ಮಹಿಪಾಲರೆಡ್ಡಿ ಮುನ್ನೂರ್ ಬರೆದ `ಚಂದ್ರಶಿಕಾರಿ’ ಜೀವನಕಥನ ಲೋಕಾರ್ಪಣೆ ಮದನಾ ದೇಶಮುಖ ಅಭಿನಂದನಾ ಸಮಾರಂಭ

ಕಲಬುರಗಿ:ನ.11: ಕರ್ನಾಟಕ ವಿಧಾನಸಭೆಯ ಮಾಜಿ ಉಪಸಭಾಧ್ಯಕ್ಷರಾದ ಶ್ರೀ ಚಂದ್ರಶೇಖರರೆಡ್ಡಿ ದೇಶಮುಖ ಮದನಾ ಅವರ ಕುರಿತು ಮಹಿಪಾಲರೆಡ್ಡಿ ಮುನ್ನೂರ್ ಅವರು ಬರೆದ ಚಂದ್ರಶಿಕಾರಿ’ ಗ್ರಂಥದ ಲೋಕಾರ್ಪಣೆ ಸಮಾರಂಭ ಹಾಗೂ ಸಹಸ್ರ ಚಂದ್ರ ದರ್ಶನ ಕಾರ್ಯಕ್ರಮವು ನ. 12 ರಂದು ಶನಿವಾರ ಬೆಳಿಗ್ಗೆ 11-15 ಕ್ಕೆ ಹೈದ್ರಾಬಾದ್ ರಸ್ತೆಯಲ್ಲಿರುವ ಮಹಾಸಾಧ್ವಿ ಶ್ರೀ ಹೇಮರೆಡ್ಡಿ ಮಲ್ಲಮ್ಮ ಮತ್ತು ಶ್ರೀ ವೇಮನ ಮಹಾಯೋಗಿ ದೇವಾಲಯ ಸೇಡಂ ನ ಪ್ರಾಂಗಣದಲ್ಲಿ ಆಯೋಜಿಸಲಾಗಿದೆ. ನಾಲವಾರದ ಪೂಜ್ಯ ಶ್ರೀ ಡಾ.ಸಿದ್ದತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಪೂಜ್ಯ ಶ್ರೀ ಶಿವಶಂಕರ ಶಿವಾಚಾರ್ಯರು ಸಾನಿಧ್ಯ ವಹಿಸುವರು. ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ದಿಗ್ಗಾವಿ ಪೂಜ್ಯ ಶ್ರೀ ಶಾಂತಮಲ್ಲಿಕಾರ್ಜುನ ಮಹಾಸ್ವಾಮಿಗಳು, ಹೆಡಗಿಮದ್ರಾ,: ಪೂಜ್ಯ ಶ್ರೀ ಪಂಚಾಕ್ಷರ ಮಹಾಸ್ವಾಮೀಜಿ, ಜಾಕನಪಲ್ಲಿಯ ಪೂಜ್ಯ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿ, ಅಭಿನಂದನ ಸಮಿತಿ ಗೌರವಾಧ್ಯಕ್ಷರು ಹಾಗೂ ಪೂಜ್ಯ ಶ್ರೀ ಸದಾಶಿವ ಸ್ವಾಮೀಜಿ ಸಮ್ಮುಖ ವಹಿಸುವರು. ಮಾಜಿ ಮುಖ್ಯಮಂತ್ರಿ ಮತ್ತು ಹುಬ್ಬಳ್ಳಿ ಶಾಸಕ ಜಗದೀಶ ಶೆಟ್ಟರ್ ಅವರುಚಂದ್ರಶಿಕಾರಿ’ ಗ್ರಂಥ ಲೋಕಾರ್ಪಣೆ ಮಾಡುವರು. ಮಾಜಿ ಸಚಿವರು ಹಾಗು ಗದಗ ಶಾಸಕ ಎಚ್.ಕೆ. ಪಾಟೀಲ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ಸಮಾರಂಭ ಉದ್ಘಾಟಿಸುವರು.
ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪುರ ಹಾಗೂ ಮಾಜಿ ಸಚಿವ ಜನಾರ್ಧನರೆಡ್ಡಿ ಗಾಲಿ ಅವರು `ಸಹಸ್ರ ಚಂದ್ರ ದರ್ಶನ’ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಸಂಸದರಾದ ಡಾ.ಉಮೇಶ ಜಾಧವ ಹಾಗೂ ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರು ಶ್ರೀ ಹೇಮರೆಡ್ಡಿ ಮಲ್ಲಮ್ಮ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವರು. ಗುರುಮಠಕಲ್ ಶಾಸಕ ನಾಗಣ್ಣಗೌಡ ಕಂದಕೂರ ಹಾಗೂ ಶಾಸಕ ಶಶೀಲ್ ನಮೋಶಿ ಅವರು ಶ್ರೀ ವೇಮನ ಮಹಾಯೋಗಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವರು. ಶಾಸಕರು ಹಾಗೂ ಅಭಿನಂದನ ಸಮಿತಿ ಅಧ್ಯಕ್ಷ ರಾಜಕುಮಾರ ಪಾಟೀಲ ತೆಲ್ಕೂರ ಅಧ್ಯಕ್ಷತೆ ವಹಿಸುವರು.
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕøತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಅಭಿನಂದನಾ ನುಡಿಗಳಾಡುವರು.
ಮಾಜಿ ಕೇಂದ್ರ ಸಚಿವ ಬಸವರಾಜ ಪಾಟೀಲ ಅನ್ವರಿ ವಿಶೇಷ ಆಮಂತ್ರಿತರಾಗಿದ್ದು, ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮುಡು, ವಿಧಾನ ಪರಿಷತ್ತಿನ ಸದÀಸ್ಯರಾದ ಬಿ.ಜಿ.ಪಾಟೀಲ, ಬಾಬುರಾವ್ ಚಿಂಚನಸೂರ, ಮಾಜಿ ಸಚಿವ ಎಸ್.ಕೆ.ಕಾಂತಾ, ಮಾಜಿ ಶಾಸಕರಾದ ಡಾ.ನಾಗರೆಡ್ಡಿ ಪಾಟೀಲ, ಬಿ.ಆರ್.ಪಾಟೀಲ, ಮಾಲೀಕಯ್ಯ ಗುತ್ತೇದಾರ ಮುಖ್ಯ ಅತಿಥಿಗಳಾಗಿರುವರು. ಚಲನಚಿತ್ರ ಹಿರಿಯ ನಿದೇರ್ಶಕ ಗಿರೀಶ್ ಕಾಸರವಳ್ಳಿ ಬೆಂಗಳೂರು ವಿಶೇಷ ಆಹ್ವಾನಿತರಾಗಿದ್ದು, ಮಾಜಿ ಸಚಿವರು ಹಾಗೂ ಅಭಿನಂದನ ಸಮಿತಿ ಕಾಯಾಧ್ಯಕ್ಷ ಡಾ.ಶರಣಪ್ರಕಾಶ ಪಾಟೀಲ ಆಶಯ ನುಡಿಗಳಾಡುವರು.

ಜೆಡಿಎಸ್ ಮುಖಂಡ ಬಾಲರಾಜ ಗುತ್ತೇದಾರ ಹಾಗೂ ಉದ್ಯಮಿ ಲಲ್ಲೇಶರೆಡ್ಡಿ ಬೆಂಗಳೂರು ಅತಿಥಿಗಳಾಗಿರುವರು. `ಚಂದ್ರಶಿಕಾರಿ’ ಲೇಖಕರಾದ ಮಹಿಪಾಲರೆಡ್ಡಿ ಮುನ್ನೂರ್ ಪ್ರಾಸ್ತಾವಿಕ ಮಾತನಾಡುವರು.

ಐದು ಸಾವಿರಕ್ಕಿಂತ ಹೆಚ್ಚು ಜನರ ನಿರೀಕ್ಷೆ

ಸೇಡಂ: ಹಿರಿಯ ಮುತ್ಸದ್ದಿಗಳಾದ ಚಂದ್ರಶೇಖರ ರೆಡ್ಡಿ ದೇಶಮುಖ ಮದನಾ ಅವರ ಕುರಿತಾದ ಈ ಕಾರ್ಯಕ್ರಮದಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಜನ ಸೇರಲಿದ್ದಾರೆ. ಪಕ್ಷಬೇಧ ಮರೆತು ಈ ಸಮಾರಂಭದಲ್ಲಿ ಭಾಗವಹಿಸುವಂತೆ ಅಭಿನಂದನ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕರಾದ ರಾಜಕುಮಾರ ಪಾಟೀಲ ತೆಲ್ಕೂರ ಅವರು ಕೋರಿದ್ದಾರೆ.