ಮಹಾರಾಷ್ಟ್ರ-ಕೇರಳದಿಂದ ಆಗಮಿಸುವವರು ಕಡ್ಡಾಯ ಕೋವಿಡ್ ೧೯ ಪರೀಕ್ಷೆ ಮಾಡಿಸಿ


ಉಡುಪಿ, ಎ.೧೯- ಜಿಲ್ಲೆಯಲ್ಲಿ ಕೋವಿಡ್-೧೯ ಎರಡನೇ ಅಲೆ ತೀವ್ರಗೊಳ್ಳು ತ್ತಿದ್ದು, ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಆದುದರಿಂದ ಮಹಾ ರಾಷ್ಟ್ರ ಮತ್ತು ಕೇರಳದಿಂದ ಜಿಲ್ಲೆಗೆ ಆಗಮಿಸುವವರು ಕಡ್ಡಾಯವಾಗಿ ಕೋವಿಡ್ -೧೯ ಪರೀಕ್ಷೆಯನ್ನು ಮಾಡಿಸಿ ಕೊಳ್ಳಬೇಕು. ತಪ್ಪಿದಲ್ಲಿ ಅಂಥವರು ಯಾರ ಮನೆಗೆ ಬಂದಿದ್ದಾರೆಯೋ ಅವರ ಮೇಲೆ ಕಾನೂನು ಕ್ರಮ ಜರಗಿಸು ವುದು ಅನಿವಾರ್ಯವಾದಿತು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹಬ್ಬ ಹರಿದಿನಗಳ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮತ್ತು ಕೇರಳದಿಂದ ಸಾರ್ವಜನಿಕರು ಜಿಲ್ಲೆಗೆ ಆಗಮಿಸಿದ್ದು, ಅವರು ಕಡ್ಡಾಯವಾಗಿ ಕೋವಿಡ್-೧೯ ನೆಗೆಟಿವ್ ವರದಿಯೊಂದಿಗೆ ಬರಬೇಕಾಗಿದೆ. ಆದರೆ ಕೋವಿಡ್ -೧೯ ನೆಗೆಟಿವ್ ವರದಿ ಇಲ್ಲದೆ ಬರುವುದನ್ನು ಗಮನಿಸಲಾಗಿದೆ. ಹಾಗಾಗಿ ಕೋವಿಡ್-೧೯ ನೆಗೆಟಿವ್ ವರದಿ ಇಲ್ಲದೆ ಮಹಾರಾಷ್ಟ್ರ ಮತ್ತು ಕೇರಳದಿಂದ ಆಗಮಿಸಿದವರು ತಕ್ಷಣ ಕೋವಿಡ್-೧೯ ಪರೀಕ್ಷೆಯನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ. ಅದೇ ರೀತಿ ಬೆಂಗಳೂರಿನಿಂದಲೂ ದೊಡ್ಡ ಸಂಖ್ಯೆಯಲ್ಲಿ ಜನರು ಉಡುಪಿ ಜಿಲ್ಲೆಗೆ ಆಗಮಿಸುತ್ತಿದ್ದು, ಅವರೆಲ್ಲರೂ ತಮ್ಮ ಮನೆಯವರ, ಕುಟುಂಬಸ್ಥರ ಮತ್ತು ಊರಿನ ಜನರ ಆರೋಗ್ಯದ ದೃಷ್ಠಿಯಿಂದ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ ಎಂದು ಜಿಲ್ಲಾಧಿಕಾರಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕೋವಿಡ್ ಬಗ್ಗೆ ಸಾರ್ವಜನಿಕರು ಜಾಗೃತರಾಗುವುದು ಅವಶ್ಯಕವಾಗಿದೆ. ಸೋಂಕನ್ನು ಹರಡುವುದನ್ನು ತಡೆಗಟ್ಟಿದಿದ್ದಲ್ಲಿ ಬಾರಿ ಸಂಕಷ್ಟವನ್ನು ಎದುರಿಸಬೇಕಾ ಗಬಹುದು. ಆದುದರಿಂದ ಅನಗತ್ಯವಾಗಿ ಓಡಾಡುವುದನ್ನು, ಗುಂಪು ಸೇರು ವುದನ್ನು ಮಾಡಬಾರದು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾ ಡುವುದು, ಸ್ಯಾನಿಟೈಜರ್ ಬಳಸುವುದು ಮುಂತಾದ ಕೋವಿಡ್-೧೯ ನಿಯಮ ಗಳನು ಕಡ್ಡಾಯವಾಗಿ ಪಾಲಿಸಬೇಕು. ಕೋವಿಡ್-೧೯ ಸೋಂಕಿನ ಎರಡನೆ ಅಲೆಯನ್ನು ತಪ್ಪಿಸಲು, ಸಮರ್ಪಕವಾಗಿ ನಿಭಾಯಿಸಲು ಜಿಲ್ಲೆಯ ನಾಗರಿಕರ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ವಿನಂತಿಸಿಕೊಂಡಿದ್ದಾರೆ.