ಮಹಾಶಿವರಾತ್ರಿ ನಿಮಿತ್ತ ಗಂಗಾಜಲ ವಿತರಣೆ

ಔರಾದ :ಮಾ.9: ಮಹಾ ಶಿವರಾತ್ರಿ ನಿಮಿತ್ತ ಪಟ್ಟಣದ ಉದ್ಭವಲಿಂಗ ಶ್ರೀ ಅಮರೇಶ್ವರರ ಮಂದಿರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಗಂಗಾ ಜಲ ವಿತರಣೆ ಮಾಡಲಾಯಿತು.

ಪಟ್ಟಣದ ಐತಿಹಾಸಿಕ ಪ್ರಸಿದ್ಧಿ ಪಡೆದ ಕಲ್ಯಾಣ ಕರ್ನಾಟಕ ಭಾಗದ ಜನರ ಇಷ್ಟಾರ್ಥ ಪೂರೈಸುವ ಕಾಶಿ ಮಾದರಿಯ ಉದ್ಭವಲಿಂಗ ಅಮರೇಶ್ವರ ಮಂದಿರದಲ್ಲಿ ಮಹಾ ಶಿವರಾತ್ರಿ ನಿಮಿತ್ತ ಇಷ್ಟಲಿಂಗ ಪೂಜೆಗಾಗಿ ಪ್ರತಿ ವರ್ಷ ಗಂಗಾ ಜಲ ವಿತರಣೆ ಮಾಡುವ ಪದ್ಧತಿ ಸುಮಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ತಾಲೂಕು ಆಡಳಿತ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಶುಕ್ರವಾರ ಮಧ್ಯಾಹ್ನ ಗಂಗಾಜಲಕ್ಕೆ ವಿಶೇಷ ಪೂಜೆ ಸಲ್ಲಿಸಿ ಭಕ್ತರಿಗೆ ಗಂಗಾಜಲ ವಿತರಣೆ ಮಾಡುತ್ತಾರೆ.

ಈ ಸಂದರ್ಭದಲ್ಲಿ ತಾಲೂಕು ಆಡಳಿತಾಧಿಕಾರಿ ಹಾಗೂ ಸಿಬ್ಬಂದಿಗಳು, ದೇವಸ್ಥಾನ ಕಮಿಟಿ ಮಾಜಿ ಅಧ್ಯಕ್ಷ ಬಸವರಾಜ ದೇಶಮುಖ, ಶರಣಪ್ಪ ಪಂಚಾಕ್ಷರಿ, ನ್ಯಾಯಾಧೀಶರಾದ ಶಿವಕುಮಾರ ದೇಶಮುಖ, ಶಿವರಾಜ ಅಲ್ಮಾಜೆ, ಸಿದ್ರಾಮ ಹಳೆಂಬುರೆ, ಪಿಎಸ್‍ಐ ಉಪೇಂದ್ರಕುಮಾರ, ಅನಿಲ ಬೆಲೂರೆ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.