ಮಹಾರಾಷ್ಟ್ರ : ಐಪಿಎಲ್ ಗೆ ನೈಟ್ ಕರ್ಫ್ಯೂ ಭೀತಿ

ಮುಂಬೈ, ಮಾ 29-ಕ್ರಿಕೆಟ್ ಪ್ರಿಯರು ಕಾತುರದಿಂದ ಕಾಯುತ್ತಿರುವ ಬಹು ನಿರೀಕ್ಷಿತ ಐಪಿಎಲ್ ಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಐಪಿಎಲ್ ನಡೆಯುವ ಮುಂಬೈ ನಗರದಲ್ಲಿ ನೈಟ್ ಕರ್ಫ್ಯೂ ಜಾರಿಯಲ್ಲಿರುದೆ ಇದರಿಂದಾಗಿ ಐಪಿಎಲ್‍ಗೆ ಕರಿ ಛಾಯೆ ಆವರಿಸಿದೆ.
ಈಗಾಗಲೇ ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ಮಹಾರಾಷ್ಟ್ರ ಸರ್ಕಾರ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಿದೆ. ಇದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಾಗಳಿಗೆ ತೊಡಕಾಗುವ ಭೀತಿ ಎದುರಾಗಿದೆ.
ಮಹಾರಾಷ್ಟ್ರದಲ್ಲಿ ಮಾಡಿರುವ ನೈಟ್ ಕರ್ಫ್ಯೂ ಪ್ರಕಾರ ರಾತ್ರಿ 8 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಜನಸಂಚಾರವನ್ನು ನಿಷೇಧಿಸಿದೆ.
ಆದರೆ ವಾಂಖೆಂಡೆ ಕ್ರೀಡಾಂಗಣದಲ್ಲಿ ಏಪ್ರಿಲ್ 10 ರಿಂದ ಪಂದ್ಯಾಗಳು ಆರಂಭವಾಗಲಿದ್ದು ಏಪ್ರಿಲ್ 25ರ ವರೆಗೆ ಒಟ್ಟು 10 ಲೀಗ್ ಪಂದ್ಯಗಖು ನಡೆಯಲಿವೆ. ಈ ಪಂದ್ಯಗಳಲ್ಲಿ
ಒಂದು ಪಂದ್ಯ ಮಧ್ಯಾಹ್ನ 3.30 ಗಂಟೆಗೆ ಪ್ರಾರಂಭವಾದರೆ ಉಳಿದೆಲ್ಲಾ ಪಂದ್ಯಗಳು ರಾತ್ರಿ 7.30 ಗಂಟೆಯಿಂದ ಪ್ರಾರಂಭವಾಗಿ ತಡರಾತ್ರಿ ವರೆಗೆ ನಡೆಯಲಿದೆ.
ಈ ವೇಳೆ ಆಟಗಾರರು, ತರಬೇತಿ ಸಿಬ್ಬಂದಿ, ಮೈದಾನದ ಸಿಬ್ಬಂದಿ, ಪಂದ್ಯದ ಪ್ರಸಾರ ವಾಹಿನಿಗಳ ಸಿಬ್ಬಂದಿ ಹೀಗೆ ಹಲವು ಜನ ನೈಟ್ ಕರ್ಫ್ಯೂ ನ ಪರಿಸ್ಥಿತಿ ಸಿಲುಕವಬೇಕಾಗಿದೆ.
ಈಗಾಗಲೇ ಐಪಿಎಲ್ ಪಂದ್ಯಳಿಗೆ ಪ್ರೇಕ್ಷಕರಿಗೆ ನಿಷೇಧ ಹೇರಲಾಗಿದೆ. ಆದರೆ ಪಂದ್ಯ
ನಡೆಯುವ ವೇಳೆ ಆಟಗಾರರು ಮತ್ತು ಮೈದಾನದ ಇತರ ಸಿಬ್ಬಂದಿ ಈ ನೈಟ್ ನೈಟ್ ಕರ್ಫ್ಯೂ ನಿಂದ ಹೇಗೆ ಪಾರಾಗುವುದು ಎಂಬ ಚಿಂತೆಯಲ್ಲಿದ್ದರೆ, ಇತ್ತ ಮಹಾರಾಷ್ಟ್ರ ಸರ್ಕಾರ ನೈಟ್ ಕರ್ಫ್ಯೂ ಎಷ್ಟುದಿನ ಇರಲಿದೆ ಎಂಬುದನ್ನು ತಿಳಿಸಿಲ್ಲ. ಹಾಗಾಗಿ ಬಿಸಿಸಿಐ ಮಹಾರಾಷ್ಟ್ರ ಸರ್ಕಾರದ ಜತೆ ಚರ್ಚಿಸಲು ಮುಂದಾಗಿದೆ.