ಅಥಣಿ : ಎ.5:ಮಹಾವೀರರು ಸಾರಿದ “ಅಹಿಂಸಾ ಪರಮೋಧಮರ್ಃ” ಎನ್ನುವ ಮೂಲ ಮಂತ್ರದಿಂದ ಜಗತ್ತಿಗೆ ಶಾಂತಿ ಹಾಗೂ ಅಹಿಂಸೆಯನ್ನು ಬೋಧಿಸಿ “ನೀನು ಜೀವಿಸು ಇತರರನ್ನು ಜೀವಿಸಲು ಬಿಡು” ಎನ್ನುವ ಮೂಲಕ ಪ್ರತಿಯೊಂದು ಜೀವಿಗೆ ಬದುಕುವ ಸ್ವಾತಂತ್ರ್ಯವಿದೆ ಎಂಬುದನ್ನು ತಿಳಿಸಿದವರು ಎಂದು ಯುವ ನಾಯಕ ಚಿದಾನಂದ ಸವದಿ ಹೇಳಿದರು
ಅವರು ತಾಲೂಕಿನ ದರೂರ, ಸಪ್ತಸಾಗರ ಖವಟಕೊಪ್ಪ, ಹಾಗೂ ತೀರ್ಥ ಗ್ರಾಮಗಳಲ್ಲಿ ಭಗವಾನ್ ಮಹಾವೀರ ಜನ್ಮ ಕಲ್ಯಾಣೋತ್ಸವ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಹಾವೀರರ ಮೂರ್ತಿಯ ಪಲ್ಲಕ್ಕಿ ಮೆರವಣಿಗೆ ಭಾಗವಹಿಸಿ ಪುಷ್ಪ ನಮನ ಸಲ್ಲಿಸಿ ಮಾತನಾಡುತ್ತಿದ್ದರು, ಮಹಾವೀರರು ತಮ್ಮ ಸುಖ, ಸಂಪತ್ತು, ಸಿರಿತನ ಎಲ್ಲವನ್ನು ತ್ಯಜಿಸಿ 12 ವರ್ಷಗಳ ಕಠಿಣ ತಪಸ್ಸಿನಿಂದ ಆತ್ಮಕಲ್ಯಾಣ ಮಾಡಿಕೊಂಡು ಜನರಿಲ್ಲಿದ್ದ ಅಂಧಕಾರ, ಮೌಢ್ಯ, ಅಜ್ಞಾನ ಮತ್ತು ಮೂಢನಂಬಿಕೆಗಳನ್ನು ದೂರ ಮಾಡಿ ಜನರ ಹೃದಯದಲ್ಲಿ ಜ್ಞಾನದ ಜ್ಯೋತಿ ಹಚ್ಚಿದವರು
ಮಹಾವೀರರ ಜನ್ಮ ಕಲ್ಯಾಣೋತ್ಸವವನ್ನು ಕೇವಲ ಜೈನ ಧರ್ಮಿಯರು ಮಾತ್ರವಲ್ಲದೇ ಇತರ ಧರ್ಮಿಯರು ಕೂಡ ಸ್ಮರಿಸುತ್ತಾರೆ ಎಂದರು,
ಈ ಸಂದರ್ಭದಲ್ಲಿ ಮುಖಂಡರಾದ ಅಣ್ಣಾಸಾಹೇಬ ನಾಯಿಕ, ಸಂಜಯ ನಾಡಗೌಡ, ಪ್ರದೀಪ ನಂದಗಾಂವ, ಅಮೂಲ ನಾಯಿಕ, ಸೇರಿದಂತೆ ಜೈನ ಸಮಾಜದ ಹಲವಾರು ಮುಖಂಡರು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು,