ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಂಪ್ರೋಕ್ಷಣೆ, ಮಂತ್ರಾಕ್ಷತೆ

ಪುತ್ತೂರು, ಎ.೨೨- ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೆಯ ಬಳಿಕ ಎ.೨೦ರಂದು ಸಂಪ್ರೋಕ್ಷಣೆ ಮತ್ತು ರಾತ್ರಿ ಮಂತ್ರಾಕ್ಷತೆ ಕಾರ್ಯಕ್ರಮ ನಡೆಯಿತು.

ದೇವಳದಲ್ಲಿ ರಾತ್ರಿ ಪೂಜೆಯ ಬಳಿಕ ಬ್ರಹ್ಮಶ್ರೀ ವೇ ಮೂ ಕುಂಟಾರು ರವೀಶ ತಂತ್ರಿ ಮಂತ್ರಾಕ್ಷತೆಯನ್ನು ಭಕ್ತರಿಗೆ ವಿತರಿಸಿದರು. ಇದೇ ಸಂದರ್ಭದಲ್ಲಿ ದೇವರ ನಿತ್ಯ ಬಲಿ ಉತ್ಸವ, ವಸಂತ ಕಟ್ಟೆಯಲ್ಲಿ ಪೂಜೆ ನಡೆಯಿತು.  ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್, ಪ್ರಧಾನ ಅರ್ಚಕರೂ ಸದಸ್ಯರೂ ಆಗಿರುವ ವಿ.ಎಸ್ ಭಟ್, ಸದಸ್ಯರಾದ ರವೀಂದ್ರನಾಥ ರೈ ಬಳ್ಳಮಜಲು, ಶೇಖರ್ ನಾರಾವಿ, ರಾಮಚಂದ್ರ ಕಾಮತ್, ಬಿ.ಐತ್ತಪ್ಪ ನಾಯ್ಕ್, ರಾಮ್‌ದಾಸ್ ಗೌಡ, ವೀಣಾ ಬಿ.ಕೆ. ಡಾ. ಸುಧಾ ಎಸ್ ರಾವ್, ದೇವಳದ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ದೇವಳದ ವಾಸ್ತು ಇಂಜಿನಿಯರ್ ಪಿ.ಜಿ.ಜಗನಿವಾಸ ರಾವ್ ಸೇರಿದಂತೆ ಹಲವಾರು  ಮಂದಿ  ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ದೇವಳದ ಪೂಜೆಯ ಆರಂಭದಲ್ಲಿ ಜಾತ್ರೋತ್ಸವದಲ್ಲಿ ವಿವಿಧ ಸೇವ ಕಾರ್ಯಕ್ಕೆ  ಪಾತ್ರರಾದ ದೇವಳದ ಅರ್ಚಕರು, ಪರಿಚಾರಕ ವರ್ಗಕ್ಕೆ ಸಂಪ್ರದಾಯದಂತೆ ಆರಂಭದಲ್ಲಿ ಹೊಸ ಬಟ್ಟೆಗಳನ್ನು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ವಿತರಿಸಿದರು.

ಅಂಙಣತ್ತಾಯ ಪಂಜುರ್ಲಿ ದೈವಗಳ ನೇಮ

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆಯ ಬಳಿಕ ಎ.೨೦ರಂದು ರಾತ್ರಿ ದೇವಳದ ಕೆರೆಯ ಬಳಿ ಅಂಙಣತ್ತಾಯ ಮತ್ತು ಪಂಜುರ್ಲಿ ದೈವಗಳ ನೇಮ ನಡಾವಳಿ ನಡೆಯಿತು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವಪ್ರಸಾದ್, ಪ್ರಧಾನ ಅರ್ಚಕರೂ ಸದಸ್ಯರು ಆಗಿರುವ ವಿ.ಎಸ್ ಭಟ್, ಸದಸ್ಯರಾದ ರವೀಂದ್ರನಾಥ ರೈ ಬಳ್ಳಮಜಲು, ಶೇಖರ್ ನಾರಾವಿ, ರಾಮಚಂದ್ರ ಕಾಮತ್, ಬಿ.ಐತ್ತಪ್ಪ ನಾಯ್ಕ್, ರಾಮ್‌ದಾಸ್ ಗೌಡ, ವೀಣಾ ಬಿ.ಕೆ. ಡಾ. ಸುಧಾ ಎಸ್ ರಾವ್, ದೇವಳದ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಪ್ರಸಾದ್ ಶೆಟ್ಟಿ, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು, ದೇವಪ್ಪ ನೋಂಡಾ, ರತ್ನಾಕರ ನಾಕ್ ಮತ್ತಿತರರು ಉಪಸ್ಥಿತರಿದ್ದರು. ಕಿಟ್ಟಣ್ಣ ಗೌಡ ಅವರು ಮಧ್ಯಸ್ಥರಾಗಿ ಸಹಕರಿಸಿದರು.