ಮಹಾಲಯ ಅಮಾವಾಸ್ಯೆ ಚಾಮುಂಡಿ ಬೆಟ್ಡ ಪ್ರವೇಶ ನಿರ್ಬಂಧ

ಮೈಸೂರು, ಸೆ .15- ಗುರುವಾರ ಮಹಾಲಯ ಅಮಾವಾಸ್ಯೆ ಇರುವುದರಿಂದ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರವೇಶಕ್ಕೆ ನಿರ್ಬಂಧ ವಿಧಿಸಿದೆ.

ಕೊರೊನಾ ಸೋಂಕಿತರ ಪ್ರಮಾಣ ದಿನೇ ದಿನೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಅಮಾವಾಸ್ಯೆಯೆಂದು ಭಕ್ತಾದಿಗಳ ಸಂಖ್ಯೆ ಹೆಚ್ಚಳವಾಗಲಿರುವ ಸಾಧ್ಯತೆ ಇರುವುದರಿಂದ ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಭಕ್ತರನ್ನು ನಿರ್ಬಂಧಿಸಲಾಗಿದೆ. ಅಲ್ಲದೇ ಬೆಟ್ಟಕ್ಕೆ ಸಂಪರ್ಕಿಸುವ ರಸ್ತೆಗಳನ್ನು ಕೂಡ ಬಂದ್ ಮಾಡಲು ನಿರ್ಧರಿಸಲಾಗಿದೆ.

ಕೊರೊನಾ ಹಾವಳಿಯಿಂದ ಆಷಾಢ ಶುಕ್ರವಾರ ಹಾಗೂ ಪ್ರತಿ ಶನಿವಾರ ಮತ್ತು ನಿರ್ಬಂಧಿಸಲಾಗಿತ್ತು. ‌ನಂತರ ಕೆಲ ದಿನಗಳಿಂದ ನಿರ್ಬಂಧದಲ್ಲಿ ಸಡಿಲಿಕೆ ಮಾಡಲಾಗಿತ್ತು. ಕೊರೊನಾ ಆರ್ಭಟ ಮುಂದುವರಿಯುತ್ತಿರುವುದರಿಂದ ಎಲ್ಲ ಸ್ಥಳಗಳಲ್ಲಿ ಸಾರ್ವಜನಿಕರು ನಿಶ್ಚಿಂತೆಯಿಂದ ಓಡಾಡುತ್ತಿದ್ದಾರೆ. ಮಹಾಲಯ ಅಮವಾಸ್ಯೆಯೆಂದು ಭಕ್ತಾದಿಗಳ ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ನಿರ್ಬಂಧ ಹೇರಲಾಗಿದೆ.