
ಮುಂಬೈ,ಜು.23- ದೇಶದ ವಿವಿಧ ಭಾಗಗಳಲ್ಲಿ ಸುರಿಯುತ್ತಿರುವ ಬಾರಿ ಮಳೆಯಿಂದ ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಇರ್ಶಲ್ವಾಡಿ ಬುಡಕಟ್ಟು ಕುಗ್ರಾಮದಲ್ಲಿ ಭೂಕುಸಿತದಿಂದ ಸತ್ತರವರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ.78 ಕ್ಕೂ ಹೆಚ್ಚು ಜನರು ಇನ್ನೂ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಸ್ಥಳದಲ್ಲಿ ಪರಿಹಾರ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈ ನಡುವೆ ಮಹಾರಾಷ್ಟ್ರದ ಪಾಲ್ಘರ್, ಥಾಣೆ, ರಾಯಗಡ್, ರತ್ನಾಗಿರಿ ಮತ್ತು ಸಿಂಧುದುರ್ಗ ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್’ ಮತ್ತು ಮುಂಬೈಗೆ ಹವಾಮಾನ ಇಲಾಖೆ ‘ಯೆಲ್ಲೋ ಅಲರ್ಟ್’ ನೀಡಿದ್ದು ಮತ್ತೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.ಮುಖ್ಯಮಂತ್ರಿ ಏಕನಾಥ್ ಶಿಂಧೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ನಿರಂತರ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದಾರೆ.ಭೂಕುಸಿತದಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳನ್ನು ಮುಖ್ಯಮಂತ್ರಿಗಳು ದತ್ತು ಪಡೆಯಲಿದ್ದಾರೆ ಎಂದು ಶಿವಸೇನೆ ಘೋಷಿಸಿದೆ.

ಗುಜರಾತ್ ನಲ್ಲಿ ಚಂಡಮಾರುತ ಭೀತಿ:ಹಲವೆಡೆ ಕಟ್ಟೆಚ್ಚರ
ಉತ್ತರ ಭಾರತದ ವಿವಿಧ ಭಾಗಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ವಿವಿಧ ಜಿಲ್ಲೆಗಳಲ್ಲಿ ಚಂಡಮಾರುತದ ಭೀತಿ ಎದುರಾಗಿದ್ದು ಹಲವೆಡೆ ಕಟ್ಟೆಚ್ಚರ ವಿಧಿಸಿಲಾಗಿದೆ.ನಾಳೆಯವರೆಗೆ ವಿವಿಧ ಭಾಗಗಳಲ್ಲಿ ರೆಡ್ ,ಆರಂಜ್, ಯಲ್ಲೋ ಎಚ್ಚರಿಕೆ ನೀಡಿದ್ದು ಜನರು ಸಮಸ್ಯೆಗೆ ಸಿಲುಕುವಂತಾಗಿದೆ. ದಕ್ಷಿಣ ಗುಜರಾತ್ ನಲ್ಲಿ ಚಂಡಮಾರುತ ಭೀತಿ ಎದುರಾಗಿದೆ.ಗುಜರಾತ್ ನ ವಲ್ಸಾದ್, ಭಾವನಗರ, ದೇವಭೂಮಿ ದ್ವಾರಕಾ, ದಮನ್ ಮತ್ತು ದಾದ್ರಾ ನಗರ ಹವೇಲಿಗೆ ‘ರೆಡ್ ಅಲರ್ಟ್’ ಮತ್ತು ಅಹಮದಾಬಾದ್, ಆನಂದ್, ಭರುಚ್, ಬನಸ್ಕಾಂತ, ಸಬರ್ಕಾಂತ, ಜಮ್‌ನಗರ, ಅಮ್ರೇಲಿರ್ ಮತ್ತು ಭಾರೀ ಮಳೆಗಾಗಿ ‘ಆರೆಂಜ್ ಅಲರ್ಟ್’ ನೀಡಿದೆ.ಜೊತೆಗೆ ಮುಂದಿನ ಎರಡು ದಿನಗಳ ಕಾಲ ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಸೂಚಿಸಿದೆ.
ಎಡೆಬಿಡದೆ ಸುರಿದ ಮಳೆಯಿಂದಾಗಿ ವಾಹನಗಳ ಇಂಜಿನ್‌ಗೆ ನೀರು ನುಗ್ಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.. ಗುಜರಾತ್‌ನ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಂಚಾರ ಸ್ತಬ್ಧಗೊಂಡಿತು, ಆದರೆ ನಂತರ ಅದನ್ನು ಪುನರಾರಂಭಿಸಲಾಗಿದೆ..ನವಸಾರಿ ಮತ್ತು ಜುನಾಗಢ್ ಹೆಚ್ಚು ಹಾನಿಗೊಳಗಾದ ಜಿಲ್ಲೆಗಳಾಗಿ ಉಳಿದಿವೆ. ಜುನಾಗಢ ನಗರದಲ್ಲಿ ಹತ್ತಾರು ವಾಹನಗಳು ಹಾಗೂ ಜಾನುವಾರುಗಳು ರಭಸವಾಗಿ ಹರಿಯುವ ನೀರಿನಲ್ಲಿ ಕೊಚ್ಚಿ ಹೋಗಿವೆ.

ಅಮಿತ್ ಶಾ ಪರೀಲನೆ:
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೊಂದಿಗೆ ಪರಿಸ್ಥಿತಿ ಅವಲೋಕನ ನಡೆಸಿದರು.