ಮಹಾಶಿವರಾತ್ರಿ ಭಕ್ತರೊಂದಿಗೆ ಶ್ರೀಗಳು ಇಷ್ಟಲಿಂಗ ಪೂಜೆ

ಸೇಡಂ,ಮಾ,10: ತಾಲೂಕಿನ ಕೋಡ್ಲಾ ಗ್ರಾಮದ ಶ್ರೀ ಉರಿಲಿಂಗಪೆದ್ದಿಶ್ವರ ಮಹಾಸಂಸ್ಥಾನ ಮಠದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಮಹಾಶಿವರಾತ್ರಿ ಹಬ್ಬದ ನಿಮಿತ್ಯ ಶುಕ್ರವಾರ ಭಕ್ತರು ಇಷ್ಟಲಿಂಗ ಪೂಜೆ ಮಾಡಿದರು. ಮಠದ ಪರಮ ಪೂಜ್ಯ ಶ್ರೀ ಡಾ.ನಂಜುಂಡ ಮಹಾ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆದ ಇಷ್ಟಲಿಂಗ ಪೂಜೆಯಲ್ಲಿ ತಾಲ್ಲೂಕು ಸೇರಿದಂತೆ ವಿವಿಧೆಡೆಯ ಭಕ್ತರು ಪಾಲ್ಗೊಂಡು ಪೂಜೆ ನೆರವೇರಿಸಿದರು. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಪಾಲ್ಗೊಂಡರು, ಕೈಯಲ್ಲಿ ಲಿಂಗವಿಟ್ಟು, ವಿವಿಧ ಧಾರ್ಮಿಕ ಚಟುವಟಿಕೆಯ ಮೂಲಕ ಪೂಜೆ ಮಾಡಿದರು. ಬೆಳಗ್ಗೆಯಿಂದವ್ರತ ಉಪವಾಸ ಹಿಡಿದ ಭಕ್ತರು ಶುಕ್ರವಾರ ಸಂಜೆ ಇಷ್ಟಲಿಂಗ ಪೂಜೆ ಮಾಡಿದ ಬಳಿಕ ಪ್ರಸಾದ ಸ್ವೀಕರಿಸಿವ್ರತ ಸಮಾಪ್ತಿ ಗೊಳಿಸಿದರು.ನಂತರ ರಾತ್ರಿಯಿಡಿ ಮಠದಲ್ಲಿ ಭಕ್ತರಿಂದ ಭಜನೆ ಕಾರ್ಯಕ್ರಮ ನಡೆಯಿತು. ಈ ಹಿಂದೆ ಮಠದ ವತಿಯಿಂದ ಲಿಂಗ ದೀಕ್ಷೆ ಪಡೆದ ಭಕ್ತರು ಇಷ್ಟಲಿಂಗ ಪೂಜೆಯಲ್ಲಿ ಪಾಲ್ಗೊಂಡಿದ್ದರು.ಅಲ್ಲದೆ, ಹೊಸದಾಗಿ 100ಕ್ಕೊ ಅಧಿಕ ಭಕ್ತರು ಲಿಂಗ ದೀಕ್ಷೆಯನ್ನು ಪಡೆದಿದ್ದಾರೆ ಎಂದು ಶ್ರೀಮಠದ ಭಕ್ತರೊಬ್ಬರು ತಿಳಿಸಿದರು. ಶ್ರೀ ಉರಿಲಿಂಗಪೆದ್ದಿಶ್ವರ ಮಹಾಸಂಸ್ಥಾನ ಮಠದ ಪರಮ ಪೂಜ್ಯ ಶ್ರೀ ಡಾ.ನಂಜುಂಡ ಮಹಾಸ್ವಾಮೀಜಿ ಮಾತನಾಡಿ, ಲಿಂಗ ಧರಿಸಿದವರು ಯಾವುದೇ ಕಾರಣಕ್ಕೂ ಅಹಿಂಸೆ ಮಾಡದೇ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು.ಶರಣರ ಕಾಯಕ ಮತ್ತು ದಾಸೋಹ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಅಭಿವೃದ್ಧಿಯಲ್ಲಿ ಕೆಲಸ ಮಾಡಬೇಕು, ಎಂದು ಹೇಳಿದರು.ಮಠದ ಭಕ್ತರಾದ ಪರಮಣ್ಣ ನಾಯಿಕಲ್,ದೇವೀಂದ್ರಪ್ಪ ತೆಲ್ಕೂರ, ತಿಪ್ಪಯ್ಯ ,ದೇವನೂರು ದೊಡ್ಡ ಸಾಬಣ್ಣ ರೇಬ್ಬದ್ ಗುರಲಿಂಗಪ್ಪ ನೂಲಿ, ಲಕ್ಷ್ಮಣ ಮಂತ್ರಿ, ರವಿ ಕೋಡ್ಲಾ, ಮಹಾದೇವ ನೇರೆಟ್ಟಿ ಕೋಡ್ಲಾ, ಮೌನೇಶ್ ರೇಬ್ಬದ್, ಶಿವು ಮಂತ್ರಿ, ಶಿವಯೋಗಿ, ವಿಕಾಸ್ , ಅಂಬರೀಶ್ ಇದ್ದರು.