ಮಹಾಲಕ್ಷ್ಮಿ ದೇವಿ ಪೂಜಿಸಿದರೆ ಸಂಕಷ್ಟ ದೂರ: ಬಸವಲಿಂಗ ಅವಧೂತ ಶ್ರೀ

ಹುಮನಾಬಾದ್: ಮಾ.29:ಮಹಾಲಕ್ಷ್ಮಿ ದೇವಿ ಪೂಜಿಸಿದರೆ ಸಕಲ ಸಂಕಷ್ಟಗಳು ದೂರವಾಗುತ್ತವೆ ಎಂದು ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರು ನುಡಿದರು.

ತಾಲ್ಲೂಕಿನ ವರವಟ್ಟಿ(ಕೆ) ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಿಯ ಜಾತ್ರಾ ಮಹೋತ್ಸವ ವತಿಯಿಂದ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಭಕ್ತರು ನಿತ್ಯ ಪೂಜೆ ಮಾಡಿ, ದೇವಿಯ ಕೃಪೆಗೆ ಪಾತ್ರರಾಗಬೇಕು. ಮೋಕ್ಷಕ್ಕಾಗಿ ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಮಾನವ ಜನ್ಮ ಶ್ರೇಷ್ಠವಾಗಿದೆ. ಹೀಗಾಗಿ ಕೇವಲ ಸಂಸಾರದ ಜಂಜಾಟದಲ್ಲೇ ಮುಳುಗದೆ, ಪಾರಮಾರ್ಥದ ಒಲುವನ್ನು ಸಹ ಬೆಳೆಸಿಕೊಳ್ಳಬೇಕು. ಶರಣರು, ಸಂತರು, ಪೂಜ್ಯರ ವಾಣಿಗಳನ್ನು ಆಲಿಸಬೇಕು, ತಂದೆ ತಾಯಿಯ ಜೀವಿತವರೆಗೂ ಅವರ ಸೇವೆ ಮಾಡಲೇ ಬೇಕು ಎಂದರು. ತಮ್ಮ ತಮ್ಮ ಹಿತೈಷಿಗಳೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಆರಂಭದಲ್ಲಿ ಬಸವಲಿಂಗ ಅವಧೂತರನ್ನು ಅಲಂಕೃತ ಸಾರೋಟಿನಲ್ಲಿ ಗ್ರಾಮದ ಬಸವೇಶ್ವರ ವೃತ್ತದಿಂದ ಪ್ರಮುಖ ಬೀದಿಗಳ ಮೂಲಕ ಮೆರವಣಿಗೆಯಲ್ಲಿ ಕರೆ ತರಲಾಯಿತು. ಮೆರವಣಿಗೆಯಲ್ಲಿ ಸುತ್ತಮುತ್ತಲಿನ ಗ್ರಾಮಗಳ ಜನ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಗ್ರಾಮದ ಪ್ರಮುಖರಾದ ಶಿವಕುಮಾರ ಸ್ವಾಮಿ, ಶಂಕರ ಬಿರಾದರ, ನಿವೃತ್ತ ಶಿಕ್ಷಕ ಶಂಕರ ಹೂಗಾರ, ಹಣಮಂತ ರಡ್ಡಿ, ತ್ರಿವರ್ಣಸಿಂಗ್, ಸುರೇಶ ರಾಠೋಡ, ಸಂಗಪ್ಪ ಖಂಡರಮಾಳೆ, ಸೋಮಯ್ಯ ಸ್ವಾಮಿ ಕಪಲಾಪುರೆ, ಮಲ್ಲಿಕಾರ್ಜುನ ಪಾಟಿಲ್ ಮೂಗನೂರ, ವಿಜಯಕುಮಾರ ಕಡಗಂಚೆ ಚಿಂಚೋಳಿ ಇದ್ದರು.