ಮಹಾವೀರ ಜಯಂತಿ ಆಚರಣೆ

ನವಲಗುಂದ,ಏ21 : ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲ್ಲೂಕಾ ಆಡಳಿತ ಏರ್ಪಡಿಸಿದ್ದ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಶಿರೇಸ್ತದಾರ ರಾಜು ದೊಡಮನಿ ಹಾಗೂ ಜೈನ ಸಮುದಾಯದ ಅಧ್ಯಕ್ಷ ವಿ ಪಿ ಪಾಟೀಲ್ ಅವರು ವರ್ಧಮಾನ ಮಹಾವೀರರ ಭಾವಚಿತ್ರಕ್ಕೆ ಪೂಜೆಯೊಂದಿಗೆ ಪುಷ್ಪನಮನ ಸಲ್ಲಿಸಿದರು.
ಈ ವೇಳೆ ಅಧ್ಯಕ್ಷ ವಿ ಪಿ ಪಾಟೀಲ್ ಮಾತನಾಡಿ ಸತ್ಯ ಅಹಿಂಸಾ ತತ್ವಾದರ್ಶಗಳನ್ನು ಭೋದಿಸಿದ ಭಗವಾನ ಮಹಾವೀರ ಅವರನ್ನು ಇಂದು ದೇಶದ ಎಲ್ಲ ಸಮುದಾಯದವರು ನೆನೆಯಬೇಕು ಎಂದರು.
ಜೈನ ಸಮಾಜ ಮುಖಂಡರಾದ ಸೋಮನಗೌಡ ಪಾಟೀಲ್, ಶಾಂತು ಪಾಟೀಲ್, ವಿಜಯಗೌಡ ಪಾಟೀಲ್, ಸಂತೋಷ ಪಾಟೀಲ್, ತಹಸೀಲ್ದಾರ್ ಕಚೇರಿ ಸಿಬ್ಬಂದಿಗಳಾದ ಡಿ ಎನ್ ಪಾಟೀಲ್, ನಾಗರಾಜ್ ಕರಿಸಕ್ರಣ್ಣವರ, ಟಿ ಎಲ್ ಮುತ್ತಣ್ಣವರ ಖಾಜಾಸಾಬ್ ಕೆರೂರ್, ಇತರರು ಉಪಸ್ಥಿತರಿದ್ದರು.