ಮಹಾ ಪುರುಷರ ಆದರ್ಶ ಪಾಲಿಸಿ

ಬೀದರ್:ಜ.16: ವಿದ್ಯಾರ್ಥಿಗಳು ಮಹಾ ಪುರುಷರ ತತ್ವ ಹಾಗೂ ಆದರ್ಶಗಳನ್ನು ಪಾಲಿಸಬೇಕು ಎಂದು ಶಾಂತಿಕಿರಣ ಚಾರಿಟಬಲ್ ಆ್ಯಂಡ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಚಂದ್ರಕಾಂತ ಪಾಟೀಲ ಹೇಳಿದರು.

ಇಲ್ಲಿಯ ಶ್ರೀ ಸ್ವಾಮಿ ನರೇಂದ್ರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿವಯೋಗಿ ಸಿದ್ಧರಾಮೇಶ್ವರರು ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಿದ್ದರು. ಅವರ ವಚನಗಳು ಸರ್ವ ಕಾಲಕ್ಕೂ ಪ್ರಸ್ತುತವಾಗಿವೆ ಎಂದು ನುಡಿದರು.

ಕಾಲೇಜು ಆಡಳಿತಾಧಿಕಾರಿ ಕಲ್ಪನಾ ಮಠಪತಿ, ಪ್ರಾಚಾರ್ಯೆ ಮಂಗಲಾ ಉಪಸ್ಥಿತರಿದ್ದರು. ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.