ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀಶೈಲಂಗೆ ವಿಶೇಷ ಬಸ್‍ಗಳ ಕಾರ್ಯಾಚರಣೆ

ಕಲಬುರಗಿ:ಮಾ.5:ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಇದೇ ಮಾರ್ಚ್ 8 ರಂದು ಶ್ರೀಶೈಲಂನಲ್ಲಿ ರಥೋತ್ಸವಕ್ಕೆ ಜರುಗಲಿದ್ದು, ಈ ಸಂದರ್ಭದಲ್ಲಿ ಭಕ್ತರ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕಲಬುರಗಿ ವಿಭಾಗ-1 ವತಿಯಿಂದ ಇದೇ ಮಾರ್ಚ್ 6 ರಿಂದ 11 ರವರೆಗೆ ಕಲಬುರಗಿ ಘಟಕ-1 ಮತ್ತು 4, ಚಿಂಚೋಳಿ, ಚಿತ್ತಾಪುರ, ಕಾಳಗಿ ಮತ್ತು ಸೇಡಂ ಘಟಕಗಳಿಂದ ಶ್ರೀಶೈಲಂಗೆ ವಿಶೇಷ ಬಸ್‍ಗಳ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಲಬುರಗಿ ವಿಭಾಗ-1ರ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

 ಮೇಲ್ಕಂಡ ಘಟಕಗಳ ವ್ಯಾಪ್ತಿಗೆ ಬರುವ ಕಲಬುರಗಿ, ಚಿಂಚೋಳಿ, ಚಿತ್ತಾಪೂರ, ಕಾಳಗಿ, ಕಮಲಾಪೂರ, ಶಹಾಬಾದ ಮತ್ತು ಸೇಡಂ ತಾಲೂಕು ಪ್ರದೇಶದಿಂದ ಹಾಗೂ ಇತರೆ ಗ್ರಾಮಗಳಿಂದ ನೇರವಾಗಿ 45 ರಿಂದ 50 ಜನರು ಒಟ್ಟಿಗೆ ಸೇರಿ ಶ್ರೀಶೈಲಂಗೆ ಪ್ರಯಾಣಿಸಲು ಬಂದಲ್ಲಿ, ಪ್ರಯಾಣಿಕರು ಪ್ರಯಾಣಿಸುವ ಗ್ರಾಮ/ಸ್ಥಳದಿಂದಲೇ ನೇರವಾಗಿ ಶ್ರೀಶೈಲಂಗೆ ಹೆಚ್ಚಿನ ವಾಹನಗಳ ಸಾರಿಗೆ ಸೌಕರ್ಯ ಕಲ್ಪಿಸಲಾಗುತ್ತದೆ. 
  ಹೆಚ್ಚಿನ ಮಾಹಿತಿಗಾಗಿ ವಿಭಾಗೀಯ ಸಾರಿಗೆ ಅಧಿಕಾರಿ-7760992102, ಕಲಬುರಗಿ ಘಟಕ-1ರ ಘಟಕ ವ್ಯವಸ್ಥಾಪಕರು-7760992113, ಕಲಬುರಗಿ ಘಟಕ-4ರ ಘಟಕ ವ್ಯವಸ್ಥಾಪಕ-7022012103, ಚಿಂಚೋಳಿ ಘಟಕದ ಘಟಕ ವ್ಯವಸ್ಥಾಪಕ-7760992117, ಚಿತ್ತಾಪೂರ ಘಟಕದ ಘಟಕ ವ್ಯವಸ್ಥಾಪಕ-7760992119, ಕಾಳಗಿ ಘಟಕದ ಘಟಕ ವ್ಯವಸ್ಥಾಪಕ-7760992120 ಹಾಗೂ ಸೇಡಂ ಘಟಕದ ಘಟಕ ವ್ಯವಸ್ಥಾಪಕರ ಮೊಬೈಲ್ ಸಂಖ್ಯೆ 7760992466 ಗಳಿಗೆ ಸಂಪರ್ಕಿಸಬೇಕು.
   ಸಾರ್ವಜನಿಕ ಪ್ರಯಾಣಿಕರು/ಯಾತ್ರಾರ್ಥಿಗಳು ಈ ಹೆಚ್ಚುವರಿ ವಿಶೇಷ ಬಸ್‍ಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.