ಮಹಾರಾಷ್ಟ್ರದ ಅಕ್ಕಲಕೋಟ ಬಳಿ ಲಾರಿ ಇಂಡಿಕಾ ನಡುವೆ ಡಿಕ್ಕಿ ಸ್ಥಳದಲ್ಲಿ ಮೂವರು ಸಾವು ಹಲವರು ಗಾಯ

ಆಳಂದ :ನ.24: ಲಾರಿ ಮತ್ತು ಇಂಡಿಕಾ ಕಾರಿನ ಮಧ್ಯೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೂವರು ಮೃತಪಟ್ಟಿದ್ದು, 4 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರು ಮತ್ತು ಗಾಯಾಳುಗಳು ಕರ್ನಾಟಕದ ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನವರು ಎಂದು ಹೇಳಲಾಗುತ್ತಿದೆ.

ಕರ್ನಾಟಕದ ಶಹಬಾದವಾಡಿಯಿಂದ ಸೊಲ್ಲಾಪುರಕ್ಕೆ ಫರಶಿ ತುಂಬಿದ್ದ ಟ್ರಕ್ ಅಕ್ಕಲಕೋಟ ತಾಲೂಕಿನ ಶಿರಸಿ ಎಂಬಲ್ಲಿ ಎದುರಿನಿಂದ ಬರುತ್ತಿದ್ದ ಇಂಡಿಕಾ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೂವರು ಮೃತಪಟ್ಟಿದ್ದು, 4 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಕ್ಕಲಕೋಟ-ವಾಗದರಿ ರಸ್ತೆಯಲ್ಲಿ ಶಿರಸಿ ಮತ್ತು ಶಿರವಾಳ ನಡುವೆ ಲಾರಿ ಮತ್ತು ಇಂಡಿಕಾ ಕಾರ್ ಮಧ್ಯೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕಾರು ಚಾಲಕ ಹೈದರ್ ಅಲಿ ಖುತ್ಬುದ್ದೀನ್ ಮುಲ್ಲಾ (40), ಅಯೇಜಾ ಇಮಾಮಸಾಬ್ ಕಡ್ಲಾಸ್ಕರ್ (2) ಮತ್ತು ಸಲ್ಮಾ ಖಾಲಿದ್ ಲಷ್ಕರಿ (48) ಈ ಮೂವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಜುಬೇರ್ ಖಾಲಿದ್ ಲಷ್ಕರಿ (22), ಖಾಲಿದ್ ಲಷ್ಕರಿ (55), ಬಶೀರ ಅರಬ್ ಸೌದಾಗರ್ (35) ಹಾಗೂ ಉಮೇಮಾ ನಗರೆ (33) ಗಂಭೀರವಾಗಿ ಗಾಯಗೊಂಡಿದ್ದು, ಅಕ್ಕಲಕೋಟ ನಗರದ ಶ್ರೀ ಸ್ವಾಮಿ ಸಮರ್ಥ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೆಲ್ಲರೂ ಕೂಡ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಹೇಳಲಾಗು.

ಅಕ್ಕಲಕೋಟ ತಾಲೂಕಿನಲ್ಲಿ ಈ ವರ್ಷ ಸಂಭವಿಸಿದ ಅತಿ ದೊಡ್ಡ ಅಪಘಾತವಾಗಿದ್ದು, ನೋಡುಗರ ನೂಕುನುಗ್ಗಲು ಹೆಚ್ಚಾಯಿತು. ಉಪವಿಭಾಗಿಯ ಪೊಲೀಸ್ ಅಧಿಕಾರಿ ರಾಜೇಂದ್ರ ಸಿಂಗ್ ಗೌರ್, ಉತ್ತರ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಜಿತೇಂದ್ರ ಕೋಳಿ, ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಚಂದ್ರಕಾಂತ್ ಪೂಜಾರಿ ಮತ್ತು ಪೊಲೀಸ್ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.  

ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಅಕ್ಕಲಕೋಟ ಗ್ರಾಮಾಂತರ ಆಸ್ಪತ್ರೆಗೆ ತರಲಾಗಿದೆ. ಮೃತರ ಗುರುತು ಪತ್ತೆಯಾಗದ ಕಾರಣ ಪ್ರಕರಣ ದಾಖಲಿಸಲು ಪೊಲೀಸರು ಪರದಾಡುವಂತಾಗಿತ್ತು. ಸಂಬಂಧಿಕರು ತಡವಾಗಿ ಬಂದಿದ್ದಕ್ಕಾಗಿ ಲಾರಿ ಚಾಲಕನ ವಿರುದ್ಧ ಅಕ್ಕಲಕೋಟ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.