ಮಹಾವೀರ ಜಯಂತಿ

ಲಕ್ಷ್ಮೇಶ್ವರ, ಏ 5 : ಇಲ್ಲಿನ ಇತಿಹಾಸ ಪ್ರಸಿದ್ಧ ಶಂಖ ಬಸದಿ ಮತ್ತು ಅನಂತನಾಥ ಬಸದಿಯಲ್ಲಿ ಮಂಗಳವಾರ ಭಗವಾನ್ ಮಹಾವೀರರ ಜಯಂತಿಯನ್ನು ಜೈನ್ ಸಮಾಜ ಬಾಂಧವರು ಭಯ ಭಕ್ತಿಯಿಂದ ಆಚರಿಸಿದರು. ಶಂಕ ಬಸದಿಯಲ್ಲಿ ಜೈನ್ ಸಮುದಾಯದ ಮಹಿಳೆಯರು ಮಹಾವೀರರ ಮೂರ್ತಿಯನ್ನು ತೊಟ್ಟಿಲಲ್ಲಿ ಹಾಕಿ ತೂಗಿದರು.
ಜಯಂತಿ ಹಿನ್ನೆಲೆಯಲ್ಲಿ ಎರಡೂ ಬಸದಿಗಳಲ್ಲಿ ವಿಶೇಷ ಪೂಜೆ ಹೋಮ ಹವನಗಳನ್ನು ಹಮ್ಮಿಕೊಳ್ಳಲಾಗಿತ್ತು. ಆಗಮಿಸಿದ ಭಕ್ತರಿಗಾಗಿ ಅನ್ನ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಜೈನ ಧರ್ಮದ ಭಜನೆ, ಕೀರ್ತನೆಗಳು ಜರುಗಿದವು.