ಮಹಾವೀರ ಜಯಂತಿ ಕಾರ್ಯಕ್ರಮ


ಸಂಜೆವಾಣಿ ಪ್ರತಿನಿಧಿಯಿಂದ)
ಹರಪನಹಳ್ಳಿ, ಏ.05: ಜೀವಿಸು, ಜೀವಿಸಲು ಬಿಡು ಎನ್ನುವ ಸಂದೇಶ ಜಗತ್ತಿಗೆ ಸಾರಿದ ವರ್ಧಮಾನ ಮಹಾವೀರರ ತತ್ವಾದರ್ಶಗಳು ಸರ್ವ ಕಾಲಕ್ಕೂ ಪ್ರಸ್ತುತ’ ಎಂದು ಉಪವಿಭಾಗಾಧಿಕಾರಿ ಟಿ.ವಿ. ಪ್ರಕಾಶ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಆಯೋಜಿಸಿದ್ದ ವರ್ಧಮಾನ ಮಹಾವೀರರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ಅಹಿಂಸೆ ಸಾರಿದ ವರ್ಧಮಾನ ಮಹಾವೀರರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳೋಣ. ಅವರ ಚಿಂತನೆಗಳ ಅಹಿಂಸಾ ಧರ್ಮ ಪ್ರಪಂಚದಲ್ಲಿಯೇ ಶ್ರೇಷ್ಠವಾಗಿದೆ ಎಂದರು.
ಇದಕ್ಕೂ ಮುನ್ನ ಜೈನ್ ಸಮಾಜದ ಯುವಕರು ಪಟ್ಟಣದಲ್ಲಿ ಬೈಕ್ ರ್ಯಾಲಿ ನಡೆಸಿದರು.
ತಾಲ್ಲೂಕು ಜೈನ ಸಮಾಜದ ಮುಖಂಡ ಪದ್ಮನಾಬ್, ಅನಂತರಾಜ್ ಜೈನ್, ಗೌತಮ ಜೈನ್, ಯು.ಪಿ. ನಾಗರಾಜ, ಶಾಂತರಾಜ್ ಜೈನ, ಪವನ ಇತರರಿದ್ದರು.