ಮಹಾ ಸಿಎಂ ವಿರುಧ್ದ ಕೀರ್ತಿ ದೂರು

ಮುಂಬೈ, ಜ. ೧೧- ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ವಿರುದ್ಧ ದೂರು ಸಲ್ಲಿಸಲು ಮುಖ್ಯ ಚುನಾವಣಾಧಿಕಾರಿ ಬಲದೇವ್ ಸಿಂಗ್ ಅವರನ್ನು ಭೇಟಿಮಾಡುವುದಾಗಿ ಭಾರತೀಯ ಜನತಾ ಪಕ್ಷದ ಕೀರ್ತಿಸೋಮಯ್ಯ ಇಂದು ತಿಳಿಸಿದ್ದಾರೆ.
ಇಂದು ೩.೩೦ಕ್ಕೆ ಮುಖ್ಯ ಚುನಾವಣಾಧಿಕಾರಿ ಬಾರ್ಡಿಯೋ ಸಿಂಗ್ ಚುನಾವಣಾ ಆಯೋಗ ಮಂತ್ರಾಲಯ ಅವರನ್ನು ಭೇಟಿ ಮಾಡುತ್ತೇನೆ. ಸಿಎಂ ಉದ್ದವ್ ಠಾಕ್ರೆ ವಿರುದ್ಧ ಅವರ ಆಸ್ತಿಗಳನ್ನು ಬಹಿರಂಗಪಡಿಸದೆ ಮರೆಮಾಚಿರುವ ಸಂಬಂಧ ದೂರು ಸಲ್ಲಿಸಲಿದ್ದೇನೆ.
ಚುನಾವಣೆ ನಾಮಪತ್ರ ಸಲ್ಲಿಸುವ ವೇಳೆ ಅಫಿಡೆವಿಟ್ ನಲ್ಲಿ ಅವರ ಕೊರ್ಲೈ ಆಲಿಬಾರ್ ಬಂಗಲೆಯ ಮೌಲ್ಯ ೫ ಕೋಟಿ ರೂ. ಎಂದು ನಮೂದಿಸಿದ್ದಾರೆ. ಈ ನಿಟ್ಟಿನಲ್ಲಿ ದೂರು ಸಲ್ಲಿಸಲಾಗುವುದು ಎಂದು ಕೀರ್ತಿಸೋಮಯ್ಯ ತಿಳಿಸಿದ್ದಾರೆ.