
ಮಂಗಳೂರು,ಏ.೫-ನಗರದ ನಾಗುರಿ ಬಳಿ ಕಳೆದ ನವೆಂಬರ್ ೧೯ರಂದು ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಪೋಟದ ಶಂಕಿತ ಉಗ್ರ ಶಾರೀಕ್ ಬಳಸುತ್ತಿದ್ದ ಪೆನ್ ಡ್ರೈವ್ ಹಾಗೂ ಅದರಲ್ಲಿದ ಪಿಡಿಎಫ್ ಪೈಲ್‌ಗಳಲ್ಲಿ ಆತಂಕಕಾರಿ ಸಂಗತಿ ಲಭ್ಯವಾಗಿವೆ.
ರಾಷ್ಟ್ರೀಯ ತನಿಖಾ ತಂಡ(ಎನ್‌ಐಎ) ತಂಡ ಶಾರಿಕ್ ಬಳಿ ೮೦ಜಿಬಿ ಸಾಮರ್ಥ್ಯದ ಪೆನ್ ಡ್ರೈವ್ ಪತ್ತೆ ಹಚ್ಚಿದೆ. ಆ ಪೆನ್ ಡ್ರೈವ್‌ನಲ್ಲಿ ಶಂಕಿತರ ಹಲವಾರು ಸ್ಫೋಟಕ ಪಿಡಿಎಫ್ ನ ರಹಸ್ಯ ಫೈಲ್‌ಗಳು ಪತ್ತೆಯಾಗಿವೆ.
ಹಲವು ಪ್ರಚೋದನಕಾರಿ ವಿಡಿಯೋಗಳು, ಹಿಟ್ ಸ್ಕ್ವಾಡ್ ಬಗೆಗಿನ ಮಾಹಿತಿ, ಕೋಮು ವಿಧ್ವಂಸಕ ಕೃತ್ಯಗಳ ಸಂಚು ಸೇರಿ ಹಲವು ಮಾಹಿತಿಗಳು ಸಿಕ್ಕಿವೆ.
ಕುಕೃತ್ಯ ನಡೆಸಲು ಎಲ್ಲೆಲ್ಲಿ ಸಂಚು ಮಾಡಿದ್ದರು ಅದರ ಸ್ಥಳದ ವಿಡಿಯೋಗಳು ಪತ್ತೆಯಾಗಿವೆ. ೮೦ ಜಿಬಿ ಪೆನ್ ಡ್ರೈವ್ ನಲ್ಲಿ ಭಾಷಣಗಳು, ವಿಧ್ವಂಸಕ ಕೃತ್ಯಕ್ಕೆ ಬೇಕಾದ ಅಂಶಗಳು ಸಿಕ್ಕಿವೆ. ಅಲ್ಲದೆ ಶಾರಿಕ್ ಹಾಗೂ ಮತಿನ್ ಇಬ್ಬರೂ ಕಾನೂನು ಸುವ್ಯವಸ್ಥೆ ಹದಗೆಡಲು ಏನೇನು ಮಾಡಬೇಕಾಗಿದೆಯೋ ಎಂಬ ಬಗ್ಗೆ ತನ್ನ ಸಹಚರರಿಗೆ ವಿಡಿಯೋ ಮಾಡಿ ಸೂಚನೆ ನೀಡಿದ್ದರು.
ಮೌಲ್ವಿಗಾಗಿ ಹುಡುಕಾಟ:
ಮುಖ್ಯವಾಗಿ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಆರ್ಟಿಕಲ್ ೩೭೦ ರದ್ದು ಬಗ್ಗೆಯೇ ಹೆಚ್ಚು ಪ್ರಚೋದನಕಾರಿ ವಿಡಿಯೋಗಳು ಪೆನ್ ಡ್ರೈವ್‌ನಲ್ಲಿ ಪತ್ತೆಯಾಗಿವೆ. ಎಲ್ಲಾ ವಿಡಿಯೋಗಳನ್ನು ಎನ್ ಐಎ ಪರಿಶೀಲನೆ ನಡೆಸಿದೆ. ೨೦೧೭ರಲ್ಲಿ ತೀರ್ಥಹಳ್ಳಿಯಲ್ಲಿ ಮಾಡಿರುವ ಮೌಲ್ವಿ ಭಾಷಣ ಪತ್ತೆಯಾಗಿದೆ.
ಕಾಫೀರರನ್ನು (ಮುಸ್ಲಿಮೇತರನ್ನು) ಮಟ್ಟ ಹಾಕುವ ಸಮಯ ಬಂದಿದೆ’ ಜಿಹಾದಿ ಮೂಲಕ ಇಸ್ಲಾಂನ್ನು ಉಳಿಸೋಣ ಎಂದು ಮೌಲ್ವಿ ಭಾಷಣ ಮಾಡಿದ್ದಾರೆ. ಈ ಭಾಷಣದಿಂದ ಹಲವು ಯುವಕರು ಪ್ರಚೋದಿತರಾಗಿ ಉಗ್ರವಾದಕ್ಕೆ ವಾಲಿದ್ದರು. ಪೆನ್ ಡ್ರೈವ್ ನಲ್ಲಿ ಭಾಷಣದ ತುಣುಕು ಪತ್ತೆಯಾದ ಕೂಡಲೇ ಮೌಲ್ವಿಗಾಗಿ ಎನ್?ಐಎ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.
ಮಾದರಿ ಆಹಾರ ಸಂಗ್ರಹ:
ಮತ್ತೊಂದೆಡೆ ಶಂಕಿತ ಉಗ್ರ ಶಾರಿಕ್ ವಿಚಾರಣೆ ವೇಳೆ ಅನೇಕ ಸಂಗತಿಗಳನ್ನು ಬಾಯ್ಬಿಟ್ಟಿದ್ದಾನೆ. ಶಿವಮೊಗ್ಗದ ಕಾಡುಗಳಲ್ಲಿ ಕೆಲವು ಶಂಕಿತರು ನೆಲೆಸಿದ್ದು ಇವರೆಲ್ಲ ವೀರಪ್ಪನ್ ಮಾದರಿಯಲ್ಲಿ ಆಹಾರ ಸಂಗ್ರಹಣೆ ಮಾಡಿದ್ದ ಮಾಹಿತಿ ನೀಡಿದ್ದಾನೆ. ಮತೀನ್ ಜೊತೆ ಸೇರಿ ಮಾಡಿದ್ದ ಸಂಚು, ಪ್ಲಾಸ್ಟಿಕ್ ಡ್ರಮ್?ಗಳನ್ನ ನೆಲದಲ್ಲಿ ಹೂತು ಆಹಾರ ಸಂಗ್ರಹಣೆ ಮಾಡಿರುವುದನ್ನು ಹೇಳಿದ್ದಾನೆ.
ಆಹಾರವನ್ನು ಕೆಡದಂತೆ ಸಂಗ್ರಹಿಸಿಡಲು ಪ್ಲಾಸ್ಟಿಕ್ ಡ್ರಮ್?ಗಳನ್ನು ಬಳಸಲಾಗುತ್ತಿತ್ತಂತೆ. ಶಾರಿಕ್ ಅಂಡ್ ಗ್ಯಾಂಗ್ ನಿರಂತರವಾಗಿ ಕಾಡಿನಲ್ಲಿ ತರಬೇತಿ ಹಾಗೂ ಪ್ಲಾನಿಂಗ್ ಮಾಡಲು ಕಾಡುಗಳ ಮೊರೆ ಹೋಗುತ್ತಿದ್ದರು. ಈ ಹಿನ್ನಲೆಯಲ್ಲಿ ಆಹಾರ ವಸ್ತುಗಳ ಅಗತ್ಯತೆ ಹೆಚ್ಚಾಗಿತ್ತು. ಹೀಗಾಗಿ ಶಿವಮೊಗ್ಗದ ಕಾಡುಗಳಲ್ಲಿ ಆಹಾರ ಪದಾರ್ಥ ಸಂಗ್ರಹ ಮಾಡ್ತಿದ್ದರು. ಸದ್ಯ ಪೆನ್ ಡ್ರೈವ್?ನಲ್ಲಿ ಸಿಕ್ಕ ಒಂದೊಂದು ಅಂಶದ ಬಗ್ಗೆ ಕೂಡ ಎನ್?ಐಎ ಅಧಿಕಾರಿಗಳು ಕೂಲಂಕುಷವಾಗಿ ಪರಿಶೀಲನೆ ನಡೆಸುತ್ತಿದ್ದಾರೆ.