ಮಹಾ ಪರಿನಿರ್ವಾಣದಂಗವಾಗಿ ಡಾ.ಅಂಬೇಡ್ಕರ ಪುತ್ಥಳಿಗೆ ಮಾಲಾರ್ಪಣೆ

(ಸಂಜೆವಾಣಿ ವಾರ್ತೆ)
ಇಂಡಿ :ಡಿ.7:ಡಾ.ಅಂಬೇಡ್ಕರ ಅವರ ಮಹಾಪರಿನಿರ್ವಾಣದ ನಿಮಿತ್ಯ ಸೋಮವಾರ ಶಾಸಕ ಯಶವಂತರಾಯಗೌಡ ಪಾಟೀಲ ಹಾಗೂ ದಸಂಸ,ದಲಿತ ಸಮಯನ್ವಯ ಸಮಿತಿ,ಭಾರತೀಯ ಭೌದ್ದ ಮಹಾಸಭಾ,ಅಂಬೇಡ್ಕರ ಯುವಕ ಸಂಘ, ಜೈಭೀಮದ,ದಸಂಸ(ಭೀಮವಾದ) ಸೇರಿದಂತೆ ವಿವಿಧ ದಲಿತ ಪರ ಸಂಘಟನೆಗಳ ಮುಖಂಡರು,ಬ್ಲಾಕ್ ಕಾಂಗ್ರೆಸ್,ಕಾಂಗ್ರೇಸ್ ಯುವ ಘಟಕ,ಜೆಡಿಎಸ್,ಬಿಜೆಪಿ ಮುಖಂಡರು ಅಂಬೇಡ್ಕರ ವೃತ್ತದಲ್ಲಿ ಅಂಬೇಡ್ಕರ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ,ದೇಶಕ್ಕೆ ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನ ನೀಡಿದ ಅಂಬೇಡ್ಕರ ಅವರ ಕೊಡುಗೆ ಅಪಾರವಾಗಿದೆ. ,ಸರ್ವರು ಸಮಾನರು ಎಂಬ ತತ್ವವನ್ನು ಹೇಳಿದ ಅಂಬೇಡ್ಕರ ಅವರು, ಮಾನವೀಯ ಮೌಲ್ಯಗಳು ಜಗತ್ತಿಗೆ ಸಾರಿದ ಮಹಾನ್ ಚೇತನ ಎಂದು ಹೇಳಿದರು.
ವಿಶ್ವ ಮೆಚ್ಚುವಂತ ಸಂವಿಧಾನ ರೂಪಿಸಿರುವುದಲ್ಲದೆ, ಸರ್ವ ಸಮುದಾಯದ ಏಳಿಗೆಗೆ ಅಡಿಪಾಯವನ್ನು ಸಂವಿಧಾನದ ಮೂಲಕ ಹಾಕಿಕೊಟ್ಟಿದ್ದಾರೆ. ಅವರ ತತ್ವ,ಸಿದ್ದಂತ,,ಮಾರ್ಗದಲ್ಲಿ ಜೀವನ ಸಾಗಿಸಬೇಕು ಎಂದು ಹೇಳಿದರು.ಬಾಬಾಸಾಹೇಬ ಅಂಬೇಡ್ಕರವರು ಮಾತೃ ಹೃದಯದ ಮಹಾನಾಯಕ .ಇಡೀ ಜಗತ್ತಿನಲ್ಲಿಯೇ ಅದ್ಬುತವಾದ ವಿದ್ಯಾರ್ಜನೆ ಮಾಡಿ ಜ್ಞಾನ ಕಣಜ ಎನಿಸಿಕೊಂಡಿದ್ದಾರೆ.ಅಂದಿನ ದಿನಮಾನಗಳಲ್ಲಿ ಸಾಕಷ್ಟು ಕಷ್ಟ,ನಷ್ಟಗಳ ಮಧ್ಯ ಬದುಕಿ,ಬಡವರು,ಮಹಿಳೆಯರು,ದೀನ ದುರ್ಬಲರ ಶ್ರೇಯೋಭಿವೃದ್ದಿಗಾಗಿ ಹಗಲಿರಳು ಶ್ರಮಿಸಿದ್ದಾರೆ. ಸಾಮಾಜಿಕ,ಧಾರ್ಮಿಕ,ಆರ್ಥಿಕ ಬದಲಾವಣೆಯಾಗಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಎಂದು ಒತ್ತಿಹೇಳಿದ್ದಾರೆ.ಎಲ್ಲರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ಹೇಳಿದರು.
ದಲಿತ ಸಮನ್ವಯ ಸಮಿತಿ ಸಂಚಾಲಕ ಶಿವಾನಂದ ಮೂರಮನ, ಮುಖಂಡರಾದ ಭೀಮಾಶಂಕರ ಮೂರಮನ, ಪ್ರಶಾಂತ ಕಾಳೆ,ನಿಜಣ್ಣ ಕಾಳೆ, ಕಲ್ಲಪ್ಪ ಅಂಜುಟಗಿ,ಜಟ್ಟೆಪ್ಪ ರವಳಿ,ಇಲಿಯಾಸ ಬೊರಾಮಣಿ, ಭೀಮಣ್ಣ ಕವಲಗಿ,ಸತೀಶ ಕುಂಬಾರ, ಶ್ರೀಶೈಲ ಪೂಜಾರಿ,ಮುಸ್ತಕ ನಾಯ್ಕೋಡಿ,ಜಾವೀದ ಮೊಮಿನ, ಮರೇಪ್ಪ ಗಿರಣಿವಡ್ಡರ,ಜೆಡಿಎಸ್ ತಾಲೂಕ ಅಧ್ಯಕ್ಷ ಬಿ.ಡಿ.ಪಾಟೀಲ, ರವಿ ನಡಗಡ್ಡಿ, ಸುರೇಶ ನಡಗಡ್ಡಿ,ಎಸ್.ಜೆ.ಮಾಡ್ಯಾಳ,ಮಲ್ಕಪ್ಪ ನಡಗಡ್ಡಿ,ಹುಚ್ಚಪ್ಪ ತಳವಾರ, ರಾಜು ಹಿರೇಬೇವನೂರ,ಸಂತೋಷ ಪರಸೇನವರ,ಅವಿನಾಶ ಬಗಲಿ, ಸಿದ್ದು ಬೇಲ್ಯಾಳ, ರುಕ್ಮುದ್ದಿನ ತದ್ದೇವಾಡಿ,ಆಜಂಜನೆಯಸ್ವಾಮಿ ಹೊಸಮನಿ,ಸುನೀಲ ಅಗರಖೇಡ,ದತ್ತು ಕೋಳಿ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.