ಮಹಿಮಾ ಪುರುಷ ಶಿವದಾಸಿಮಯ್ಯ

ವಿಜಯಪುರ:ಜೂ.22: 12ನೇ ಶತಮಾನದಲ್ಲಿ ಶರಣರ ವಚನಗಳು ಸಾರಸ್ವತ ಲೋಕಕ್ಕೆ ಅಪೂರ್ವ ಕಾಣಿಕೆ ನೀಡಿವೆ. ಸತ್ಯ, ಶುದ್ಧ ಕಾಯಕದಿಂದ ಮಾನವೀಯ ಮೌಲ್ಯಗಳನ್ನು ಶರಣರು ಸಮಾನತೆ ಪರಿಶುದ್ಧತೆಯನ್ನು ಕಂಡುಕೊಂಡವರು ಅವುಗಳನ್ನು ತಮ್ಮ ಜೀವನುದ್ಧಕ್ಕೂ ಸಾರ್ಥಕ ಬದುಕನ್ನು ಬಾಳಿ ಬೆಳಗಿದವರು ಎಂದು ಸಾಹಿತಿ ಪ್ರೊ|| ಮಹಾದೇವ ರೆಬಿನಾಳ ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾ ಘಟಕದ ವೀರಶೈವ ಸಭಾಭವನದಲ್ಲಿ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಶರಣ ಶಿವದಾಸಿಮಯ್ಯ ಕುರಿತು ಅವರು ಉಪನ್ಯಾಸ ನೀಡಿದರು.
ಶಿವಶರಣರಲ್ಲಿ ಅತ್ಯಂತ ವಿಶಿಷ್ಟ ವ್ಯಕ್ತಿ ದೇವದಾಸಿಮಯ್ಯ ದಾನ ಸಂಸ್ಕøತಿಯನ್ನು ವಿರೋಧಿಸಿದಂತವರು. ಕ್ಷೇತ್ರ ದರ್ಶನ ಮಾಡುವಾಗ ಕಾಶಿ ವಿಶ್ವನಾಥನ ದರ್ಶನ ಪಡೆದು, ಜಡೆ ಶಂಕರಲಿಂಗನ ಬೆಟ್ಟದಲ್ಲಿ ಜಂಗಮ ವೇಶದಾರಿಯಾಗಿ ಬಂದು ಜಡೆ ಶಂಕರದೇವರು ಶಿವದಾಸಿಮಯ್ಯನವರ ಅಪಾರ ದೈವಶಕ್ತಿ, ಶೃದ್ಧೆ, ಸಾಕ್ಷಾತ್ಕಾರ ಕಂಡು ಭಕ್ತಿಗೆ ಮೆಚ್ಚಿ ಅವರಿಗೆ ಜ್ಞಾನ ನೇತ್ರವನ್ನು (ಮೂರನೇ ಕಣ್ಣು) ದಯಪಾಲಿಸಿದವರು. ಮುಂದೆ ಲೋಕ ಕಲ್ಯಾಣಾರ್ಥವಾಗಿ ಧರ್ಮಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಮಹಿಮಾ ಪುರುಷ ಶಿವದಾಸಿಮಯ್ಯರಾದರು. ಅವರ ವ್ಯಕ್ತಿತ್ವದ ದೊರೆತ ಕೆಲವೇ ಕೆಲವು ವಚನಗಳು ಸಮಾಜದ ಒಳತಿಗಾಗಿ ರಚಿಸಿದಂತಹವು. ನಾವು ಅವುಗಳನ್ನು ತಿಳಿದುಕೊಳ್ಳಬೇಕಾದ ಅಗತ್ಯತೆ ತುಂಬಾ ಇದೆ ಎಂದರು.
ವೀರಶೈವ ಲಿಂಗಯತ ಮಹಾಸಭಾದ ಅಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿ ಬಸವ ಧರ್ಮದಲ್ಲಿ ಗುರುವಿಗೆ ಅತ್ಯಂತ ಪೂಜ್ಯ ಸ್ಥಾನವಿದೆ. ಶರಣ ಶಿವದಾಸಿಮಯ್ಯನವರ ವಚನಗಳು ಅಮೃತ ನುಡಿ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ಶ್ರೀಮತಿ ಸುವರ್ಣಾ ಕುರ್ಲೆ ವಚನಗೀತೆ ಹಾಡಿದರು. ಅಖಲ ಭಾರತ ವೀರಶೈವ ಲಿಮಗಯತ ಮಹಾಸಭೆಯ ಗೌರವಾಧ್ಯಕ್ಷರಾದ ಸಿದ್ದಾಮಪ್ಪ ಉಪ್ಪಿನ, ಡಾ|| ಸೋಮಶೇಖರ ವಾಲಿ, ಬಿ.ಎಚ್. ಬಾದರಬಂಡಿ, ಮ.ಗು. ಯಾದವಾಡ, ಡಾ|| ಸಂಗಮೇಶ ಮೇತ್ರಿ, ಶರಣಗೌಡ ಪಾಟೀಲ, ಪ್ರೊ. ಯು.ಎನ್. ಕುಂಟೋಜಿ, ಎಸ್.ಜಿ.ನಾಡಗೌಡ, ಶಿವಪುತ್ರ ಪೋಳ, ಬಸವರಾಜ ಒಂಟಗೂಡಿ, ಭಾರತಿ ಭುಯ್ಯಾರ, ಅಣೆಪ್ಪನವರ, ಪರಶುರಾಮ ಪೋಳ, ಡಾ|| ವಿ.ಡಿ. ಐಹೊಳ್ಳಿ, ಎಸ್.ವಾಯ್. ಗದಗ, ಎಂ.ಎಂ. ಅವರಾಧಿ, ಆರ್.ಜಿ. ಬ್ಯಾಕೋಡ, ಪ್ರೊ. ಎಸ್.ಬಿ. ದೊಡಮನಿ, ಉಪಸ್ಥಿತರಿದ್ದರು. ಸಾಹಿತಿ ಸಂಗಮೇಶ ಬದಾಮಿ ಕಾರ್ಯಕ್ರಮ ನಿರೂಪಿಸಿದರು.
ಶೃದ್ಧಾಂಜಲಿ :
ಇತ್ತಿಚೆಗೆ ಅಪಘಾತದಲ್ಲಿ ನಿಧನರಾದ ಸಂಘಟಕ ರಾಜೇಂದ್ರಕುಮಾರ್ ಬಿರಾದಾರ ಅವರಿಗೆ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ನುಡಿನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಶರಣ, ಶರಣೆಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.