ಮಹಾರಾಷ್ಟ್ರದಲ್ಲಿ ಜಲಾಶಯಗಳು ಭರ್ತಿ : ಭೀಮಾನದಿಗೆ ಪ್ರವಾಹ ಭೀತಿ

ಅಫಜಲಪುರ:ಜು.18: ಮುಂಗಾರು ಕೊಂಚ ತಡವಾಗಿ ಆದರೂ ಈಗ ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಮಳೆಯಾಗುತ್ತಿದೆ.

ಹೀಗಾಗಿ ಅಲ್ಲಿನ ಜಲಾಶಯಗಳು ಭರ್ತಿಯಾಗುತ್ತಿವೆ. ಯಾವುದೇ ಸಂದರ್ಭದಲ್ಲೂ ಅಲ್ಲಿನ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ಭೀಮಾ ನದಿಗೆ ಬಿಡಬಹುದು ಆದ್ದರಿಂದ ನಾವು ಪ್ರವಾಹ ಪರಿಸ್ಥಿತಿ ಎದುರಿಸಲು ಸಿದ್ದತೆ ಮಾಡಿಕೊಳ್ಳಬೇಕಿದೆ ಎಂದು ಶಾಸಕ ಎಂ.ವೈ ಪಾಟೀಲ್ ಹೇಳಿದರು.

ಅಫಜಲಪುರ ಪಟ್ಟಣದ ತಾ.ಪಂ ಸಭಾಂಗಣದಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ತಾಲೂಕಿನಲ್ಲಿ ಮಳೆ ಕೊರತೆಯಿಂದ ಮುಂಗಾರು ಬಿತ್ತನೆ ಬಹಳ ಕುಂಠಿತಗೊಂಡಿದೆ. ಜುಲೈ ತಿಂಗಳಲ್ಲಿ ಸ್ವಲ್ಪ ಪ್ರಮಾಣದ ಮಳೆಯಾಗಿದ್ದರಿಂದ ರೈತರು ಬಿತ್ತನೆ ಕೆಲಸ ಮಾಡುತ್ತಿದ್ದಾರೆ.ಜಿಟಿ ಜಿಟಿ ಮಳೆಯಿಂದಾಗಿ ತಾಲೂಕಿನ ಅನೇಕ ಗ್ರಾಮಗಳಲ್ಲಿ ಮನೆಗಳು ನೆಲಕ್ಕೂರುಳಿವೆ, ಮನೆಗಳು ಬಿದ್ದ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ವರದಿ ಸಲ್ಲಿಸಿ, ನದಿ ಪಾತ್ರದಲ್ಲಿರುವ ಗ್ರಾಮಗಳ ಜನ ಸುರಕ್ಷಿತವಾಗಿರುವಂತೆ ಈಗಿನಿಂದಲೇ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.ಈ ನಿಟ್ಟಿನಲ್ಲಿ ಸಿದ್ದತೆಗಳು ತ್ವರಿತಗತಿಯಲ್ಲಿ ಆಗಬೇಕಾಗಿದೆ ಎಂದರು.
ಇನ್ನೂ ನಿರಂತರ ಮಳೆಯಿಂದಾಗಿ ತಾಲೂಕಿನ ಅನೇಕ ಗ್ರಾಮಗಳಲ್ಲಿ ಸರ್ಕಾರಿ ಶಾಲೆಗಳ ಮೇಲ್ಛಾವಣಿಗಳು ಶಿಥಿಲಾವಸ್ಥೆಯಲ್ಲಿದ್ದರೆ ಬಿಇಒ ಅವರು ಕೂಡಲೇ ನಮಗೆ ಮಾಹಿತಿ ನೀಡಿ, ಮಳೆಯಿಂದ ಯಾವ ಹಳ್ಳಿಗಳ ರಸ್ತೆಗಳು ಹಾಳಾಗಿವೆ ಅವುಗಳ ಕುರಿತು ಮಾಹಿತಿ ಕೊಡಿ ಕೂಡಲೇ ರಸ್ತೆ ಸರಿಪಡಿಸುವ ಕೆಲಸ ಮಾಡಿಸುತ್ತೇನೆ ಎಂದ ಅವರು ತಾಲೂಕಿನಲ್ಲಿ ಮುಂಗಾರು ಬಿತ್ತನೆ ಸಮರ್ಪಕವಾಗಿ ಆಗಿಲ್ಲ. ರೈತರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಕೃಷಿ ಇಲಾಖೆಯವರು ಕೂಡಲೇ ಬಿತ್ತನೆ, ಬೆಳೆ ಹಾನಿ ಹಾಗೂ ರೈತರ ಸಂಕಷ್ಟಗಳ ಕುರಿತು ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಿ ಎಂದು ಸೂಚಿಸಿದರು.ಕೃಷಿ ಇಲಾಖೆ ಅಧಿಕಾರಿ ಎಸ್.ಎಚ್ ಗಡಗಿಮನಿ ಮಾತನಾಡಿ ಜೂನ್ ತಿಂಗಳಲ್ಲಿ ವಾಡಿಕೆಗಿಂತ ತೀರಾ ಕಡಿಮೆ ಮಳೆಯಾಗಿದ್ದರಿಂದ ಬಿತ್ತನೆ ಕಾರ್ಯ ವಿಳಂಬವಾಗಿದೆ. ಜುಲೈ ತಿಂಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು ರೈತರು ಬಿತ್ತನೆಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಹೆಸರು, ಸೋಯಾ ಹೊರತು ಪಡಿಸಿ ಹತ್ತಿ, ತೊಗರಿ, ಉದ್ದು ಸೇರಿದಂತೆ ಇನ್ನಿತರ ಮುಂಗಾರು ಹಂಗಾಮಿನ ಬೆಳೆಗಳನ್ನು ಈ ತಿಂಗಳ ಅಂತ್ಯದ ವರೆಗೂ ಬಿತ್ತನೆ ಮಾಡಬಹುದಾಗಿದೆ. ನಮ್ಮ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜದ ದಾಸ್ತಾನು ಇದ್ದು ರೈತರು ರಿಯಾಯಿತಿ ದರದಲ್ಲಿ ಪಡೆದುಕೊಳ್ಳುತ್ತಿದ್ದಾರೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಇದುವರೆಗೆ ಒಟ್ಟು 18.8 ಪ್ರತಿಶತದಷ್ಟು ಮಾತ್ರ ಬಿತ್ತನೆಯಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.ಆರೋಗ್ಯ ಇಲಾಖೆ ಅಧಿಕಾರಿ ಡಾ. ರವಿಕಿರಣ ಮಾತನಾಡಿ ತಾಲೂಕಿನಲ್ಲಿಗ ಒಟ್ಟು 5 ಕೋವಿಡ್ ಕೇ???ಗಳು ದಾಖಲಾಗಿದ್ದು ಈ ಪೈಕಿ ಇಬ್ಬರು ಗುಣಮುಖರಾಗಿದ್ದರಿಂದ ಡಿಸ್ಚಾರ್ಜ ಮಾಡಲಾಗಿದೆ.ಉಳಿದ ಮೂರು ಜನರಿಗೆ ಹೋಮ್ ಐಸೋಲೇಶನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ನಮ್ಮ ಇಲಾಖೆ ಸಿಬ್ಬಂದಿಗಳು,ಆಶಾ ಕಾರ್ಯಕರ್ತೆಯರು ಅವರ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ. ರೋಗ ಹರಡದಂತೆ ನಾವು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ.ಲಸಿಕೆ ಲಭ್ಯವಿದ್ದು ಅವಶ್ಯವಿರುವವರಿಗೆ ಲಸಿಕೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಬಿಇಒ ಮಾರುತಿ ಹುಜರತಿ ಮಾತನಾಡಿ ಪಠ್ಯಪುಸ್ತಕಗಳು ಬಂದಿದ್ದು ಶಾಲೆಗಳಿಗೆ ವಿತರಿಸಲಾಗುತ್ತಿದೆ, ಇನ್ನೂ ಸಮವಸ್ತ್ರಗಳು ಬಂದಿಲ್ಲ, ವಾರದಲ್ಲಿ ಸಮವಸ್ತ್ರ ಬರಲಿದ್ದು ಎಲ್ಲವನ್ನು ಹಂಚಿಕೆ ಮಾಡಲಾಗುತ್ತದೆ. ಮಳೆಗಾಲ ಇರುವುದರಿಂದ ಯಾವ ಶಾಲೆಗಳ ಮೇಲ್ಛಾವಣಿಗಳು ಸೋರಿಕೆಯಾಗುತ್ತವೆ ಎನ್ನುವ ಲೆಕ್ಕವನ್ನು ನೀಡುವುದಾಗಿ ತಿಳಿಸಿದಿರು.ಇನ್ನೂಳಿದಂತೆ ಪಿಆ???ಇ, ಶಿಶು ಅಭಿವೃದ್ದಿ, ಜೇಸ್ಕಾಂ, ಅರಣ್ಯ, ತೋಟಗಾರಿಕೆ, ಆಯುಷ್ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ತಹಸೀಲ್ದಾರ ಸಂಜೀವಕುಮಾರ ದಾಸರ್, ಜಿ.ಪಂ ಯೋಜನಾಧಿಕಾರಿ ಕಿಶೋರಕುಮಾರ ದುಬೆ, ಅಧಿಕಾರಿಗಳಾದ ರಮೇಶ ಪಾಟೀಲ್, ಕೆ.ಎಂ ಕೋಟೆ, ಸರ್ವಜ್ಞ, ಹೊನ್ನೇಶ್, ನಾಗರಾಜ ಕೆ, ರಾಜೇಂದ್ರ ಮರಬ್, ಮೀನಾಕ್ಷಿ ಪಾಟೀಲ್, ಡಾ. ಎಂ.ಬಿ ಪಾಟೀಲ್, ದೇವೀಂದ್ರ ಸಜ್ಜನ್, ಕೆ. ಬಾಲಕೃಷ್ಣ ಸೇರಿದಂತೆ ಅನೇಕರು ಇದ್ದರು.