ಮಹಾರಾಷ್ಟ್ರ ಸಚಿವಾಲಯಕ್ಕೆ‌ ನಿರ್ಬಂದ: ಪಾಸ್ ಇರುವರಿಗಷ್ಟೇ ಅವಕಾಶ

ಮುಂಬೈ,ಸೆ.27- ಮಹಾರಾಷ್ಟ್ರದ ಸಚಿವಾಲಯಕ್ಕೆ ಭೇಟಿ ನೀಡುವ ಜನರು ತಮ್ಮ ಪ್ರವೇಶ ಪಾಸ್‍ಗಳಲ್ಲಿ ನಮೂದಿಸಿರುವ ವಿಭಾಗಗಳನ್ನು ಹೊರತುಪಡಿಸಿ ಬೇರೆ ಇಲಾಖೆಗಳು ಅಥವಾ ಮಹಡಿಗಳಲ್ಲಿ ತಿರುಗಾಡಲು ಅನುಮತಿ ನಿರ್ಬಂಧಿಸಿ ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಸರ್ಕಾರದ ಆದೇಶ ಹೊರಡಿಸಿದೆ.

ನಿನ್ನೆ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಒಂದು ದಿನದ ನಂತರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ, ಈ ಸಂಬಂಧ ಮಹಾರಾಷ್ಟ್ರ ಸಚಿವಾಲಯ ಆದೇಶ ಹೊರಡಿಸಿದೆ.

ವಿಧಾನಸೌದ ಅಥವಾ ಸಚಿವಾಲಯಕ್ಕೆ ಭೇಟಿ ನೀಡುವ ಸಂದರ್ಶಕರು ಎಲ್ಲೆಂದರಲ್ಲಿ ಇನ್ನು ಮುಂದೆ ತಿರುಗಾಡುವ ಹಾಗಿಲ್ಲ. ತಮಗೆ ನಿಗಧಿ ಪಡಿಸಿರುವ ಜಾಗಗಳಿಗೆ ಮಾತ್ರ ತೆರಳುವಂತೆ ಸೂಚಿಸಲಾಗಿದೆ.

ಪ್ರತಿಭಟನೆ ಮತ್ತು ಆತ್ಮಹತ್ಯೆಯ ಪ್ರಯತ್ನಗಳನ್ನು ತಡೆಯುವ ಉದ್ದೇಶದಿಂದ ಬಣ್ಣ-ಕೋಡೆಡ್ ಮತ್ತು ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ಪಾಸ್‍ಗಳನ್ನು ಮತ್ತು ಪೂರ್ವ-ಬುಕ್ ಟೈಮ್ ಸ್ಲಾಟ್‍ಗಳನ್ನು ನೀಡಲು ನಿರ್ಧರಿಸಿದೆ.

ಅಧಿಕೃತ ಅಂಕಿಅಂಶಗಳ ಪ್ರಕಾರ ಸಚಿವವಾಲಯಕ್ಕ ನಿತ್ಯ ಸರಾಸರಿ ಸಂಖ್ಯೆ 3,500 ಸಚಿವ ಸಂಪುಟ ಸಭೆ ನಡೆಯುವ ಸಮಯದಲ್ಲಿ 5,000 ಮಂದಿ ಬರುತ್ತಾರೆ. ಈ ಹಿನ್ನೆಲೆಯಲ್ಲಿ ಜನರ ಸುರಕ್ಷತೆ ಮತ್ತು ಭದ್ರತೆಗೆ ಒತ್ತು ನೀಡಲು ಸರ್ಕಾರ ಈ ಕ್ರಮ ಕೈಗೊಂಡಿದೆ.

ಸಚಿವಾಲಯ ಕಟ್ಟಡಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡುವುದರಿಂದ ದೈನಂದಿನ ಆಡಳಿತ ಕಾರ್ಯಕ್ಕೆ ತೊಂದರೆಯಾಗುತ್ತದೆ ಎಂದು ರಾಜ್ಯ ಸರ್ಕಾರ ಆದೇಶದಲ್ಲಿ ತಿಳಿಸಿದೆ.

ಸಚಿವಾಲಯದ ಭದ್ರತೆಯ ಉಪ ಪೆÇಲೀಸ್ ಆಯುಕ್ತರಿಗೆ ದಿನಕ್ಕೆ ಎಷ್ಟು ಪ್ರವಾಸಿಗರನ್ನು ಅನುಮತಿಸಲಾಗಿದೆ ಎಂಬುದರ ಕುರಿತು ಒಂದು ತಿಂಗಳೊಳಗೆ ವರದಿಯನ್ನು ಸಲ್ಲಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.