ಮಹಾವೀರ ಸ್ವಾಮಿಯ ತ್ಯಾಗ ಮತ್ತು ಅಹಿಂಸಾ ತತ್ವಗಳು ಬದುಕಿಗೆ ಪ್ರೇರಣೆ

ಮಂಗಳೂರು, ಎ.೨೭- ಭಗವಾನ್ ಮಹಾವೀರ ಸ್ವಾಮಿಯ ತ್ಯಾಗ ಮತ್ತು ಅಹಿಂಸಾ ತತ್ವಗಳು ಪ್ರತಿಯೊಬ್ಬರ ಬದುಕಿಗೆ ಪ್ರೇರಣೆಯಾದಾಗ ಜಗತ್ತಿನಲ್ಲಿ ಸುಭೀಕ್ಷೆ ನೆಲೆಸಲು ಸಾಧ್ಯ ಎಂದು ಜೈನ್ ಮಿಲನ್ ರಾಜ್ಯಾಧ್ಯಕ್ಷ ಪುಷ್ಪರಾಜ್ ಜೈನ್ ಹೇಳಿದರು.
ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಕಛೇರಿಯಲ್ಲಿ ಸಾಂಕೇತಿಕವಾಗಿ ಆಚರಿಸಲಾದ ಮಹಾವೀರ ಜಯಂತಿ ಕಾರ್ಯಕ್ರಮವನ್ನು ಅವರು ದೀಪಬೆಳಗಿಸಿ ಉದ್ಘಾಟಿಸಿದ ಬಳಿಕ ಮಾತನಾಡಿದರು. ಕೋವಿಡ್ ೧೯ ಕಾರಣದಿಂದ ಮಹಾವೀರ ಜಯಂತಿಯನ್ನು ಅತ್ಯಂತ ಸರಳವಾಗಿ
ಆಚರಿಸಲಾಗಿದ್ದು, ಸ್ವಾಮಿಯ ಕೃಪೆಯಿಂದ ಕೊರೋನಾ ಮಹಾಮಾರಿ ಶೀಘ್ರ ತೊಲಗಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ, ಮಂಗಳೂರು ಜೈನ್ ಮಿಲನ್ ಕಾರ್ಯದರ್ಶಿ ಸಿದ್ಧಾರ್ಥ ಅಜ್ರಿ, ರಂಗನಿರ್ದೇಶಕ ಮೌನೇಶ ವಿಶ್ವಕರ್ಮ ಉಪಸ್ಥಿತರಿದ್ದರು.