ಮಹಾಲಕ್ಷ್ಮೀ ದೇವಿ ದೇವಸ್ಥಾನಕ್ಕೆ ಸಚಿವ, ಕುಮಾರ ಭೇಟಿ

(ಸಂಜೆವಾಣಿ ವಾರ್ತೆ)
ರಾಯಚೂರು,ಏ.೨೬- ಸಿರವಾರ ತಾಲೂಕಿನ ಕಲ್ಲೂರಿನ ಮಹಾಲಕ್ಷ್ಮೀ ದೇವಿ ದೇವಸ್ಥಾನಕ್ಕೆ ರಾಜ್ಯ ಸಣ್ಣ ನೀರಾವರಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಬೋಸರಾಜ್, ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ ನಾಯಕ ಹಾಗೂ ಶಾಸಕ ಹಂಪಯ್ಯ ನಾಯಕ ಅವರು ಭೇಟಿ ವಿಶೇಷ ಪೂಜೆ ಸಲ್ಲಿಸಿ ನಾಡಿನ ಜನತೆಯ ಒಳಿತಿಗಾಗಿ ವಿಶೇಷ ಪ್ರಾಥನೆ ಸಲ್ಲಿಸಿದರು.
ನಂತರ ಸಚಿವ ಬೋಸರಾಜು ಮಾತನಾಡಿ, ಜಿಲ್ಲೆಯಲ್ಲಿ ತೀವ್ರ ಬರಗಾಲದಿಂದ ಜನರು ಕಂಗಾಲ್ ಆಗುವಂತೆ ಈ ವರ್ಷ ಮುಂಗಾರು ಆರಂಭದಲ್ಲಿ ಉತ್ತಮ ಮಳೆ ಸುರಿಸುವುದರ ಮೂಲಕ ನೆಲ ಜಲ ಸಮೃದ್ಧಿಯಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕಲ್ಲೂರ್ ಭೀಮರೆಡ್ಡಿ ಕಲ್ಲೂರ್, ಶರಣಯ್ಯ ನಾಯಕ, ಚುಕ್ಕಿ ಶಿವಕುಮಾರ, ದಾನಗೌಡ, ಜಹಾಂಗೀರ್ ಪಾಷಾ ಕಲ್ಲೂರ್, ಬಸವರಾಜ ಕಲ್ಲೂರು, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.