮಾಡಿದ್ದಾಳೆ ಎಂದು ಜಿಲ್ಲಾ ವೀರಶೈವ ಲಿಂಗಾಯ ಮಹಾಸಭಾ, ಮಹಿಳಾ ಘಟಕ, ಜಿಲ್ಲಾ ಕದಳಿ ವೇದಿಕೆ, ಹಾಗೂ ಸ್ಫೂರ್ತಿ ಮಹಿಳಾ ಗ್ರಾಮಿಣ ಅಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಲಿಂ. ಶ್ರೀಮತಿ. ಗಂಗಬಾಯಿ. ಚೆನ್ನಪ್ಪ. ಉಪ್ಪಿನ ಮತ್ತು ಲಿಂ. ಆದಪ್ಪ.ಕರಡಿ ಅವರ ದತ್ತಿ ಸ್ಮರಣೆ ಉಪನ್ಯಾಸ ಕಾರ್ಯಕ್ರಮ ದಲ್ಲಿ ಅಂಜುಮನ್ ಕಾನೂನು ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಪಕಿ ಪೆÇ್ರ. ಉಜ್ವಲಾ ಸರನಾಡಗೌಡರ ಅವರು ಮಾತನಾಡಿದರು.

12 ನೇ ಶತಮಾನದ ಶರಣೆಯರು ಅರುಹಿದ ಸಾಮಾಜಿಕ, ಧಾರ್ಮಿಕ ಚಿಂತನೆಗಳು ಸಾರ್ವಕಾಲಕ್ಕೂ ಬದುಕಿಗೆ ದಾರಿದೀಪವಾಗಿವೆ. ಮುಕ್ತಾಯಕ್ಕ, ಮೋಳಿಗೆ ಮಹಾದೇವಿ, ಬೊಂತಾದೇವಿ, ಅಕ್ಕಮಹಾದೇವಿ, ಸತ್ಯಕ್ಕ, ಲಕ್ಕಮ್ಮ ಮುಂತಾದ ಶರಣೆಯರ ಪ್ರಗತಿಪರ ಚಿಂತನೆ ಗಳು, ತತ್ವಾದರ್ಶಗಳು, ಮಹಿಳೆಯರ ವ್ಯಕ್ತಿತ್ವ ರೂಪಿಸುವಲ್ಲಿ ಸಹಕರಿಯಾಗಿವೆ. ಎಂದು ಡಾ. ರೇಖಾ ಪಾಟೀಲ ಅವರು ಮಾತನಾಡಿದರು.ಜಿಲ್ಲಾ ಕದಳಿ ವೇದಿಕೆಯ ಅಧ್ಯಕ್ಷರು ಆದ ಡಾ.ಉಷಾದೇವಿ ಹಿರೇಮಠ ಪ್ರಾ ಸ್ತವಿಕ ನುಡಿಗಳನ್ನಡಿದರು.

ಜಿಲ್ಲಾ ವೀರಶೈವ ಮಹಾ ಸಭಾ ಮಹಿಳಾ ಘಟಕ ದ ಅಧ್ಯಕ್ಷರು ಆದ ಡಾ, ಬನುದೇವಿ ಸಂಕಣ್ಣ ವರ,ಅವರು ಅಧ್ಯಕ್ಷ ಸ್ಥಾನವನ್ನು ಅಲಂಕರೀಸಿದ್ದರು.ಶ್ರೀ ಸಿದ್ದರಾಮಪ್ಪ ಉಪ್ಪಿನ, ಡಾ. ವಿ. ಸಿ. ನಾಗಠಾಣ, ಮ. ಗು. ಯಾದವಾಡ ಮತ್ತು ಶ್ರೀಮತಿ ಶಶಿಕಲಾ ಸ್ಥಾವರ ಮಠ, ಶ್ರೀಮತಿ ವಿದ್ಯಾ ಕೋಟೆನ್ನವರ, ಶಶಿಕಲಾ ಇಜೇರಿ, ಭಾರತಿ ಸಿಂಹಾಸನ ಮಠ, ಕಮಲಾಕ್ಷಿ ಗೆಜ್ಜೆ, ಶ್ರೀಮತಿ ಭಾರತಿ ಭೂಯಾರ,ಪುಷ್ಪ ಮಹಾಂತಿನಮಠ, ಪದ್ಮಜಾ ಪಾಟೀಲ್ ಉಪಸ್ಥಿತರಿದ್ದರು. ವಿವಿಧ ಕ್ಷೇತ್ರ ಗಳಲ್ಲಿ ಸಾಧನೆ ಮಾಡಿದ ಮಹಿಳಾ ಸಾಧಕಿಯರಾದ ಶ್ರೀಮತಿ ಇಂದುಮತಿ ಲಮಾಣಿ, ಶ್ರೀಮತಿ ಅಕ್ಕಮಹಾದೇವಿ ಬುರ್ಲಿ, ಶ್ರೀಮತಿ ಬೋರಮ್ಮ ಮುಗಳ್ಳೊಳ್ಳಿ, ಶ್ರೀಮತಿ. ಸಂಗೀತ ಮಠಪತಿ, ಕುಮಾರಿ. ಅನ್ನಪೂರ್ಣ ಭೋಸಲೆ, ಅವರನ್ನು ಸನ್ಮಾನಿಸಲಾಯಿತು. ಮಹಿಳಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಶ್ರೀಮತಿ ದಾಕ್ಷಾಯಿಣಿ ಬಿರಾದರ ಸ್ವಾಗತಿಸಿದರು. ಶ್ರೀಮತಿ ಶಾರದಾ ಐಹೊಳೆ ನಿರುಪಿಸಿದರು.