ಮಹಾವೀರರ ಬೋಧನೆ ಸರ್ವಜನಾಂಗ ಕಲ್ಯಾಣಕ್ಕೆ ಪೂರಕ

ಇಂಡಿ:ಏ.22:ಮಹಾವೀರರ ಪಂಚಾಣುವ್ರತಗಳಾದ ಸತ್ಯ,ಅಹಿಂಸೆ,ಅಚೌರ್ಯ,ಬ್ರಹ್ಮಚರ್ಯ ಹಾಗೂ ಅಪರಿಗ್ರಹ ಇವು ಮಹಾವೀರರು ಸಮಾಜಕ್ಕೆ ತೋರಿದ ದೊಡ್ಡ ದಾರಿ. ಮತ್ತು ಸರ್ವ ಜನಾಂಗದ ಸಕಲ ಜೀವರಾಶಿಗಳಿಗೆ ಪೂರಕವಾಗಿವೆ ಎಂದು 108 ಶ್ರೀ ಸಕಲ ಕೀರ್ತಿ ಮುನಿ ಮಹಾರಾಜರು ಹೇಳಿದರು.
ಅವರು ಪಟ್ಟಣದ ದಿಗಂಬರ ಜೈನ ಬಸತಿಯಲ್ಲಿ ನಡೆದ ಮಹಾವೀರರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
105 ಸೂನೀತಿ ಅರೀಕಾ ಮಾತೋಶ್ರೀ ಮಾತನಾಡಿ ಸರ್ವ ಪ್ರಾಣಿಗಳಿಗೂ ಬದುಕುವ ಹಕ್ಕಿದೆ.ಅದನ್ನು ಕಿತ್ತುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಪ್ರಾಣಿ ಹಿಂಸೆ ನಿಲ್ಲಬೇಕು.ಸ್ತ್ರೀಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ತಾರತಮ್ಯ ತಪ್ಪು. ಅವಳು ಪುರುಷರಿಗೆ ಸಮಾನಳು. ಅವಳಿಗೆ ಧಾರ್ಮಿಕ ಸ್ವಾತಂತ್ರ್ಯ ಸಿಗುವಂತಾಗಬೇಕು ಎಂದರು.
ಇಂಡಿ ಜೈನ ಸಮಾಜದ ಅಧ್ಯಕ್ಷ ನ್ಯಾಯವಾದಿ ಅಜೀತ ಧನಶೆಟ್ಟಿ, ಉಪಾಧ್ಯಕ್ಷ ಚಂದನ ಧನಪಾಲ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಂತು ಧನಶೆಟ್ಟಿ, ಮಹಾವೀರ ಧನಶೆಟ್ಟಿ,ಶ್ರೀಕಾಂತ ದುರ್ಗಿ,ಅನಂತ ಕೋಟಿ,ಕಿರಣ ಧನಶೆಟ್ಟಿ,ಹೀರಾಚಂದ ಹಳ್ಳಿ,ಅಶೋಕ ಕಿರಣಗಿ,ಡಾ|| ಸತೀಶ ಶಹಾ,ನಿರಂಜನ ಶಹಾ,ರಾಜಕುಮಾರ ಧನಶೆಟ್ಟಿ,ಸತೀಶ ಪಾಂಡ್ರೆ,ತೀರ್ಥರಾಜ ಅಗರಖೇಡ, ಸಚೀನ ಗಾಂಧಿ,ಅಭಿನಂದನ ಕಿರಣಗಿ ಮತ್ತಿತರಿದ್ದರು.
ಮೆರವಣೆಗೆ ಆದಿನಾಥ ಜೈನ ಮಂದಿರದಿಂದ ಬಸವೇಶ್ವರ, ಅಂಬೇಡ್ಕರ, ಮಹಾವೀರ ವೃತ್ತದಿಂದ ಚಿಕ್ಕ ಬಸತಿಯಿಂದ ನಡೆಯಿತು.