ಮಹಾರುದ್ರ ಅಭಿಷೇಕ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಆ.10: ಶ್ರೀಮದ್ ಜಗದ್ಗುರು ಕರಸ್ಥಳ ನಾಗಲಿಂಗ ಸ್ವಾಮಿ ಮಠದಲ್ಲಿ ಲೋಕ ಕಲ್ಯಾಣ ಅತೃಪ್ತಿ ಗಾಗಿ ಮಹಾ ರುದ್ರ ಅಭಿಷೇಕ ಹಾಗೂ ಶಿವನಾಮ ಸಂಕೀರ್ತನೆ(ಭಜನೆ) ಕಾರ್ಯಕ್ರಮ‌ ನಡೆಯಿತು.
ತಾಲ್ಲೂಕಿನ ಉಪ್ಪರಹೊಸಳ್ಳಿ ಗ್ರಾಮದಲ್ಲಿ  ಸಾಂಭಮೂರ್ತಿ ಸ್ವಾಮಿ, ನಾಗಲಿಂಗ ಸ್ವಾಮಿ, ಚನ್ನಯ್ಯ ಮಹಾಸ್ವಾಮಿ, ಅಯ್ಯಂದ್ರ ಸ್ವಾಮಿಗಳ ದಿವ್ಯ ಸಾನಿದ್ಯದಲ್ಲಿ ಎರಡು ದಿನಗಳ ಕಾಲ ವಿಶೇಷ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಸುರೇಂದ್ರ ಸ್ವಾಮಿ ತಿಳಿಸಿದರು.