ಮಹಾರಾಷ್ಟ್ರ: 5 ಹಂತದಲ್ಲಿ ಅನ್ ಲಾಕ್ : ನಾಳೆಯಿಂದ ಜಾರಿ

ಮುಂಬೈ,ಜೂ. 3- ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಸಂಖ್ಯೆ ಗಣನೀಯವಾಗಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಐದು ಹಂತಗಳಲ್ಲಿ ಅನ್ ಲಾಕ್ ಘೋಷಣೆ ಮಾಡಿದ್ದು ನಾಳೆಯಿಂದಲೇ ಜಾರಿಗೆ ಬರಲಿದೆ.

ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆಯ ಆಧಾರದ ಮೇಲೆ ಒಂದರಿಂದ ಐದು ಹಂತಗಳಲ್ಲಿ ಅನ್ ಲಾಕ್ ಜಾರಿ ಮಾಡಲಾಗಿದೆ.

ಥಾಣೆ ಸೇರಿದಂತೆ ಪಾಸಿಟಿವ್ ಪ್ರಕರಣ ಶೇ. 5 ಕ್ಕೂ ಕಡಿಮೆ ಇರುವ ಜಿಲ್ಲೆಗಳಲ್ಲಿ ಹಂತ- 1 ಅನ್ ಲಾಕ್ ಘೋಷಣೆ ಮಾಡಲಾಗಿದೆ. ಈ 18 ಜಿಲ್ಲೆಗಳಲ್ಲಿ ನಾಳೆಯಿಂದ ಸಂಪೂರ್ಣ ಅನ್ ಲಾಕ್ ಅಗಲಿದೆ.

ಎರಡನೇ ಹಂತದಲ್ಲಿ ಮುಂಬೈ ಇದೆ. ಸ್ಥಳೀಯ ರೈಲು ಸೇವೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಈ ಮುಂಚೆ ಇರುವ ನಿಯಮಗಳು ಮುಂದುವರೆಯಲಿವೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮಹಾರಾಷ್ಟ್ರದ ಸಚಿವ ವಿಜಯ್ ವಾಡೇತಿಟ್ಟಿವಾರ್ ಅವರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪಾಸಿಟಿವ್ ಪ್ರಕರಣ ಆಮ್ಲಜನಕ ಸಮಸ್ಯೆ ಹಾಸಿಗೆಗಳ ಕೊರತೆ ಸೇರಿದಂತೆ ಐದು ಹಂತಗಳಲ್ಲಿ ಅನ್ ಲಾಕ್ ಮಾಡಲಾಗಿದೆ ಎಂದರು

ಹಂತ -1- ಸಂಪೂರ್ಣ ಅನ್ ಲಾಕ್

ಪಾಸಿಟಿವ್ ಪ್ರಕರಣ ಶೇಕಡ ಐವತ್ತಕ್ಕೂ ಕಡಿಮೆ ಇರುವ ಜಿಲ್ಲೆಗಳನ್ನು ಅಂತ ಒಂದು ಎಂದು ಘೋಷಿಸಲಾಗಿದೆ
ರಾಜ್ಯದ 18 ಜಿಲ್ಲೆಗಳಲ್ಲಿ ಸಂಪೂರ್ಣ ಅನ್ ಲಾಕ್ ಮಾಡಲಾಗಿದೆ.

ಹಂತ-2- ಶೇ 50ಕ್ಕೆ ಅವಕಾಶ:

ಶೇಕಡಾ ಐವತ್ತರ ಸಾಮರ್ಥ್ಯದಲ್ಲಿ ,ವ್ಯಾಯಾಮಶಾಲೆ, ಸಲೂನ್,ಬ್ಯೂಟಿ‌ ಪಾರ್ಲರ್ ಗಳು ಹಂತ-2 ರ ಜಿಲ್ಲೆಗಳಲ್ಲಿ ಮುಂದುವರಿಯಲಿದೆ.

ಈ ಜಿಲ್ಲೆಯಲ್ಲಿ 144 ನಿಷೇದಾರ್ಜೆ ಜಾರಿಯಲ್ಲಿರಲಿದೆ

ಸೀಮಿತ ವಿನಾಯತಿ:

ಸೋಂಕು ಮತ್ತು ಸಕ್ರಿಯ ಪ್ರಕರಣಗಳು ಹೆಚ್ಚಿರುವ ಜಿಲ್ಲೆಗಳಲ್ಲಿ ಭಾಗಶಃ ವಿನಾಯಿತಿ ನೀಡಲಾಗಿದೆ. ಈ ಜಿಲ್ಲೆಗಳಲ್ಲಿ ಕೆಲವೇ ಕೆಲವು ಚಟುವಟಿಕೆಗಳನ್ನು ಮಾಡಲು ಮಾತ್ರ ಸರಕಾರ ಅವಕಾಶ ಮಾಡಿಕೊಟ್ಟಿದೆ ಎಂದು ಅವರು ತಿಳಿಸಿದ್ದಾರೆ.

ಕಳೆದ ಏಪ್ರಿಲ್ ತಿಂಗಳಿನಿಂದ ಮಹಾರಾಷ್ಟ್ರದಲ್ಲಿ ಲಾಕ್ ಡೌನ್ ಮಾದರಿಯ ಕಟ್ಟುನಿಟ್ಟಿನ ನಿರ್ಬಂದ ಮುಂದುವರಿಸಲಾಗಿತ್ತು.

ರಾಜ್ಯದಲ್ಲಿ ಕೊರೊನಾ ಸೋಂಕು ಸಂಖ್ಯೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವ ತನಕ ನಿರ್ಬಂಧಗಳು ಮುಂದುವರಿಯಲಿವೆ ಜನರು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸರ್ಕಾರದ ಜತೆ ಕೈಜೋಡಿಸಬೇಕು ಎಂದು ಅವರು ತಿಳಿಸಿದ್ದಾರೆ