ಮಹಾಸಭೆಯಲ್ಲಿ ವಿದ್ಯಾರ್ಥಿಗಳು ಹಾಗೂ ಅಂಗವಿಕಲರ ಸನ್ಮಾನ

ಎಮ್ಮಿಗನೂರು ಡಿ 20 : ಎಮ್ಮಿಗನೂರಿನ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅದ್ಯಕ್ಷ ಎನ್. ನಾಗರಾಜ ಅದ್ಯಕ್ಷತೆಯಲ್ಲಿ ಶನಿವಾರ ಜರುಗಿತು
ಸಂಘದ ಕಾರ್ಯನಿರ್ವಹಕ ಬಾವಿಕಟ್ಟೆ ವಿರೇಶ ಮತನಾಡಿ, ಪ್ರಸಕ್ತಸಾಲಿನಲ್ಲಿ 4ಲಕ್ಷದ 11 ಸಾವಿರ ರೂ ನಿವ್ವಳ ಲಾಭ ಗಳಿಸಿದ್ದು, ಹಾಗೂ 1 ಲಕ್ಷದ 72 ಸಾವಿರ ಬೊನಸ್ 123 ಸದಸ್ಯರಿಗೆ ವಿತರಿಸಲಾಗಿದೆ ಎಂದರು
ನಂತರ ರಾ.ಬ.ಕೋ ಒಕ್ಕೂಟದ ವ್ಯವಸ್ಥಾಪಕ ಸಭೆಯಲ್ಲಿ ಜೆ.ಕೆ. ಎರಿಸ್ವಾಮಿ ಮತನಾಡಿ, ಹೈನುಗಾರಿಕೆಯನ್ನು ಅವಲಂಬಿಸಿ ಸ್ವಾವಲಂಬಿ ಬದುಕು ರೂಪಿಸಿ ಕೊಳ್ಳುವ ಜೋತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು ನಂತರ ಸಂಘದಿಂದ ಗ್ರಾಮದಲ್ಲಿ ಎಸ್ ಎಸ್ ಎಲ್ ಸಿ, ಪಿಯುಸಿ, ಉತ್ತಮ ಸಾಧನೆ ಗೈದ ವಿದ್ಯಾರ್ಥಿಗಳು ಹಾಗೂ ಅಂಗವಿಕಲ ಬಸವರಾಜ ಸನ್ಮಾನಿಸಿ ಪೋತ್ಸಾಹ ನಗದು ಹಣ ನೀಡಲಾಗಿತು .
ಈ ವೇಳೆ ಸಂಘದ ಅದ್ಯಕ್ಷ ಎನ್. ನಾಗರಾಜ ಉಪಾದ್ಯಕ್ಷ ಇ. ಶಿವಾರೆಡ್ಡಿ, ಮುಖಂಡರಾದ ಬಿ. ಸದಾಶಿವಪ್ಪ, ಬಿ. ಮಹೇಶಗೌಡ, ರಾಮಚಂದ್ರಪ್ಪ, ಬಿಎಂಸಿ ನಾಗರಾಜ, ಸಿಂಬ್ಬದಿ, ಸದಸ್ಯರು ಇದ್ದರು