ಮಹಾ ನಂದಿಗೆ ಮಹಾಮಸ್ತಕಾಭಿಷೇಕ

ಮೈಸೂರು: ನ.21:- ಅರಮನೆ ನಗರಿ ಮೈಸೂರಿನ ಚಾಮುಂಡಿಬೆಟ್ಟದಲಿರುವ ಮಹಾ ನಂದಿಗೆ ಇಂದು ಬೆಳಿಗ್ಗೆ 16ನೇ ಮಹಾಮಸ್ತಕಾಭಿಷೇಕವನ್ನು ಸರಳವಾಗಿ ನೆರವೇರಿಸಲಾಯಿತು.
ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಮೂರನೇ ಭಾನುವಾರ ಬೆಟ್ಟದ ಬಳಗದಿಂದ ಮಹಾಮಸ್ತಕಾಭಿಷೇಕ ನಡೆಯುತ್ತದೆ. ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮನಾಥ ಸ್ವಾಮೀಜಿ,ಹೊಸ ಮಠದ ಚಿದಾನಂದ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಅಭಿಷೇಕ ನೆರವೇರಿತು.
ಈ ಸಂಧರ್ಭದಲ್ಲಿ ಮಹಾನಂದಿಗೆ ಹಾಲು, ತುಪ್ಪ, ಅರಿಶಿಣ, ಕುಂಕುಮ, ಎಳನೀರು, ಜೇನುತುಪ್ಪ ಸೇರಿದಂತೆ 38 ದ್ರವ್ಯಗಳಿಂದ ಮಜ್ಜನ ನೆರವೇರಿಸಲಾಯಿತು.
ಅಭಿಷೇಕದ ನಂತರ ನಂದಿಗೆ ಅಲಂಕಾರ, ಮಂಗಳಾರತಿ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿಸಿದರು.
ಕೋವಿಡ್ ಹಿನ್ನಲೆ ಸರಳ ಹಾಗೂ ಸಾಂಪ್ರದಾಯಿಕವಾಗಿ ನೆರವೇರಿತು. 16ನೇ ವರ್ಷದ ಮಹಾಮಸ್ತಕಭಿಷೇಕಕ್ಕೆ ನೂರಾರು ಭಕ್ತರು ಸಾಕ್ಷಿಯಾದರು.
ಪೂಜಾ ಕೈಂಕರ್ಯಗಳ ನಂತರ ಮಹಾಮಸ್ತಕಾಭಿಷೇಕಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ತೀರ್ಥ, ಪ್ರಸಾದಗಳನ್ನು ವಿತರಿಸಲಾಯಿತು.